America Ship, Baltimore bridge video; ಅಮೇರಿಕಾದ 3 ಕಿ.ಮೀ ಉದ್ದದ ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಕಾರ್ಗೋ ಹಡಗು ; ಎದೆ ಝಲ್ ಎನ್ನಿಸುವ ಭಯಾನಕ ವಿಡಿಯೋ ಸೆರೆ, ಹಲವು ವಾಹನ, ಜನರು ಮುಳುಗಡೆ

27-03-24 04:56 pm       HK News Desk   ದೇಶ - ವಿದೇಶ

ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದು ಮಂಗಳವಾರ ಕುಸಿದುಬಿದ್ದಿದೆ. ಸೇತುವೆ ನೀರಿಗೆ ಉರುಳಿದ್ದು, ಕೆಲವು ವಾಹನಗಳು ಸಹ ನೀರುಪಾಲಾಗಿವೆ.

ವಾಷಿಂಗ್ಟನ್, ಮಾ 27: ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದು ಮಂಗಳವಾರ ಕುಸಿದುಬಿದ್ದಿದೆ. ಸೇತುವೆ ನೀರಿಗೆ ಉರುಳಿದ್ದು, ಕೆಲವು ವಾಹನಗಳು ಸಹ ನೀರುಪಾಲಾಗಿವೆ. ಇದರಿಂದ ಭಾರಿ ಪ್ರಮಾಣದ ಸಾವು ನೋವಿನ ಭೀತಿ ಉಂಟಾಗಿದೆ.

ಈ ಸಿನಿಮೀಯ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಂಟೇನರ್ ಹಡಗು, ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಸ್ತಂಭಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅದರ ಕೆಲವು ಭಾಗಗಳು ಪಾಟಾಪ್‌ಸ್ಕೋ ನದಿಗೆ ಉರುಳಿದೆ. ಬೃಹತ್ ಸೇತುವೆಯ ಪ್ರಮುಖ ಭಾಗ ನದಿಗೆ ಬಿದ್ದಿದೆ.

Baltimore bridge collapses: All we know so far

Baltimore bridge collapse: Ship that crashed has a troubled history | World  News - Business Standard

ಅಮೆರಿಕದ ಸ್ಥಳೀಯ ಕಾಲಮಾನ ರಾತ್ರಿ 1.30 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಕನಿಷ್ಠ 20 ಮಂದಿ ನೀರಿಗೆ ಬಿದ್ದಿರುವ ಶಂಕೆಯೊಂದಿಗೆ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸಿವೆ. ಸುಮಾರು 3 ಕಿಮೀ ಉದ್ದದ ಬೃಹತ್ ಸೇತುವೆ ಕುಸಿತದ ಘಟನೆಯ ವಿಡಿಯೋ ವೈರಲ್ ಆಗಿದೆ. 300 ಮೀಟರ್ ಉದ್ದದ ಹಡಗು, ಉಕ್ಕಿನ ಸೇತುವೆಯನ್ನು ನೀರುಪಾಲು ಮಾಡಿದೆ. ಕ್ಷಣಮಾತ್ರದಲ್ಲಿ ಸೇತುವೆ ಕುಸಿದಿದ್ದು, ಈ ವೇಳೆ ಸಣ್ಣ ಪ್ರಮಾಣದ ಹಲವು ಸ್ಫೋಟಗಳು ಉಂಟಾಗಿವೆ.

ಡಿಕ್ಕಿ ಹೊಡೆದ ರಭಸಕ್ಕೆ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಹುಭಾಗ ನೀರಿನಲ್ಲಿ ಮುಳುಗಿದೆ. ಸಿಂಗಪುರ ಧ್ವಜವುಳ್ಳ ಕಂಟೇನರ್ ಹಡಗು 'ಡಾಲಿ', ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ ಎಂದು ಸಿನರ್ಜಿ ಮೆರೈನ್ ಗ್ರೂಪ್‌ ಮಾಲೀಕ ಗ್ರೇಸ್ ಓಷನ್ ಪ್ರೈ ಲಿ ತಿಳಿಸಿದೆ. ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಯಾವುದೇ ಗಾಯಗಳಾದ ವರದಿಯಾಗಿಲ್ಲ ಎಂದು ಹೇಳಿದೆ. ವಿಶಾಲವಾದ ಪಿಲ್ಲರ್‌ಗಳ ನಡುವೆ ಸಾಕಷ್ಟು ಅಂತರವಿದ್ದರೂ, ಈ ಹಡಗು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Major Baltimore bridge collapses after ship collision

Baltimore bridge collapse: 6 presumed dead | CTV News

"ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

1.6 ಮೈಲು (2.6 ಕಿಮೀ) ಉದ್ದದ ನಾಲ್ಕು ಲೇನ್ ಸೇತುವೆಯನ್ನು 1977ರಲ್ಲಿ ಉದ್ಘಾಟಿಸಲಾಗಿತ್ತು. ಪ್ರತಿ ವರ್ಷ ಕೋಟ್ಯಂತರ ವಾಹನಗಳ ಇದರ ಮೇಲೆ ಓಡಾಡುತ್ತವೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಪಕ್ಕದಲ್ಲಿನ ಪೂರ್ವ ಕರಾವಳಿಯ ಕೈಗಾರಿಕಾ ನಗರವಾದ ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಸಂಪರ್ಕಗಳಿಗೆ ಈ ಸೇತುವೆ ಪ್ರಮುಖವಾಗಿದೆ.

ಅಮೆರಿಕದ ರಾಷ್ಟ್ರಗೀತೆಯಾದ 'ದಿ ಸ್ಟಾರ್- ಸ್ಪಾಂಗಲ್ಡ್ ಬ್ಯಾನರ್' ಅನ್ನು ರಚಿಸಿದ ಅಮೆರಿಕದ ವಕೀಲ, ಕವಿ ಫ್ರಾನ್ಸಿಸ್ ಸ್ಕಾಟ್ ಕೀ ಅವರ ಸ್ಮರಣಾರ್ಥ ಬಾಲ್ಟಿಮೋರ್ ಸೇತುವೆಗೆ ಅವರ ಹೆಸರು ಇರಿಸಲಾಗಿದೆ.

ದುರಂತ ಸಂಭವಿಸುವ ಮುನ್ನ ‘ಮೇ ಡೇ’ ಕರೆ!

ವಿಮಾನ ಹಾಗೂ ಹಡಗುಗಳಲ್ಲಿ ಯಾವುದೇ ರೀತಿಯ ಅಪಾಯ ಸನ್ನಿವೇಶ ಎದುರಾದಾಗ ‘ಮೇ ಡೇ’ ಕರೆ ಕೊಡಲಾಗುತ್ತದೆ. ಮಂಗಳವಾರ ಉಕ್ಕಿನ ಸೇತುವೆಗೆ ಹಡಗು ಡಿಕ್ಕಿ ಹೊಡೆಯುವ ಮುನ್ನವೂ ಹಡಗಿನಲ್ಲಿ ಇದ್ದ ಭಾರತೀಯ ಸಿಬ್ಬಂದಿ ಅಮೆರಿಕದ ಸ್ಥಳೀಯ ಆಡಳಿತಕ್ಕೆ ಮೇ ಡೇ ಕರೆ ಕೊಟ್ಟಿತ್ತು. ಹೀಗಾಗಿ, ಉಕ್ಕಿನ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು.

"ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

Wow! This is a must see. In the middle of the night a cargo ship hit the Francis Scott Key bridge in Baltimore collapsing it. You are witnessing America in rapid decline now. pic.twitter.com/76VXKaFaBW

— TheLastDon (@TheLastDon222) March 26, 2024

The US Coast Guard says it is suspending its search and rescue efforts for the six individuals still missing after the collapse of the Francis Scott Key Bridge in Baltimore.  “I’d like to announce tonight that based on the length of time that we’ve gone in this search, the extensive search efforts we’ve put into it, the water temperature, that at this point we do not believe that we’re going to find any of these individuals still alive,” Rear Adm. Shannon Gilreath told reporters at a Tuesday evening news conference.