ಬ್ರೇಕಿಂಗ್ ನ್ಯೂಸ್
07-03-26 09:45 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 7: ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ಹೆರಿಗೆಯಾಗುವ ಸಂಖ್ಯೆ ತೀವ್ರ ಕುಸಿತವಾಗಿದ್ದು ಗ್ರಾಮಾಂತರ ಪ್ರದೇಶದಿಂದ ಗರ್ಭಿಣಿಯರು ಜಿಲ್ಲಾ ಕೇಂದ್ರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ದ.ಕ. ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಶನಿವಾರ ಹಲವು ವಿಚಾರಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ತಿಂಗಳಿಗೆ ಕೇವಲ ನಾಲ್ಕರಿಂದ ಐದು ಹೆರಿಗೆಗಳಷ್ಟೇ ಆಗುತ್ತಿವೆ. ಏಕೆ ಹೀಗಾಗುತ್ತಿದೆ ಎಂದು ಪರಿಶೀಲನೆ ನಡೆಸಿದಾಗ ಅಲ್ಲಿ ಪ್ರಸೂತಿ ತಜ್ಞರು ಮತ್ತು ಅರಿವಳಿಕೆ ತಜ್ಞರ ಹುದ್ದೆ ಖಾಲಿ ಇದೆ ಎನ್ನುವುದು ತಿಳಿಯಿತು. ಇದರಿಂದಾಗಿ ಅಲ್ಲಿನ ಗರ್ಭಿಣಿಯರು 25 ಕಿ.ಮೀ. ದೂರದ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಹೋಗುತ್ತಿದ್ದಾರೆ. ತಕ್ಷಣ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಸೂಕ್ತ ಸವಲತ್ತು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾವೂರು ಠಾಣಾಧಿಕಾರಿ ವಿರುದ್ಧ ಆರೋಪ:
ಅಹವಾಲು ಸಭೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣ ಸೇರಿ 50ಕ್ಕೂ ಹೆಚ್ಚು ದೂರುಗಳನ್ನು ಆಲಿಸಿದ್ದು, ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಿಸಿದ್ದೇನೆ. ಕಾವೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ವಿಭಾಗದ ಎಸಿಪಿಗೆ ನಿರ್ದೇಶನ ನೀಡಲಾಗಿದೆ. ಮಹಿಳಾ ಸ್ನೇಹಿ ವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ಇರಬೇಕು. ಲಿಂಗ ಸೂಕ್ಷ್ಮತೆಯ ಬಗ್ಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮನವರಿಕೆ ಮಾಡಲು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಉಚಿತ ಹಾಸ್ಟೆಲ್ ಇದ್ದರೂ ಬಸ್ ಇಲ್ಲ:
ಕೋಟೆಕಾರು ಮಡ್ಯಾರಿನ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಇಲ್ಲದೆ ನಿತ್ಯ 100 ರು. ವ್ಯಯಿಸಬೇಕಾಗುತ್ತದೆ ಎಂದು ತಿಳಿಸಿದ್ದು, ಈ ಸಮಸ್ಯೆ ನೀಗಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿರುವುದಾಗಿ ಹೇಳಿದರು. ಹೊಸದಾಗಿ ನಿರ್ಮಾಣವಾದ ಮೀನು ಮಾರುಕಟ್ಟೆ ಪ್ರದೇಶವು ಹವಾನಿಯಂತ್ರಿತವಾಗಿದ್ದು, ಜಾಗದ ಕೊರತೆ, ಗಾಳಿಯ ಕೊರತೆ ಮತ್ತಿತರ ಕೊರತೆಗಳನ್ನು ಹೊಂದಿದೆ. ಎಸಿ ತಮಗೆ ಬೇಡ ಎಂದು ಮೀನುಗಾರ ಮಹಿಳೆಯರೇ ಹೇಳುತ್ತಿದ್ದಾರೆ. ಅದೆಲ್ಲವನ್ನೂ ಸರಿಪಡಿಸದೆ ಸ್ಟೇಟ್ ಬ್ಯಾಂಕ್ ಮೀನುಗಾರ ಮಹಿಳೆಯರನ್ನು ಸ್ಥಳಾಂತರ ಮಾಡದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕ್ರಮ ಕೈಗೊಂಡ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಆ್ಯಸಿಡ್ ದಾಳಿ ಸಂತ್ರಸ್ತೆಗೆ ಪರಿಹಾರ:
ಬೆಳ್ತಂಗಡಿಯಲ್ಲಿ ಕುಡಿತದ ಅಮಲಿನಲ್ಲಿ ಪತ್ನಿ ಮೇಲೆ ಪತಿಯೇ ಆ್ಯಸಿಡ್ ಚೆಲ್ಲಿದ ಘಟನೆ ಇತ್ತೀಚೆಗೆ ನಡೆದಿದ್ದು, ಇದರಿಂದ ಸಂತ್ರಸ್ತೆಯ ಎದೆ ಭಾಗ, ಕೈ ಸುಟ್ಟು ಹೋಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯನ್ನು ಭೇಟಿಯಾಗಿ, ಸೂಕ್ತ ಪರಿಹಾರ, ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಜಿಲ್ಲೆಯಲ್ಲಿ ಈ ಹಿಂದಿನ ಮೂರು ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಪರಿಹಾರ ಹಾಗೂ ಉಚಿತ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಬಜೆಟ್‌ನಲ್ಲಿ ಮಹಿಳಾ ಪರ ಬೇಡಿಕೆಗಳು ಈಡೇರಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮಿ ಚೌಧರಿ, ಮಹಿಳಾ ಆಯೋಗಕ್ಕೆ ಕಾಲ್ ಸೆಂಟರ್‌ನ ಬೇಡಿಕೆ ಇರಿಸಲಾಗಿತ್ತು. ಸಂತ್ರಸ್ತೆ ತಾನಿರುವ ಸ್ಥಳದಲ್ಲೇ ಆಯೋಗದ ಕಾಲ್ ಸೆಂಟರ್‌ಗೆ ದೂರು ನೀಡುವ ವ್ಯವಸ್ಥೆ ಆಗಬೇಕು. ದೂರು ಯಾವ ಹಂತದಲ್ಲಿದೆ ಎಂಬುದನ್ನು ಆಕೆ ಖುದ್ದು ಗಮನಿಸುವಂತಾಗಬೇಕು. ಅಂತಹ ವ್ಯವಸ್ಥೆಗಾಗಿ ಸರಕಾರದಿಂದ ಹಣಕಾಸಿನ ನೆರವನ್ನು ಕೋರಲಾಗಿದ್ದು ನೀಡುವ ಆಶ್ವಾಸನೆ ಇದೆ ಎಂದರು.
ಹೆಚ್ಚಿನ ಮಹಿಳಾ ದೌರ್ಜನ್ಯಗಳು ಮದ್ಯಪಾನದಿಂದಾಗಿ ಆಗುತ್ತಿದೆ ಎಂದು ಹೇಳಿದ ನಾಗಲಕ್ಷ್ಮಿ ಚೌಧರಿ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇ. 99 ರಷ್ಟು ಕುಡಿತದ ಅಮಲಿನಿಂದ ಸಂಭವಿಸಿವೆ. ಈಗಾಗಲೇ ರಾಜ್ಯ ಸರಕಾರಕ್ಕೆ ಆಯೋಗವು ಮದ್ಯಪಾನ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ಪತ್ರ ಬರೆದಿದೆ. ಇತರ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದ ಅಂಗಡಿಗಳಲ್ಲಿಯೂ ಮದ್ಯ ಮಾರಾಟವಾಗುವ ದೂರುಗಳು ಬರುತ್ತವೆ. ಈ ಕಾರಣದಿಂದ ರಾಜ್ಯದಲ್ಲಿ ಮದ್ಯಪಾನ ನಿಷೇಧ ಆಗಬೇಕೆಂಬ ಆಗ್ರಹ ಇದೆ ಎಂದು ಹೇಳಿದರು.
30-07-26 09:27 pm
HK News Staffer
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
30-07-26 07:51 pm
HK News Staffer
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಮಂಗಳೂರು, ಉಳ್ಳಾಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ದ...
28-07-26 10:28 pm
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
30-07-26 09:24 pm
HK News Staffer
ಫೇಸ್ಬುಕ್ ಫ್ರೆಂಡ್ಶಿಪ್ ದುಬಾರಿ ! ಚಿನ್ನದ ಪಾರ್ಸೆ...
30-07-26 08:31 pm
ನಿವೃತ್ತ ಬಸ್ ಡ್ರೈವರ್ ಮನೆಯಲ್ಲಿ 48 ಕೋಟಿಗೂ ಅಧಿಕ...
30-07-26 02:16 pm
ಪರಿಷತ್ ಸ್ಥಾನ ಕೊಡಿಸುವುದಾಗಿ ಹೇಳಿ ಒಂದೂವರೆ ಕೋಟಿ ಪ...
30-07-26 12:18 pm
ಮಂಗಳೂರು ಪೊಲೀಸರಿಂದ 82 ಕೋಟಿ ರೂ. ಮೌಲ್ಯದ ಡ್ರಗ್ಸ್...
29-07-26 10:45 pm