ಬ್ರೇಕಿಂಗ್ ನ್ಯೂಸ್
05-10-23 08:56 pm Mangalore Correspondent ಕರಾವಳಿ
ಮಂಗಳೂರು, ಅ.5: "ಮಂಗಳೂರು ದಸರಾ" ಎಂದೇ ಹೆಸರಾಗಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ 34ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿಯೂ ವಿಶ್ವವಿಖ್ಯಾತ “ಮಂಗಳೂರು ದಸರಾ" ಇದೇ ತಿಂಗಳ ಅ.15ರಂದು ಗಣೇಶ, ನವದುರ್ಗೆಯರು ಮತ್ತು ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳಿಸಿ ವಿಧ್ಯುಕ್ತ ಆರಂಭಗೊಳ್ಳಲಿದೆ ಎಂದು ದೇಗುಲ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ದಸರಾ ಮಹೋತ್ಸವ ಅ.15 ರಿಂದ ಮೊದಲ್ಗೊಂಡು 25ರ ವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ, ಅ.24ರಂದು 4 ಗಂಟೆಗೆ ಸರಿಯಾಗಿ “ಮಂಗಳೂರು ದಸರಾ” ಮೆರವಣಿಗೆ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ರಾಜರಸ್ತೆಯಲ್ಲಿ ಸಾಗಲಿದೆ. ಸುಮಾರು ಏಳು ಕಿಮೀ ಉದ್ದಕ್ಕೆ ಅದ್ದೂರಿ ಮೆರವಣಿಗೆ ನಡೆದು ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ಮರುದಿನ ಬೆಳಗ್ಗೆ ಮೂರ್ತಿಗಳ ವಿಸರ್ಜನೆ ನಡೆಯಲಿದೆ ಎಂದರು.
ಅ.15ರಿಂದ ಅಕ್ಟೋಬ್ 23ರ ವರೆಗೆ ದಿನಂಪ್ರತಿ ಸಂಜೆ 6 ರಿಂದ ರಾತ್ರಿ 9 ಗಂಟೆಯ ವರೆಗೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಮಂಗಳೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವಾರು ಕಡೆಗಳಿಂದ ಬರುವ ಭಾರತೀಯ ಸನಾತನ ಧರ್ಮದ, ಇತಿಹಾಸ ಭಾವದ ನೆನಪುಗಳನ್ನು ಸ್ಮರಿಸುವ ವಿಶೇಷ ಟ್ಯಾಬ್ಲೋ ಗಳು ಭಾಗವಹಿಸಲಿದ್ದು ಈ ಸುಂದರ ಮೆರವಣಿಗೆ ವಿಶೇಷ ಮೆರುಗು ನೀಡಲಿದೆ. ಸಾಂಸ್ಕೃತಿಕ ಮೆರವಣಿಗೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿರುವ ಎಲ್ಲಾ ಕಟ್ಟಡದ ಮಾಲಕರು ತಮ್ಮ ತಮ್ಮ ಕಟ್ಟಡಗಳನ್ನು ವಿದ್ದುದ್ದೀಪದಿಂದ ಅಲಂಕರಿಸಿ “ಮಂಗಳೂರು ದಸರಾ” ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಟ್ರಸ್ಟಿ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಈ ಬಾರಿಯೂ ಮೆರವಣಿಗೆ ಸಾಗುವ ನಗರ ಪ್ರದೇಶದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಸಮಿತಿ ಸದಸ್ಯರಾದ ಕೆ. ಮಹೇಶ್ಚಂದ್ರ, ರವಿಶಂಕರ್ ಮಿಜಾರ್, ಎಂ. ಶೇಖರ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವೇಂದ್ರ ಪೂಜಾರಿ, ಡಾ.ಅನಸೂಯ ಬಿ.ಟಿ. ಸಾಲಿಯಾನ್, ಕಿಶೋರ್ ಯೆಯ್ಯಾಡಿ, ಚಂದನ್, ಡಾ. ಬಿ.ಜಿ. ಸುವರ್ಣ, ವಾಸುದೇವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Mangalore Kudroli Dasara to be held from October 15th to to 24th. Grand procession will be held at sharp 4 in the evening said Padmaraj.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 12:31 pm
Bengaluru staffer
MLA Vedavyas Kamath, Mangalore: ಶಾಸಕ ವೇದವ್ಯಾಸ...
07-02-26 11:47 am
ಅಕ್ರಮ ಸಂಬಂಧವೇ ರಕ್ತಪಾತಕ್ಕೆ ಕಾರಣ.. ನನ್ನ ಹತ್ಯೆಗೆ...
06-02-26 06:36 pm
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm