ಬಟ್ಟೆ ಕದ್ದು ತಪ್ಪೊಪ್ಪಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ !!!

23-10-20 12:38 pm       Headline Karnataka News Network   ಸಿನಿಮಾ

ಪ್ರಿಯಾಂಕಾ ಚೋಪ್ರಾ ತನ್ನ ಪತಿಯ ಬಟ್ಟೆಯನ್ನು ಕದ್ದು ಧರಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು,ಸದ್ಯ ಭಾರಿ ವೈರಲ್ ಆಗುತ್ತಿದೆ

ಜರ್ಮನಿ,ಅಕ್ಟೋಬರ್.23 : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ  ಪತಿ ನಿಕ್ ಜೋನಸ್ ಜೊತೆ  ವಿದೇಶದಲ್ಲಿ ನೆಲೆಸಿದ್ದಾರೆ. ಆಗಾಗ  ಪತಿಯ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ  ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ಅಪ್ಲೋಡ್ ಮಾಡಿದಂತ ಫೋಟೋ ಈಗ ಸಕ್ಕತ್ ವೈರಲ್ ಆಗಿದೆ.

ಪತಿಯ ಬಟ್ಟೆಯನ್ನು ಕದ್ದು ಧರಿಸಿ, ಮುದ್ದಿನ ನಾಯಿ ಡಯಾನಾ ಜೊತೆ ಜರ್ಮನಿ ಬೀದಿಯಲ್ಲಿ ವಾಕ್  ಮಾಡುತ್ತಿರುವ  ಫೋಟೋವನ್ನು ಪ್ರಿಯಾಂಕಾ  ಅಪ್ಲೋಡ್ ಮಾಡಿದ್ದಾರೆ.  ಒಂದೇ ಬಟ್ಟೆಯನ್ನು ಗಂಡ-ಹೆಂಡತಿ ಇಬ್ಬರೂ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ನಿನ್ನ ಬಟ್ಟೆ ಕದಿಯುವುದು ನನಗೆ ತುಂಬ ಇಷ್ಟ' ಎಂದು ಬರೆದುಕೊಂಡಿದ್ದಾರೆ.