ಬ್ರೇಕಿಂಗ್ ನ್ಯೂಸ್
23-01-24 06:20 pm Mangalore Correspondent ಕರಾವಳಿ
ಮಂಗಳೂರು, ಜ.23: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಈ ಬಾರಿಯೂ ಮಂಗಳೂರಿನಲ್ಲಿ ಸ್ಟ್ರೀಟ್ ಫುಡ್ ಫೆಸ್ಟ್ ಆಯೋಜಿಸಲಾಗಿದೆ. ಇದೇ ಜನವರಿ 24ರಿಂದ 28ರ ವರೆಗೆ ಐದು ದಿನಗಳಲ್ಲಿ ಫೆಸ್ಟ್ ನಡೆಯಲಿದ್ದು ಜನವರಿ 24ರ ಸಂಜೆ 7 ಗಂಟೆಗೆ ಸೀಸನ್-2ಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಕಳೆದ ಬಾರಿ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ" ಭಾರೀ ಜನಮನ್ನಣೆ ಪಡೆದು ಯಶಸ್ವಿಯಾಗಿತ್ತು. ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ, ಉರ್ವಾದ ವರೆಗೆ ಐದು ದಿನಗಳಲ್ಲಿ ಸಂಜೆ 4ರಿಂದ ರಾತ್ರಿ 10.30ರ ವರೆಗೂ ಆಹಾರ ಮಳಿಗೆಗಳ ಉತ್ಸವ ನಡೆಯಲಿದೆ. ಮಳಿಗೆ ನಿರ್ಮಾಣ ಸಹಿತ ಎಲ್ಲ ತಯಾರಿ ಪೂರ್ಣಗೊಂಡಿದ್ದು ಆನ್ಲೈನಲ್ಲಿ ನೋಂದಣಿಯಾಗಿದ್ದ 160ರಷ್ಟು ಆಹಾರ ಮಳಿಗೆಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.
ಆಹಾರ ಮೇಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೆ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಆಹಾರ ಮಳಿಗೆಗಳು ಇರಲಿವೆ. ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನಗದು ವ್ಯವಹಾರಕ್ಕಿಂತ ಎಲ್ಲ ಕಡೆಯೂ ಸ್ಕ್ಯಾನ್ ಮೂಲಕ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ.
ಕೊಟ್ಟಾರ ಚೌಕಿ ಕಡೆಯಿಂದ ಬರುವ ವಾಹನಗಳಿಗೆ ಉರ್ವಾ ಚರ್ಚ್ ಆವರಣ, ಉರ್ವಾ ಆಟದ ಮೈದಾನ ಹಾಗೂ ಲೇಡಿಹಿಲ್ ವಿಕ್ಟೋರಿಯಾ ಕಾಂಪೋಸಿಟ್ ಪಿಯು ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಲಾಲ್ ಬಾಗ್ ಕಡೆಯಿಂದ ಬರುವ ವಾಹನಗಳಿಗೆ ಕೆನರಾ ಉರ್ವ ಶಾಲೆಯ ಆವರಣ ಮತ್ತು ಕರಾವಳಿ ಉತ್ಸವ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದರು. ಕಳೆದ ವರ್ಷ ಜನ ದಟ್ಟಣೆಯಿಂದಾಗಿ ಲಾಲ್ ಬಾಗ್ ವ್ಯಾಪ್ತಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ಗಮನಸೆಳೆದಾಗ, ಈ ಬಾರಿ ಪೊಲೀಸ್ ಇಲಾಖೆ ಜೊತೆಗೆ ಸಭೆ ನಡೆಸಿದ್ದು, 13 ಲಕ್ಷ ಹೆಚ್ಚುವರಿ ಕೊಟ್ಟು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ ಎಂದರು. ಬೇರೆ ಕಡೆಗಿಂತ ಪಾರ್ಕಿಂಗ್, ರಸ್ತೆ ಮಾರ್ಗ ಇರುವುದರಿಂದ ಇದೇ ಉತ್ತಮ ಸ್ಥಳ. ಕದ್ರಿಯಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಜನರು ಒಂದಷ್ಟು ಸಹಕರಿಸಬೇಕು ಎಂದರು.
ಉತ್ಸವ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ, ಪ್ರತಿಭಾನ್ವಿತರಿಗಾಗಿ "ನಮ್ಮ ವೇದಿಕೆ- ನಿಮ್ಮ ಪ್ರತಿಭೆ, ಸೆಲ್ಫಿ ಕೌಂಟರ್, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ವೇದಿಕೆಗಳಲ್ಲಿ ಆಚರಿಸಲು ಅವಕಾಶ ಇದೆ. ಮಕ್ಕಳಿಗೆ ಕಿಡ್ ಝೋನ್ ಅನ್ನುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ತಿಳಿಸಿದರು. ಉದಯ ಪೂಜಾರಿ, ಯತೀಶ್ ಬೈಕಂಪಾಡಿ, ಡಾ.ರಾಘವೇಂದ್ರ ಹೊಳ್ಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
The Kudla Cultural Foundation has organised a street food fest in Mangaluru this year. Mangaluru South MLA Vedavyas Kamath said that the fest will be held in five days from January 24 to 28 and season 2 will be officially launched on January 24 at 7 pm.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm