ಬ್ರೇಕಿಂಗ್ ನ್ಯೂಸ್
24-10-20 01:27 pm Headline Karnataka News Network ಸಿನಿಮಾ
ಮುಂಬೈ, ಅಕ್ಟೋಬರ್ 24: ಬಾಲಿವುಡ್ ಚಿತ್ರರಂಗದಲ್ಲಿ ಮಹೇಶ್ ಭಟ್ ದೊಡ್ಡ ಹೆಸರು. ಡ್ರಗ್ ದಂಧೆ ಹೊರಬಿದ್ದ ಬಳಿಕ ಸಿನಿಮಾ ನಿರ್ಮಾಪಕ, ನಿರ್ದೇಶಕನಾಗಿರುವ ಮಹೇಶ್ ಭಟ್, ಬಾಲಿವುಡ್ ಜಗತ್ತನ್ನೇ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೋ ಎನ್ನುವಂತೆ ಅವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಆದರೆ, ಮುಂಬೈ ಪೊಲೀಸರು ಮಾತ್ರ ಅವರನ್ನು ಮುಟ್ಟಲು ಹೋಗಿಲ್ಲ.
ಈಗ ಮಹೇಶ್ ಭಟ್ ಹತ್ತಿರದ ಸಂಬಂಧಿಯೇ ಭಟ್ ವಿರುದ್ಧ ದೂರುಗಳ ಸುರಿಮಳೆ ಗೈದಿದ್ದಾರೆ. ನಟಿ ಮತ್ತು ಮಾಡೆಲ್ ಆಗಿರುವ ಲವೀನಾ ಲೂದ್ ಎಂಬಾಕೆ, ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ, ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಹೇಶ್ ಭಟ್ ಅಳಿಯ ಸುಮಿತ್ ಸಬರ್ವಾಲ್ ಜೊತೆಗೆ ಮದುವೆಯಾಗಿದ್ದ ಲವೀನಾ ಲೂದ್, ಆತ ಮತ್ತು ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಸಬರ್ವಾಲ್ ಜೊತೆ ಮದುವೆಯಾಗಿತ್ತು. ಆದರೆ, ಸಬರ್ವಾಲ್ ಡ್ರಗ್ ದಂಧೆಯಲ್ಲಿ ಇರುವುದನ್ನು ತಿಳಿದು ಆತನಿಂದ ಬೇರೆಯಾಗಿದ್ದೇನೆ. ಆತ ಚಿತ್ರರಂಗದ ಹಲವರಿಗೆ ಡ್ರಗ್ ಪೂರೈಕೆ ಮಾಡುತ್ತಾನೆ. ಹುಡುಗಿಯರನ್ನೂ ಪೂರೈಕೆ ಮಾಡುತ್ತಾನೆ. ಸಬರ್ವಾಲ್ ಮೊಬೈಲಿನಲ್ಲಿ ಹುಡುಗಿಯರ ಫೋಟೋಗಳಿದ್ದು ಅದರ ವಹಿವಾಟು ಕೂಡ ಆತನಿಗಿದೆ. ಇವೆಲ್ಲವೂ ಮಹೇಶ್ ಭಟ್ ಅವರಿಗೂ ಗೊತ್ತು.
ಇಂಡಸ್ಟ್ರಿಯಲ್ಲಿ ಮಹೇಶ್ ಭಟ್ ದೊಡ್ಡ ಡಾನ್. ಅವರು ಎಲ್ಲದನ್ನೂ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅವರು ಹೇಳಿದಂತೆ ಕೇಳದಿದ್ದರೆ ಜೀವನ ಹಾಳು ಮಾಡುತ್ತಾರೆ. ನಿರ್ದೇಶಕರು, ಕಲಾವಿದರು, ಸಂಗೀತ ಸಂಯೋಜಕರನ್ನು ಕೆಲಸದಿಂದ ಕಿತ್ತು ಹಾಕುವಂತೆ ಮಾಡುತ್ತಾರೆ. ಅವರು ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ನನ್ನ ಹಿಂದೆ ಬಿದ್ದಿದ್ದಾರೆ. ಪೊಲೀಸರಿಗೆ ಹೇಳಿದರೆ ಅವರು ಕ್ಯಾರ್ ಮಾಡುತ್ತಿಲ್ಲ. ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಾರೆ. ನನ್ನ ಕುಟುಂಬದವರಿಗೆ ಏನೇ ಅನಾಹುತ ಆದರೂ ಅದಕ್ಕೆ ಇವರೇ ಕಾರಣ ಎಂದು ವಿಡಿಯೋದಲ್ಲಿ ಲವೀನಾ ಲೂದ್ ಹೇಳಿಕೊಂಡಿದ್ದಾಳೆ.
Filmmaker Mahesh Bhatt‘s relative Luviena Lodh on Friday posted a video on Instagram accusing him of harassment and intimidation. Calling him the ‘biggest don of industry’, Luviena said that Mahesh is much powerful and he had destroyed many lives.
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm