ಬ್ರೇಕಿಂಗ್ ನ್ಯೂಸ್
06-03-26 11:04 pm HK News Desk ದೇಶ - ವಿದೇಶ
ಟೆಲ್ ಅವೀವ್, ಮಾರ್ಚ್ 6: ಇರಾನ್ ಮತ್ತು ಇಸ್ರೇಲ್ ಯುದ್ಧ ಮುಂದುವರೆದಿದ್ದು ಶುಕ್ರವಾರ ಇಸ್ರೇಲ್ ವಾಯುಪಡೆಯ 50ರಷ್ಟು ಫೈಟರ್ ವಿಮಾನಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದೆ. ಸುಮಾರು 50 ಯುದ್ಧ ವಿಮಾನಗಳು ಟೆಹ್ರಾನ್ನಲ್ಲಿರುವ ಭೂಗತ ಬಂಕರ್ಗಳ ಮೇಲೆ ದಾಳಿ ನಡೆಸಿವೆ.
ಇಸ್ರೇಲ್ನ ಗುಪ್ತಚರ ಸಂಸ್ಥೆ 'ಮೊಸಾದ್' ಮತ್ತು ಅಮೆರಿಕದ 'ಸಿಐಎ' ನೀಡಿದ ನಿಖರವಾದ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗಾಗಿ ನಿರ್ಮಿಸಲಾಗಿದ್ದ ಭೂಗತ ಬಂಕರ್ ಈ ದಾಳಿಯ ಮುಖ್ಯ ಗುರಿಯಾಗಿತ್ತು. ಖಮೇನಿ ಈಗಾಗಲೇ ಹತರಾಗಿದ್ದರೂ ಆ ಬಂಕರ್ ಗಳನ್ನು ಇತರ ಹಿರಿಯ ಅಧಿಕಾರಿಗಳು ಯುದ್ಧ ನಿರ್ವಹಣೆಗಾಗಿ ಬಳಸುತ್ತಿದ್ದರು.

ನಿರಂತರ ದಾಳಿಯಿಂದಾಗಿ ಇರಾನ್ ಕಮಾಂಡ್ ಸೆಂಟರ್ ಮತ್ತು ಕಂಟ್ರೋಲ್ ವ್ಯವಸ್ಥೆಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಟೆಹ್ರಾನ್ ಹೃದಯಭಾಗದಲ್ಲಿ ಭೂಮಿಯಡಿ ಹರಡಿಕೊಂಡಿದ್ದ ಈ ಬಂಕರ್ ವ್ಯವಸ್ಥೆಯು ಅತ್ಯಂತ ಸುಸಜ್ಜಿತವಾಗಿತ್ತು.
ಇದಲ್ಲದೆ, ಈ ದಾಳಿಯಲ್ಲಿ ಇರಾನ್ನ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕದ ನೆಲೆಗಳಿರುವ ನೆರೆಯ ರಾಷ್ಟ್ರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇದೇ ವೇಳೆ, ಅಮೆರಿಕದ ಮಿಲಿಟರಿಯು ಇರಾನಿನ ಡ್ರೋಣ್ ವಾಹಕ ಐರಿಸ್ ಶಾಹೀದ್ ಬಾಘೇರಿ ಎನ್ನುವ ನೌಕೆಯೊಂದನ್ನು ಬಾಂಬ್ ದಾಳಿಯಲ್ಲಿ ಉಡಾಯಿಸಿದೆ. 180 ಮೀಟರ್ ರನ್ ವೇಯನ್ನು ಹೊಂದಿದ್ದ ಈ ನೌಕೆಯು 22 ಸಾವಿರ ಮೈಲುಗಳಷ್ಟು ಉದ್ದಕ್ಕೆ ಒಮ್ಮೆ ಪೂರೈಸಿದ ತೈಲದಲ್ಲಿ ಸಾಗುವ ಸಾಮರ್ಥ್ಯ ಹೊಂದಿತ್ತು.
The war between Iran and Israel intensified on Friday as the Israeli Air Force launched a large-scale strike on Iran’s capital, Tehran. Around 50 Israeli fighter jets reportedly carried out coordinated attacks targeting underground bunker facilities in the city.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am