ಬ್ರೇಕಿಂಗ್ ನ್ಯೂಸ್
06-03-26 11:40 am HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 6: ಆಫ್ರಿಕಾ ಖಂಡದ ನಡುವೆ ಸಾಗುವ ಹಾರ್ಮುಜ್ ಜಲಸಂಧಿಯಿಂದ ತೈಲ ಹಡಗುಗಳನ್ನು ಸಾಗಲು ಬಿಡದೆ ತಡೆ ಹಾಕಿದ್ದ ಇರಾನ್ ಇದೀಗ ಒಂದಷ್ಟು ಸಡಿಲಿಕೆ ಮಾಡಿದೆ. ಅಮೆರಿಕ- ಇಸ್ರೇಲ್ ಮಿತ್ರ ರಾಷ್ಟ್ರಗಳಿಗೆ ಇಲ್ಲಿಂದ ತೈಲ ಪೂರೈಕೆ ಆಗಲು ಬಿಡುವುದಿಲ್ಲ. ಉಳಿದ ದೇಶಗಳಿಗೆ ತಡೆ ಹಾಕುವುದಿಲ್ಲ ಎನ್ನುವ ಮೂಲಕ ಇರಾನ್ನ ರೆವಲ್ಯೂಶನರಿ ಗಾರ್ಡ್ ಏಷ್ಯನ್ ದೇಶಗಳಿಗೆ ದೊಡ್ಡ ರಿಲೀಫ್ ಕೊಟ್ಟಿದೆ.
ಇದರೊಂದಿಗೆ, ಭಾರತ, ಚೀನಾ, ಲಂಕಾ ಸೇರಿದಂತೆ ಏಷ್ಯಾದ ಹಲವು ದೇಶಗಳಿಗೆ ನಿರಾಳತೆ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯು ಪಶ್ಚಿಮ ಏಷ್ಯಾ ಭಾಗದಲ್ಲಿ ಇರಾನ್ ಮತ್ತು ಓಮಾನ್ ನಡುವಿನ ಸಮುದ್ರ ಭಾಗವಾಗಿದ್ದು ಇದು ಯುರೋಪ್ ಕಡೆಯಿಂದ ಅರೇಬಿಯನ್ ಸಮುದ್ರವನ್ನು ನೇರವಾಗಿ ಸಂಪರ್ಕಿಸುತ್ತದೆ. ಗಲ್ಫ್ ರಾಷ್ಟ್ರಗಳ ತೈಲ ನೌಕೆಗಳು ಬೇರೆ ದೇಶಗಳನ್ನು ತಲುಪಬೇಕಾದರೆ ಇಲ್ಲಿಂದಲೇ ಹೊರಗೆ ಹೋಗಬೇಕು. ವಿಶ್ವದ ಶೇ. 20ಕ್ಕಿಂತ ಹೆಚ್ಚು ತೈಲ ಪೂರೈಕೆ ಈ 33 ಕಿಮೀ ಅಗಲದ ಜಲಸಂಧಿಯ ಮೂಲಕ ಸಾಗಬೇಕಾಗುತ್ತದೆ. ಇದರ ಹೆಚ್ಚಿನ ಭಾಗ ಇರಾನ್ ದೇಶದ ವ್ಯಾಪ್ತಿಯಲ್ಲಿ ಇರೋದ್ರಿಂದ ಜಲಸಂಧಿಗೆ ತಡೆ ಹಾಕುವುದು ಸುಲಭ. ಇದಲ್ಲದೆ, ಪೂರ್ವ ಏಷ್ಯಾದಿಂದ ಯುರೋಪ್ ಕಡೆಗೆ ಸಾಗಲು ಆಫ್ರಿಕಾ ಖಂಡವನ್ನು ಸುತ್ತು ಹಾಕುವುದು ತಪ್ಪುತ್ತದೆ. ಇದರಿಂದಾಗಿ ಸರಕು ಮತ್ತು ತೈಲ ಸಾಗಾಟದ ಹೆಚ್ಚಿನ ಹಡಗುಗಳು ಇದೇ ಹಾದಿಯಲ್ಲಿ ಸಾಗುತ್ತವೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದಾಗಿನಿಂದ ಈ ಜಲಸಂಧಿಗೆ ತಡೆ ಬಿದ್ದಿದೆ. ಹೀಗಾಗಿ ಅಲ್ಲಿ ಪೂರ್ವ ಏಷ್ಯಾದತ್ತ ಬರುವ ಸಾಕಷ್ಟು ನೌಕೆಗಳು ಸಾಲುಗಟ್ಟಿ ನಿಂತಿವೆ. ಭಾರತಕ್ಕೆ ಬರಬೇಕಾದ 37 ಹಡಗುಗಳಿದ್ದು ಒಂದು ಸಾವಿರಕ್ಕೂ ಹೆಚ್ಚು ಸಿಬಂದಿ ಇದ್ದಾರೆ. ಕಳೆದೊಂದು ವಾರದಿಂದ ಈ ಮಾರ್ಗದಲ್ಲಿ ತಡೆ ಬಿದ್ದಿರುವ ಕಾರಣ ಶೇ. 90 ರಷ್ಟು ಹಡಗುಗಳ ಸಾಗಣೆ ಕಡಿಮೆ ಆಗಿದೆ. ಹೀಗಾಗಿ ಬ್ಯಾರಲ್ಗೆ 65 ಡಾಲರ್ ಆಸುಪಾಸಿನಲ್ಲಿದ್ದ ಕಚ್ಚಾ ತೈಲ ಬೆಲೆ 80 ಡಾಲರ್ಗಿಂತಲೂ ಮೇಲೆ ಹೋಗಿದೆ.
ಎರಡು ದಿನಗಳ ಹಿಂದೆ ಇರಾನ್ ದೇಶವು ಚೀನೀ ಹಡಗುಗಳಿಗೆ ಮಾತ್ರವೇ ಇಲ್ಲಿಂದ ಸಾಗಲು ಅವಕಾಶ ಕೊಡುವುದಾಗಿ ಹೇಳಿತ್ತು. ಈಗ ಅಮೆರಿಕ ಹಾಗೂ ಅದರ ಮಿತ್ರ ದೇಶಗಳನ್ನು ಬಿಟ್ಟು ಉಳಿದ ದೇಶಗಳಿಗೆ ಹಾರ್ಮುಜ್ ಜಲಸಂಧಿ ದಾಟಲು ಅವಕಾಶ ಕೊಡುವುದಾಗಿ ಹೇಳುತ್ತಿದೆ. ಇದರಿಂದ ದೊಡ್ಡ ನಷ್ಟದ ಭೀತಿಯಲ್ಲಿದ್ದ ಭಾರತಕ್ಕೆ ತುಸು ರಿಲೀಫ್ ಸಿಕ್ಕಿದೆ. ಅಂದಹಾಗೆ, ಹಾರ್ಮುಜ್ ಜಲಸಂಧಿಗೆ ಈ ರೀತಿಯ ನಿರ್ಬಂಧ ಬಿದ್ದಿದ್ದು ಇದೇ ಮೊದಲು. ಹಿಂದೆ ಇರಾಕ್- ಅಮೆರಿಕ ಯುದ್ಧದ ಸಂದರ್ಭದಲ್ಲೂ ಇಲ್ಲಿ ತೈಲ ನೌಕೆಗಳ ಸಾಗಣೆಗೆ ತೊಂದರೆ ಆಗಿರಲಿಲ್ಲ.
ಭಾರತಕ್ಕೆ ರಷ್ಯಾದ ತೈಲ ನೆರವು:
ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹೊತ್ತಲ್ಲೇ ಭಾರತಕ್ಕೆ ರಷ್ಯಾದಿಂದ ತೈಲದ ನೆರವು ಸಿಕ್ಕಿದೆ. ಬ್ಲೂಮ್ಬರ್ಗ್ ವರದಿ ಪ್ರಕಾರ, ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು ಭಾರತಕ್ಕೆ ಬರುತ್ತಿವೆ. ಇದರಲ್ಲಿ ಒಂದು ಹಡಗು ಈಗಾಗಲೇ ಭಾರತಕ್ಕೆ ಬಂದಿದ್ದು ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದೆಯಂತೆ. 7.3 ಲಕ್ಷ ಬ್ಯಾರಲ್ ತೈಲ ಹೊತ್ತ ಹಡಗು ಭಾರತದ ಪಾರಾದೀಪ್ ಬಂದರನ್ನು ತಲುಪಿದೆ. ಮತ್ತೊಂದು ಹಡಗು ಗುಜರಾತ್ನ ವಾಡಿನರ್ ಬಂದರಿನತ್ತ ಬರುತ್ತಿದೆ. ಇನ್ನು, ಸಿಂಗಾಪುರದತ್ತ ಹೋಗುತ್ತಿದ್ದ ತೈಲ ಟ್ಯಾಂಕರ್ ಭಾರತದತ್ತ ತಿರುಗಿದೆ ಎಂದು ಹೇಳಲಾಗುತ್ತಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am