ಬ್ರೇಕಿಂಗ್ ನ್ಯೂಸ್
07-04-24 07:03 pm HK News Desk ದೇಶ - ವಿದೇಶ
ನವದೆಹಲಿ, ಎ.7: ಜಗತ್ತಿನಲ್ಲಿ ವಾಸ ಇರುವ ಅತಿ ಹಿರಿಯ ವ್ಯಕ್ತಿಯೆಂಬ ಹೆಗ್ಗಳಿಕೆ ಇಂಗ್ಲೆಂಡಿನ 111 ವರ್ಷದ ಅಜ್ಜನ ತಲೆಗೇರಿದೆ. 111 ವರ್ಷದ ಜಾನ್ ಅಲ್ಫ್ರೆಡ್ ಟಿನ್ನಿಸ್ ವುಡ್ ಜಗತ್ತಿನಲ್ಲಿ ಜೀವಂತ ಇರುವ ಅತಿ ಹಿರಿಯ ವ್ಯಕ್ತಿಯೆಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದಾರೆ.
ಜಗತ್ತಿನಲ್ಲಿ ಜೀವಿತದಲ್ಲಿರುವ ಅತಿ ಹಿರಿಯ ವ್ಯಕ್ತಿಯೆಂಬ ದಾಖಲೆ ದಕ್ಷಿಣ ಅಮೆರಿಕದ ವೆನಿಜುವೆಲಾ ದೇಶದಲ್ಲಿ ವಾಸವಿದ್ದ ಜುವಾನ್ ವಿಸೆಂಟ್ ಪೆರೇಝ್ ಅವರದ್ದಿತ್ತು. ಮಾರ್ಚ್ ತಿಂಗಳಲ್ಲಿ ತಮ್ಮ 114ನೇ ವರ್ಷದಲ್ಲಿ ಜುವಾನ್ ವಿಸೆಂಟ್ ಮೃತಪಟ್ಟಿದ್ದರು. ಎರಡನೇ ಅತಿ ಹಿರಿಯ ಎಂಬ ಶ್ರೇಯಸ್ಸು ಹೊಂದಿದ್ದ ಜಪಾನ್ ಮೂಲದ ಗಿಸಬುರೋ ಸೊನೊಬೆ ತಮ್ಮ 112ನೇ ವಯಸ್ಸಿನಲ್ಲಿ ಮಾರ್ಚ್ 31ರಂದು ತೀರಿಕೊಂಡಿದ್ದರು.
ಸದ್ಯಕ್ಕೆ ಅತಿ ಹಿರಿಯ ಜೀವಂತ ವ್ಯಕ್ತಿಯೆಂಬ ಹೆಗ್ಗಳಿಕೆ ಇಂಗ್ಲೆಂಡಿನ ಜಾನ್ ಅಲ್ಫ್ರೆಡ್ ಟಿನ್ನಿಸ್ ವುಡ್ ಅವರ ಪಾಲಾಗಿದೆ. ಇಂಗ್ಲೆಂಡಿನ ಸೌತ್ ಪೋರ್ಟ್ ನಲ್ಲಿ ವಾಸ ಇರುವ ಜಾನ್ ಅಲ್ಫ್ರೆಡ್ ಬ್ರಿಟಿಷ್ ಆರ್ಮಿಯಲ್ಲಿ ಕೆಲಸ ಮಾಡಿದವರು. ಲಿವರ್ ಪೂಲ್ ನಗರದಲ್ಲಿ 1912ರ ಆಗಸ್ಟ್ 26ರಂದು ಜನಿಸಿದ್ದ ಜಾನ್ ಅಲ್ಫ್ರೆಡ್ ಎರಡನೇ ಜಾಗತಿಕ ಯುದ್ಧದಲ್ಲಿ ಬ್ರಿಟಿಷ್ ಆರ್ಮಿ ಪರವಾಗಿ ಹೋರಾಡಿದ್ದರು. ಸೇನೆಯಿಂದ ನಿವೃತ್ತಿಯಾದ ಬಳಿಕ ಅಕೌಂಟೆಂಟ್ ಆಗಿ ಕೆಲಸ ಮಾಡಿದ್ದರು.
ಹಿತ ಮಿತ ಆಹಾರವೇ ಸುದೀರ್ಘ ಜೀವನದ ಗುಟ್ಟು ಎಂದು ಇದೇ ಸಂದರ್ಭದಲ್ಲಿ ಜಾನ್ ಅಲ್ಫ್ರೆಡ್ ಹೇಳಿದ್ದಾರೆ. ಅವರೆಂದೂ ಸ್ಮೋಕ್ ಮಾಡಿಲ್ವಂತೆ. ಅಪರೂಪಕ್ಕೆ ಡ್ರಿಂಕ್ಸ್ ಮಾಡಿದ್ದಾರೆ. ಯಾವುದೇ ಸ್ಪೆಷಲ್ ಡಯಟ್ ಇಲ್ಲ. ವಾರಕ್ಕೊಮ್ಮೆ ಮೀನು ಮತ್ತು ಚಿಪ್ಸ್ ತಿನ್ನುವುದನ್ನು ಅಭ್ಯಾಸ ಮಾಡಿದ್ದಾರೆ. ಅತಿಯಾಗಿ ಕುಡಿಯುವುದು, ಅತಿಯಾಗಿ ತಿನ್ನುವುದು, ಅತಿಯಾಗಿ ವ್ಯಾಯಾಮ, ನಡಿಗೆ ಮಾಡುವುದು ಅಥವಾ ಇನ್ನಾವುದನ್ನೇ ಆಗಲಿ ಅತಿಯಾಗಿ ಮಾಡಿದರೆ ಅದರಿಂದ ನಿಮ್ಮ ದೇಹಕ್ಕೇ ತೊಂದರೆ ಎಂದು ಜಾನ್ ಅಲ್ಫ್ರೆಡ್ ಹೇಳುತ್ತಾರೆ. ಮತ್ತೆ ದೀರ್ಘ ಜೀವನ, ಕ್ಷಣಿಕ ಜೀವನ, ಅದೆಲ್ಲವೂ ಅದೃಷ್ಟ ಅಷ್ಟೇ. ನಾವೇನೂ ಮಾಡಕ್ಕಾಗಲ್ಲ ಎಂದಿದ್ದಾರೆ.
The world’s oldest man says the secret to his long life is luck, moderation — and fish and chips every Friday. Englishman John Alfred Tinniswood, 111, has been confirmed as the new holder of the title by Guinness World Records. It follows the death of the Venezuelan record-holder, Juan Vicente Pérez, this month at the age of 114. Gisaburo Sonobe from Japan, who was next longest-lived, died March 31 at 112.
07-10-25 07:32 pm
Bangalore Correspondent
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
ಮುಗಿಯದ ಜಾತಿ ಗಣತಿ ; ಅ.8ರಿಂದ ಶಾಲಾ ಅವಧಿ ಕಡಿತ, ಮಧ...
06-10-25 10:47 pm
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
07-10-25 01:53 pm
HK News Desk
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
07-10-25 05:17 pm
Mangalore Correspondent
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
Madhu Bangarappa: ರಾಜ್ಯದಲ್ಲಿ 18,500ಕ್ಕೂ ಅಧಿಕ...
06-10-25 10:42 pm
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm