ಬ್ರೇಕಿಂಗ್ ನ್ಯೂಸ್
13-02-24 07:03 pm Mangalore Correspondent ಕರಾವಳಿ
ಮಂಗಳೂರು, ಫೆ.13: ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಹಿಂದು ಸಂಘಟನೆಗಳು ಮತ್ತು ಶಾಸಕ ವೇದವ್ಯಾಸ ಕಾಮತ್ ಪ್ರತಿಭಟನೆ ನಡೆಸಿದ್ದು ಭಾರೀ ಸುದ್ದಿಯಾಗುತ್ತಲೇ ಸದ್ರಿ ಶಾಲೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದಾರೆ.
ಮಾಜಿ ಸಚಿವರಾದ ಬಿ.ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ನೇತೃತ್ವದ ಜಿಲ್ಲಾ ಕಾಂಗ್ರೆಸ್ ನಿಯೋಗ, ಜೆರೋಸಾ ಶಿಕ್ಷಣ ಸಂಸ್ಥೆಗೆ ತೆರಳಿ ಆಡಳಿತ ಮಂಡಳಿ ಜೊತೆಗೆ ಮಾತುಕತೆ ನಡೆಸಿದೆ.
ಭೇಟಿ ಬಳಿಕ ಮಾಜಿ ಸಚಿವ ರಮಾನಾಥ ರೈ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಜೆರೋಸಾ ವಿದ್ಯಾಸಂಸ್ಥೆಯ ಘಟನೆ ಬಗ್ಗೆ ದೊಡ್ಡ ಪ್ರಚಾರ ಆಗಿದೆ. ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಸ್ವಲ್ಪ ತಪ್ಪಾಗಿರುವಂತೆ ಕಾಣುತ್ತಿದೆ. ಆದರೆ, ಇದರ ಸತ್ಯಾಸತ್ಯತೆ ವಿಮರ್ಶೆಯನ್ನು ನಾವು ಮಾಡಬೇಕಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಯಬೇಕು ಅನ್ನೋದು ನಮ್ಮ ಆಶಯ. ಕೆಲವರು ಪ್ರಚೋದನೆ ಮಾಡಬಹುದು, ಆದರೆ ನಾವು ಆ ಕೂಟದಲ್ಲಿ ಇಲ್ಲ. ಇವತ್ತು ಸಂಸ್ಥೆಯ ಮುಖ್ಯಸ್ಥರ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ.
ಸರ್ಕಾರ ಇದರ ಬಗ್ಗೆ ಒಂದು ಸತ್ಯಶೋಧನ ಸಮಿತಿ ಮಾಡಬೇಕು. ಇದು ಘರ್ಷಣೆಗೆ ಕಾರಣ ಆಗಬಾರದು, ಅಹಿತಕರ ಘಟನೆ ಆಗಬಾರದು. ಕ್ರೈಸ್ತ ಆಡಳಿತ ಮಂಡಳಿ ಇದೆ, ಆದರೆ ಸಮಸ್ಯೆ ಸರಿಪಡಿಸದ ಶಿಕ್ಷಣ ಇಲಾಖೆ ಇದಕ್ಕೆಲ್ಲ ಜವಾಬ್ದಾರಿಯಾಗುತ್ತೆ. ಪರಿಶುದ್ಧವಾದ ಮಕ್ಕಳ ನಿಷ್ಕಲ್ಮಷ ಮನಸ್ಸನ್ನ ಪ್ರಚೋದನೆಗೆ ಬಳಸಬಾರದು. ಯಾರು ಬೇಕಾದರೂ ಮಾತನಾಡಲಿ, ಆದರೆ ಶಾಲೆಯ ಮಕ್ಕಳ ಬಳಸಿಕೊಂಡಿದ್ದನ್ನು ಒಪ್ಪಲ್ಲ. ಸರ್ಕಾರದ ಕಡೆಯಿಂದ ತನಿಖೆ ಆಗಿ ಸೂಕ್ತ ಕ್ರಮ ಆಗಬೇಕು. ಸದ್ಯ ತನಿಖೆ ಪ್ರಾಥಮಿಕ ಹಂತದಲ್ಲಿದೆ, ಯಾವುದೇ ಗಲಾಟೆ ಆಗಬಾರದು ಅಷ್ಟೇ. ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಇಲಾಖೆಯಿಂದ ಸ್ವತಂತ್ರ ತನಿಖೆ ಆಗಬೇಕು. ಅಧಿಕಾರಿಗಳು ಪ್ರಕರಣ ಉಲ್ಪಣವಾದ ಬಳಿಕ ಒತ್ತಡದ ಮೇಲೆ ಬಂದಿದ್ದಾರೆ. ಶಿಕ್ಷಣ ಇಲಾಖೆ ಯಾವುದೇ ಪ್ರಚೋದನೆಗೆ ಒಳಗಾಗದೇ ತನಿಖೆ ನಡೆಸಲಿ. ಮಕ್ಕಳನ್ನ ರಾಜಕೀಯಕ್ಕೆ ಬಳಸಬಾರದು, ಅದರ ಬಗ್ಗೆಯೂ ತನಿಖೆ ಆಗಲಿ. ಮಕ್ಕಳನ್ನು ದುರುಪಯೋಗ ಪಡಿಸಿಕೊಂಡಿದ್ದರೆ ಅದರ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ತನಿಖೆ ಮಾಡಲಿ ಎಂದಿದ್ದಾರೆ.
ವಿನಯ ಸೊರಕೆ ಪ್ರತಿಕ್ರಿಯಿಸಿ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಾವು ಭೇಟಿಯಾಗಿದ್ದೇವೆ. ಸಂಬಂಧ ಪಟ್ಟ ಇಲಾಖೆ ಹಾಗೂ ಶಿಕ್ಷಣ ಸಚಿವರಿಗೆ ಒತ್ತಾಯ ಮಾಡ್ತೇವೆ. ಎಲ್ಲವೂ ತನಿಖೆ ಆಗಲಿ, ಸರ್ಕಾರದಿಂದ ಸ್ವತಂತ್ರ ತನಿಖೆ ನಡೆಯಲಿ. ಶಾಲಾ ಆಡಳಿತ ಮಂಡಳಿ ಶಿಕ್ಷಣ ಇಲಾಖೆಗೆ ತನಿಖೆ ನಡೆಸಲು ಬಿಟ್ಟಿದ್ದಾರೆ. ಆದರೆ ಇದರ ಮಧ್ಯೆ ಇದೆಲ್ಲಾ ಇಲ್ಲಿ ಆಗಿಹೋಗಿದೆ ಎಂದು ಹಿಂದು ಸಂಘಟನೆಗಳ ಹೆಸರೆತ್ತದೆ ಹೇಳಿಕೆ ನೀಡಿದ್ದಾರೆ.
Mangalore Congress leader Ramanth Rai demands for clean probe in jeppu Gerosa School over alleged derogatory remarks. Protests over the alleged derogatory remarks against Hinduism and Lord Sri Rama by a teacher in the classroom of St. Gerosa English Medium Higher Primary School here ended with the management keeping the teacher under suspension pending inquiry by the Education Department.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 07:00 pm
Mangalore Correspondent
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
Dharmasthala Case, FIR YouTuber MD Sameer: ಧರ...
12-07-25 11:00 pm
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm