IAS Ananya Singh, UPSC Exam: ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸ್ ; 22ರ ಹರೆಯದಲ್ಲೇ ಯುಪಿಎಸ್ಸಿ ತೇರ್ಗಡೆಯಾದ ಪ್ರಯಾಗರಾಜ್ ಯುವತಿ

27-03-24 09:43 pm       HK News Desk   ದೇಶ - ವಿದೇಶ

ಐಎಎಸ್ ಪರೀಕ್ಷೆ ತೇರ್ಗಡೆ ಮಾಡುವುದಕ್ಕೆ ಸಾಮಾನ್ಯವಾಗಿ 3-4 ಬಾರಿ ಪ್ರಯತ್ನ ಪಡಬೇಕಾಗುತ್ತದೆ. ಆದರೆ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಮೂಲದ 22 ವರ್ಷದ ಯುವತಿಯೊಬ್ಬಳು ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸ್ ಮಾಡಿ ಹುಬ್ಬೇರಿಸಿದ್ದಾಳೆ.

ನವದೆಹಲಿ, ಮಾ.27: ಐಎಎಸ್ ಪರೀಕ್ಷೆ ತೇರ್ಗಡೆ ಮಾಡುವುದಕ್ಕೆ ಸಾಮಾನ್ಯವಾಗಿ 3-4 ಬಾರಿ ಪ್ರಯತ್ನ ಪಡಬೇಕಾಗುತ್ತದೆ. ಆದರೆ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಮೂಲದ 22 ವರ್ಷದ ಯುವತಿಯೊಬ್ಬಳು ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸ್ ಮಾಡಿ ಹುಬ್ಬೇರಿಸಿದ್ದಾಳೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಅನನ್ಯಾ ಸಿಂಗ್ ಪದವಿ ಪೂರೈಸಿದ ಬಳಿಕ ಒಂದೇ ವರ್ಷದಲ್ಲಿ ಸಿದ್ಧತೆ ಕೈಗೊಂಡು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾಳೆ. ಪ್ರಯಾಗರಾಜ್ ಜಿಲ್ಲೆಯ ಸೈಂಟ್ ಮೇರೀಸ್ ಕಾನ್ವೆಂಟ್ ಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಳು. ಹತ್ತನೇ ಕ್ಲಾಸಿನಲ್ಲಿ 96 ಶೇಕಡಾ ಅಂಕ ಪಡೆದಿದ್ದರೆ, ಪಿಯುಸಿಯನ್ನು 98.25 ಶೇಕಡಾ ಅಂಕ ಪಡೆದು ತೇರ್ಗಡೆಯಾಗಿದ್ದಳು. ಸಿಐಎಸ್ ಇ ನಡೆಸಿದ ಎರಡೂ ಪರೀಕ್ಷೆಯಲ್ಲಿ ಅನನ್ಯಾ ಸಿಂಗ್ ಜಿಲ್ಲೆಗೆ ಟಾಪರ್ ಆಗಿದ್ದಳು.

ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಪದವಿ ಗಳಿಸಿದ್ದ ಅನನ್ಯಾಗೆ ಸಣ್ಣಂದಿನಲ್ಲೇ ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸಿತ್ತು. ಇದೇ ಹಿನ್ನೆಲೆಯಲ್ಲಿ ಐಎಎಸ್ ಪರೀಕ್ಷೆ ಬರೆಯಬೇಕೆಂದು ಕಲಿಕೆಯಲ್ಲಿ ತೊಡಗಿದ್ದಳು. ಯುಪಿಎಸ್ಸಿ ಪರೀಕ್ಷೆ ಬರೆಯುವುದಕ್ಕಾಗಿ 2019ರಿಂದಲೇ ಸಿದ್ಧತೆಯಲ್ಲಿ ತೊಡಗಿದ್ದಳು. ಇದೀಗ ಪರೀಕ್ಷೆ ಬರೆದು ರಾಷ್ಟ್ರ ಮಟ್ಟದಲ್ಲಿ 51ನೇ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ರ್ಯಾಂಕ್ ಪಡೆದಿದ್ದು ನನಗೇ ಶಾಕ್ ಆಗಿದೆ ಎಂದು ಹೇಳಿಕೊಂಡಿರುವ ಅನನ್ಯಾ ಸಿಂಗ್, ಬಾಲ್ಯದ ಕನಸನ್ನು ಪೂರೈಸಿದ ಸಂಭ್ರಮದಲ್ಲಿದ್ದಾಳೆ.

ಪರೀಕ್ಷೆಯ ಉತ್ತರಗಳನ್ನು ಬರೆಯುತ್ತಲೇ ಅಭ್ಯಾಸದಲ್ಲಿ ತೊಡಗಿದ್ದೆ. ಇದರಿಂದಲೇ ನನಗೆ ಮೊದಲ ಪ್ರಯತ್ನದಲ್ಲೇ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಕೇಡರಿನಲ್ಲಿ ಸೇವೆ ಮಾಡುವುದಕ್ಕೆ ಅನನ್ಯಾ ಆಯ್ಕೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಅನನ್ಯಾಗೆ ಇನ್ ಸ್ಟಾ ಗ್ರಾಮಿನಲ್ಲಿ 48 ಸಾವಿರ ಜನ ಫಾಲೋವರ್ ಇದ್ದಾರೆ.

UPSC Civil Services Exam (CSE) is one of India’s toughest exams and aspirants need years of preparation, dedication and hard work. However, IAS Ananya Singh cracked the exam in just one year of preparation that too without any coaching.