ಬ್ರೇಕಿಂಗ್ ನ್ಯೂಸ್
09-04-24 08:42 pm HK News Desk ದೇಶ - ವಿದೇಶ
ನವದೆಹಲಿ, ಏ 09: ದೆಹಲಿ ಅಬಕಾರಿ ಹಗರಣದಲ್ಲಿ ತಮ್ಮನ್ನು ಇಡಿ ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಕೇಜ್ರಿವಾಲ್‌ಗೆ ದೊಡ್ಡ ಹಿನ್ನಡೆಯಾಗಿದ್ದು, ಸದ್ಯಕ್ಕೆ ರಿಲೀಫ್ ಸಿಕ್ಕಿಲ್ಲ.
ಹಗರಣದಲ್ಲಿ ಇಡಿ ಬಂಧನವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಸ್ಪೆಷಲ್ ಟ್ರೀಟ್‌ಮೆಂಟ್ ನೀಡಲು ಸಾಧ್ಯವಿಲ್ಲ. ಇಡಿ ಸಂಗ್ರಹಿಸಿದ ಸಾಕ್ಷ್ಯಗಳು ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಿವೆ ಎಂದು ಅರ್ಜಿಯನ್ನು ವಜಾ ಮಾಡಿದೆ.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು. ಇತ್ತ ಇಡಿ ಪರವಾಗಿ ಎಸ್‌ವಿ ರಾಜು ಪ್ರತಿನಿಧಿಸಿದ್ದರು.
ಕೇಸ್‌ನಲ್ಲಿ ವಾದ ಮಾಡಿದ್ದ ಇಡಿ, ತನಿಖೆ ಪ್ರಮುಖ ಹಂತದಲ್ಲಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಹಗರಣದಲ್ಲಿ ಹಣದ ವಹಿವಾಟು ನಡೆದಿದೆ. ಇನ್ನು ಕೇಜ್ರಿವಾಲ್ ಬಂಧನಕ್ಕೂ ಚುನಾವಣೆಗೂ ಬಂಧನಕ್ಕೂ ಸಂಬಂಧವೇ ಇಲ್ಲ. 9 ಬಾರಿ ನೋಟೀಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎಂಬ ಕಾರಣಕ್ಕೆ ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಬಳಿಕ ವಿಚಾರಣಾ ನ್ಯಾಯಾಲಯವು 6 ದಿನಗಳ ಇಡಿ ಕಸ್ಟಡಿಗೆ ನೀಡಿತ್ತು. ಬಳಿಕ 4 ದಿನ ವಿಸ್ತರಿಸಿ ಆ ಬಳಿಕ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
The Delhi High Court on April 9 dismissed a plea by Chief Minister Arvind Kejriwal, who is in judicial custody in a money laundering case linked with the alleged excise scam, challenging his arrest. Justice Swarana Kanta Sharma pronouncing the order said the national AAP convenor’s arrest by the Enforcement Directorate cannot be termed as ‘illegal’.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 12:47 pm
HK News Desk
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm