ಬ್ರೇಕಿಂಗ್ ನ್ಯೂಸ್
15-09-21 04:55 pm Headline Karnataka News Network ದೇಶ - ವಿದೇಶ
ಭೋಪಾಲ್, ಸೆ.15: ಮಧ್ಯಪ್ರದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾರತೀಯ ಪುರಾಣ ಗ್ರಂಥಗಳನ್ನು ಹೊಸ ಪಠ್ಯಗಳ ರೂಪದಲ್ಲಿ ಸೇರಿಸಲಾಗಿದೆ. ಪುರಾಣ ಗ್ರಂಥಗಳಾದ ಮಹಾಭಾರತ, ತುಳಸೀದಾಸರು ಬರೆದ ರಾಮಚರಿತ ಮಾನಸದ ಆಯ್ದ ವಿಚಾರಗಳನ್ನು ಪದವಿ ಪಠ್ಯದಲ್ಲಿ ಸೇರಿಸಲಾಗಿದೆ. ಪದವಿಯ ಪ್ರಥಮ ವರ್ಷದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಅಪ್ಲೈಡ್ ಫಿಲಾಸಫಿ ಆಫ್ ರಾಮಚರಿತ್ ಮಾನಸ್ ಹೆಸರಲ್ಲಿ ಪಠ್ಯವನ್ನು ಕೊಡಲಾಗಿದೆ.
2020-21ರ ಸಾಲಿನಲ್ಲಿಯೇ ಈ ಪಠ್ಯವನ್ನು ಬೋಧನೆಗೆ ಸ್ವೀಕರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿ ಇರಿಸಲಾಗಿದೆ. ಇದರ ಜೊತೆಗೆ, ಇಂಗ್ಲಿಷ್ ಭಾಷಾ ಪಠ್ಯದಲ್ಲಿ ಸಿ.ರಾಜಗೋಪಾಲಾಚಾರಿ ಬರೆದಿರುವ ಮಹಾಭಾರತ ಕುರಿತ ಅಧ್ಯಾಯವೂ ಇದೆ. ಇದಲ್ಲದೆ, ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಯೋಗ ಮತ್ತು ಧ್ಯಾನದ ಕುರಿತಾಗಿಯೂ ಪಠ್ಯ ಇರಲಿದೆ. ರಾಮಚರಿತ ಮಾನಸ ಕುರಿತ ಪಠ್ಯದಲ್ಲಿ ಧರ್ಮ ಮತ್ತು ಆಧ್ಯಾತ್ಮ - ಭಾರತೀಯ ಸಂಸ್ಕೃತಿಯ ಮೂಲತತ್ವಗಳು ಎಂಬ ಬಗ್ಗೆ ಅಧ್ಯಾಯ ಇರುತ್ತದೆ. ಅಲ್ಲದೆ, ವೇದ, ಉಪನಿಷತ್ತು, ಪುರಾಣ ಹಾಗೂ ರಾಮಾಯಣ ಮತ್ತು ರಾಮಚರಿತ ಮಾನಸದ ನಡುವಿನ ವ್ಯತ್ಯಾಸಗಳ ಕುರಿತು ಬೆಳಕು ಚೆಲ್ಲಲಿದೆ.
ಶ್ರೀರಾಮನ ಕುರಿತ ಮೌಲಿಕ ವಿಚಾರಗಳು ವಿದ್ಯಾರ್ಥಿಗಳಲ್ಲಿ ಪ್ರಖರ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೊಸ ಪಠ್ಯಕ್ರಮದ ಜಾರಿ ಬಗ್ಗೆ ಮಧ್ಯಪ್ರದೇಶ ಸರಕಾರ ಹೇಳಿಕೊಂಡಿದೆ. ಇದಲ್ಲದೆ, ವಿದ್ಯಾರ್ಥಿಗಳು ಶ್ರೀರಾಮನ ಇಂಜಿನಿಯರಿಂಗ್ ನೈಪುಣ್ಯದ ಬಗ್ಗೆ ಅರಿತುಕೊಳ್ಳಲಿದ್ದಾರೆ. ಅನಾದಿ ಕಾಲದಲ್ಲೇ ರಾಮಸೇತುವನ್ನು ಅದ್ಭುತವಾಗಿ ಕಟ್ಟಿದ್ದು ರಾಮನ ಇಂಜಿನಿಯರಿಂಗ್ ತಾಂತ್ರಿಕತೆಗೆ ಸಾಕ್ಷಿಯಾಗಿತ್ತು ಎಂದು ಹೇಳಿದೆ.
ರಾಮಚರಿತ ಮಾನಸ ಅಲ್ಲದೆ, ಮಧ್ಯಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಉರ್ದು ಜನಪದ ಪದ್ಯಗಳು ಸೇರಿದಂತೆ 24 ಇನ್ನಿತರ ಪಠ್ಯಗಳು ಹೊಸ ಶಿಕ್ಷಣ ಪದ್ಧತಿಯಲ್ಲಿವೆ. ಇವೆಲ್ಲವೂ ಐಚ್ಛಿಕ ಆಗಿದ್ದು, ಆಸಕ್ತ ವಿದ್ಯಾರ್ಥಿಗಳು ಇವನ್ನು ಆಯ್ದುಕೊಂಡು ಕಲಿಯಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ. ಜೀವನ ಮೌಲ್ಯಗಳನ್ನು ಅರಿತುಕೊಳ್ಳಲು ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಹೊಸ ಪಠ್ಯಕ್ರಮಗಳು ಸಹಕಾರಿ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಮೋಹನ್ ಯಾದವ್ ಹೇಳಿದ್ದಾರೆ. ರಾಮಾಯಣ, ಮಹಾಭಾರತಗಳನ್ನು ಓದುವುದರಿಂದ ವಿದ್ಯಾರ್ಥಿಗಳು ಅದರಿಂದ ಸ್ಫೂರ್ತಿ ಪಡೆದು ಉನ್ನತ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಆದರೆ, ಮಧ್ಯಪ್ರದೇಶ ಸರಕಾರದ ಹೊಸ ಪಠ್ಯಕ್ರಮದ ಬಗ್ಗೆ ಕೆಲವು ಶಿಕ್ಷಣ ತಜ್ಞರಿಂದ ಟೀಕೆಯೂ ವ್ಯಕ್ತವಾಗಿದೆ. ಒಂದು ಧರ್ಮದ ವಿಚಾರಗಳನ್ನು ಮಾತ್ರ ಏಕೆ ಶಿಕ್ಷಣದಲ್ಲಿ ತುಂಬಬೇಕಿತ್ತು. ಹಾಗಿದ್ದರೆ, ಇತರೇ ಧರ್ಮಗಳ ಬೈಬಲ್, ಖುರಾನ್, ಗುರುಗ್ರಂಥ ಸಾಹಿಬ್ ಬಗ್ಗೆಯೂ ಪಠ್ಯಗಳನ್ನು ಕೊಡಬೇಕಿತ್ತು. ಸರ್ವಧರ್ಮ ಸಮನ್ವಯ ಆಗಬಹುದಿತ್ತು ಎಂದು ಕಾಂಗ್ರೆಸ್ ನಾಯಕರು ಸೇರಿದಂತೆ ಕೆಲವರು ಬಿಜೆಪಿ ಸರಕಾರದ ನಡೆಯನ್ನು ಟೀಕಿಸಿದ್ದಾರೆ.
Students of first-year graduation courses in Madhya Pradesh colleges will have epics like the Mahabharata, Ramcharitmanas, besides yoga and meditation as part of their new syllabus, which has been introduced as per the New Education Policy, 2020.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am