ಬ್ರೇಕಿಂಗ್ ನ್ಯೂಸ್
12-02-24 05:17 pm Mangalore Correspondent ಕರಾವಳಿ
ಮಂಗಳೂರು, ಫೆ.12: ಹಿಂದು ಧರ್ಮವನ್ನು ನಿಂದಿಸಿರುವ ಜೆರೋಸಾ ಶಾಲೆಯ ಶಿಕ್ಷಕಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಶಾಲೆಯ ಮುಂಭಾಗದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು, ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮಧ್ಯಾಹ್ನದಿಂದ ನಿರಂತರ ಪ್ರತಿಭಟನೆಯಿಂದ ಬೆದರಿದ ಶಾಲಾಡಳಿತ ಮಂಡಳಿ ಸದಸ್ಯರು ಆರೋಪಕ್ಕೀಡಾದ ಶಿಕ್ಷಕಿಯನ್ನು ಸದ್ಯಕ್ಕೆ ಅಮಾನತು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಅವರು ಮಧ್ಯಾಹ್ನ ಜಿಪಂ ಕಚೇರಿ ಆವರಣದಲ್ಲಿ ಡಿಡಿಪಿಐ ರಾಮಚಂದ್ರ ನಾಯಕ್ ಅವರನ್ನು ತರಾಟೆಗೆತ್ತಿಕೊಂಡು ಆ ಶಿಕ್ಷಕಿಯನ್ನು ಕೂಡಲೇ ವಜಾಗೊಳಿಸಬೇಕು, ಇಲ್ಲದೇ ಇದ್ದರೆ ನಾನು ಅಧಿವೇಶನಕ್ಕೆ ಹೋಗುವುದಿಲ್ಲ. ನನಗೆ ಅಧಿವೇಶನಕ್ಕಿಂತ ಶಾಲೆಯ ಸಮಸ್ಯೆಯೇ ಹೆಚ್ಚಿನದು. ಶಿಕ್ಷಕಿ ವಿರುದ್ಧ ಕ್ರಮ ಆಗದೇ ಇದ್ದರೆ ನಾವು ಜಿಲ್ಲೆಯಾದ್ಯಂತ ಧರಣಿ ನಡೆಸುತ್ತೇವೆ ಎಂದು ಹೇಳಿದ್ದರು. ಆನಂತರ, ಹಿಂದು ಸಂಘಟನೆ ಕಾರ್ಯಕರ್ತರ ಜೊತೆಗೆ ಸೇರಿ ಜೆರೋಸಾ ಶಾಲೆಯ ಬಳಿಗೆ ಬಂದು ಪ್ರತಿಭಟನೆ ಆರಂಭಿಸಿದ್ದಾರೆ.
ಅಲ್ಲಾನಿಗೆ ಹಾಗೆ ಹೇಳುತ್ತಿದ್ದರೆ ಏನಾಗುತ್ತಿತ್ತು ?
ಶಾಲೆಯ ಬಳಿ ಪೋಷಕರು ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದು ಶಾಲಾಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದ್ದಾರೆ. ಹಿಂದುಗಳನ್ನು ನಿಂದಿಸಿ ಹೇಳಿಕೆ ನೀಡಿದ್ದಕ್ಕೆ ಇಷ್ಟಕ್ಕೆ ಇದೆ. ಒಂದ್ವೇಳೆ, ಮುಸ್ಲಿಮರ ಅಲ್ಲಾ ಅಥವಾ ಕ್ರೈಸ್ತರ ಏಸುವನ್ನು ಅಪಮಾನಿಸುತ್ತಿದ್ದರೆ ಹೇಗಿರುತ್ತಿತ್ತು. ನಿಮ್ಮ ಶಾಲೆಯ ಸ್ಥಿತಿ ಏನಾಗುತ್ತಿತ್ತು. ಇಡೀ ಜಿಲ್ಲೆಯಲ್ಲಿ ಬೆಂಕಿ ಬೀಳುವ ಸ್ಥಿತಿ ಆಗುತ್ತಿತ್ತು ಎಂದು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳನ್ನು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ. ನೀವು ಕೂಡಲೇ ಆ ಶಿಕ್ಷಕಿಯನ್ನು ವಜಾಗೊಳಿಸಬೇಕು. ಈ ರೀತಿಯ ಕೃತ್ಯ ಇವತ್ತು ಮೊದಲು ನಡೆದಿದ್ದಲ್ಲ. ಹಿಂದಿನಿಂದಲೂ ನಡೀತಿದೆ. ಇದು ಹಿಂದು ಧರ್ಮದ ಬಗ್ಗೆ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜೆ ನಾಲ್ಕು ಗಂಟೆ ವೇಳೆಗೆ ಶಾಲಾಡಳಿತ ಮಂಡಳಿ ಸದಸ್ಯ ರಾಯ್ ಕ್ಯಾಸ್ಟಲಿನೋ ಬಂದು ನಾವು ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡುತ್ತೇವೆ ಎಂದಿದ್ದಾರೆ. ಅದೇ ವೇಳೆ, ಶಿಕ್ಷಕ ಸ್ಟೀಫನ್ ಅವರನ್ನೂ ಅಮಾನತು ಮಾಡಬೇಕು ಎಂದು ಜನರು ಆಗ್ರಹ ಮಾಡಿದ್ದಾರೆ. ಸ್ಟೀಫನ್ ಕೂಡ ಅದೇ ರೀತಿ ಹಿಂದು ದೇವರನ್ನು ನಿಂದಿಸಿದ್ದಾರೆ. ಅವರನ್ನೂ ಅಮಾನತು ಮಾಡಬೇಕು ಎಂದು ಪೋಷಕರು ಹೇಳಿದ್ದಾರೆ. ಆದರೆ, ರಾಯ್ ಕ್ಯಾಸ್ಟಲಿನೋ ಮತ್ತೆ ಶಾಲೆಯ ಒಳಗೆ ತೆರಳಿದ್ದಾರೆ. ಶಾಲಾಡಳಿತ ಮಂಡಳಿ ಸದಸ್ಯರು, ಕ್ರೈಸ್ತ ಸಂಘಟನೆ ಪ್ರಮುಖರು ಶಾಲೆಯ ಒಳಗೆ ಸೇರಿ ಚರ್ಚೆ ನಡೆಸುತ್ತಿದ್ದರೆ, ಹೊರಗಡೆ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಿರಂತರ ಪ್ರತಿಭಟನೆ ನಡೆದಿದ್ದು ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದೆ. ಶಾಸಕರೇ ಸ್ವತಃ ಶಾಲಾ ಮಕ್ಕಳ ಜೊತೆ ಸೇರಿ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಶಿಕ್ಷಕಿಯನ್ನು ಸಮರ್ಥಿಸಲು ಯತ್ನಿಸಿದ್ದಕ್ಕೆ ಆಕ್ರೋಶ
ಇದೇ ವೇಳೆ, ರಾಯ್ ಕ್ಯಾಸ್ಟಲಿನೋ ಮತ್ತು ಅನಿಲ್ ಲೋಬೊ ಹೊರಗಡೆ ಬಂದು ಸಿಸ್ಟರ್ ಪ್ರಭಾ 12 ವರ್ಷಗಳಿಂದ ಇಲ್ಲಿದ್ದಾರೆ, ಯಾವುದೇ ಅಂತಹ ತಪ್ಪು, ಎಡವಟ್ಟು ಮಾಡಿಲ್ಲ ಎಂದು ಸಮಜಾಯಿಷಿ ಕೊಡಲು ಯತ್ನಿಸಿದ್ದಾರೆ. ಆದರೆ, ವೇದವ್ಯಾಸ ಕಾಮತ್ ನೀವು ಸಮರ್ಥಿಸುವ ಕೆಲಸ ಮಾಡಬೇಡಿ. ಆಕೆ ನಮ್ಮ ರಾಮನನ್ನು ನಿಂದಿಸಿದ್ದಾಳೆ. ನಾವು ಅವರನ್ನು ಬಿಡುವುದಿಲ್ಲ. ನಾಳೆ ಪೂರ್ತಿಯಾಗಿ ಪ್ರತಿಭಟನೆ ಮಾಡುತ್ತೇವೆ, ಅದಕ್ಕೆ ನೀವೇ ಹೊಣೆಯಾಗಬೇಕು ಎಂದು ಎಚ್ಚರಿಸಿದ್ದಾರೆ.
ನಾಗನಿಗೂ ನಿಂದಿಸಿದ್ದ ಶಿಕ್ಷಕಿ –ಆರೋಪ
ಇದೇ ವೇಳೆ, ಶಾಲೆಯಿಂದ ಹೊರಬಂದ ಹೈಸ್ಕೂಲ್ ಓದುವ ಹಿರಿಯ ವಿದ್ಯಾರ್ಥಿನಿಯರು, ಆ ಶಿಕ್ಷಕಿಯ ವಿರುದ್ಧ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಸಿಸ್ಟರ್ ಪ್ರಭಾ ನಮ್ಮಲ್ಲೂ ಅದೇ ರೀತಿಯ ಮಾತುಗಳನ್ನು ಹೇಳುತ್ತಿದ್ದರು. ನಾಗನನ್ನು ಆರಾಧಿಸುವುದು ಯಾಕೆ. ಎಷ್ಟೋ ನಾಗರ ಹಾವನ್ನು ಕೊಂದಿದ್ದೇನೆ, ನನಗೆ ಏನೂ ಆಗಿಲ್ಲ. ನಾಗನನ್ನು ನಂಬುವುದು ವೇಸ್ಟ್ ಎಂದು ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ಮಸೀದಿ ಕೆಡವಿ ಮಂದಿರ ಮಾಡಬೇಕಿತ್ತೇ, ಇದೆಲ್ಲಾ ಬೇಕಿತ್ತಾ ಎಂದು ಕೇಳುತ್ತಿದ್ದರು ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ಸ್ಥಳಕ್ಕೆ ಕಮಿಷನರ್, ಜಿಲ್ಲಾಧಿಕಾರಿ ಆಗಮನ
ಸಂಜೆ 4.30ರ ವೇಳೆಗೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆಗಮಿಸಿದ್ದು, ಪೋಷಕರನ್ನು ತೆರಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಜನರನ್ನು ಎತ್ತಿಕಟ್ಟುವುದು ಸರಿಯಲ್ಲ. ಏನು ಕ್ರಮ ಆಗಬೇಕೋ ಅದನ್ನು ಮಾಡುತ್ತೀವಿ ಎಂದು ಶಾಸಕ ಕಾಮತ್ ಗೆ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿಯೂ ಶಾಸಕ ಕಾಮತ್, ಜಿಲ್ಲಾಧಿಕಾರಿ ಜೊತೆಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಾರೆ. ಬಳಿಕ ಕಮಿಷನರ್ ಮತ್ತು ಜಿಲ್ಲಾಧಿಕಾರಿ ಶಾಲೆಯ ಒಳಗೆ ಹೋಗಿದ್ದು ಮಾತುಕತೆ ನಡೆಸಿದ್ದಾರೆ.
Jeppu Gerosa school controversy, MLA Parents and Hindu outfits demand immediate suspension of two teachers from school. MLA Vedavyas slammed PRO Roy and school principal over such teachers. Parents alleged that children were fined Even for wearing Hindu tread and kunkum. High security was beefed up near the school premises
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm