ಬ್ರೇಕಿಂಗ್ ನ್ಯೂಸ್
21-03-24 11:07 am HK News Desk ದೇಶ - ವಿದೇಶ
ನವದೆಹಲಿ, ಮಾ 21: ದೇಶ ಬದಲಾವಣೆ ಬಯಸುತ್ತಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ಹೇಳುತ್ತಿರುವ ಗ್ಯಾರಂಟಿಗಳು 2004 ರ 'ಇಂಡಿಯಾ ಶೈನಿಂಗ್' ಘೋಷಣೆಯಂತೆಯೇ ಇರಲಿವೆ ಎಂದು ಮಂಗಳವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಕುರಿತು ಚರ್ಚಿಸಲು ಮತ್ತು ಅನುಮೋದಿಸಲು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಪ್ರತಿಯೊಂದು ವಿಷಯವನ್ನು ಎಲ್ಲಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೆಗೆದುಕೊಂಡು ದೇಶಾದ್ಯಂತ ಪ್ರತಿ ಹಳ್ಳಿ, ಪಟ್ಟಣ ಹಾಗೂ ಮನೆ ಮನೆಗೆ ತಲುಪಿಸುವಂತೆ ಒತ್ತಾಯಿಸಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಶ್ಲಾಘಿಸಿದ ಖರ್ಗೆ, ಈ ಮೂಲಕ ಜನರ ನಿಜವಾದ ಸಮಸ್ಯೆಯತ್ತ ದೇಶದ ಗಮನವನ್ನು ಸೆಳೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ ಎಂದು ಹೇಳಿದರು.
ಇವುಗಳು ಕೇವಲ ರಾಜಕೀಯ ಯಾತ್ರೆಗಳಾಗಿರಲಿಲ್ಲ, ಆದರೆ ನಮ್ಮ ರಾಜಕೀಯ ಇತಿಹಾಸದಲ್ಲಿ ಅತಿದೊಡ್ಡ ಜನಸಂಪರ್ಕ ಆಂದೋಲನಕ್ಕಾಗಿ ಗುರುತಿಸಲ್ಪಡುತ್ತವೆ. ನಮ್ಮ ಕಾಲದಲ್ಲಿ ಯಾರೂ ಇಂತಹ ಬೃಹತ್ ಕಸರತ್ತನ್ನು ಕೈಗೊಂಡಿಲ್ಲ ಎಂಬ ಅಂಶವನ್ನು ಯಾರೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಈ ಎರಡೂ ಯಾತ್ರೆಗಳು ಸಮಸ್ಯೆಯನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾದವು ಎಂದು ತಿಳಿಸಿದರು.
ಖರ್ಗೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಚಿದಂಬರಂ ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪಕ್ಷವು 25 ಗ್ಯಾರಂಟಿಗಳೊಂದಿಗೆ 'ಐದು ನ್ಯಾಯ' (ನ್ಯಾಯಗಳು)-'ಭಾಗಿದಾರಿ ನ್ಯಾಯ', 'ಕಿಸಾನ್ ನ್ಯಾಯ', 'ನಾರಿ ನ್ಯಾಯ', 'ಶ್ರಮಿಕ್ ನ್ಯಾಯ' ಮತ್ತು 'ಯುವ' ನ್ಯಾಯ' ವಿಷಯದ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದೆ.
ಮೋದಿ ಕಿ ಚೀನೀ ಗ್ಯಾರಂಟಿ ;
ನರೇಂದ್ರ ಮೋದಿ ಸರ್ಕಾರವು ಚೀನಾದೊಂದಿಗೆ ವ್ಯವಹರಿಸುವಾಗ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದ್ದು, ನಮ್ಮದೇ ನೆಲವಾದ ಲಡಾಕ್‌ನ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಲಡಾಕ್‌ನಲ್ಲಿ ಸಂವಿಧಾನದ ಆರನೇ ಅನುಚ್ಛೇದದ ಅಡಿಯಲ್ಲಿ ಬುಡಕಟ್ಟು ಸಮುದಾಯಗಳ ರಕ್ಷಣೆಗಾಗಿ ಸಾರ್ವಜನಿಕ ಬೆಂಬಲದ ಒಗ್ಗಟ್ಟಿನ ಧ್ವನಿ ಮೊಳಗುತ್ತಿದೆ' ಎಂದು ಅವರು ಹೇಳಿದರು.
ಈ ಬಗ್ಗೆ 'ಎಕ್ಸ್' ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು, 'ಲಡಾಕ್‌ನ ಜನರಿಗೆ ಸಾಂವಿಧಾನಿಕ ಹಕ್ಕುಗಳನ್ನು ಭದ್ರಪಡಿಸುವ 'ಮೋದಿ ಕಿ ಗ್ಯಾರಂಟಿ'ಯು 'ಭಾರಿ ನಂಬಿಕೆ ದ್ರೋಹ'ವಾಗಿಯೇ ಉಳಿದಿದೆ. ಅದು ನಕಲಿಯಾಗಿದೆ ಮತ್ತು ಚೀನೀ ಸ್ವರೂಪದಲ್ಲಿದೆ' ಎಂದು ಟೀಕಿಸಿದ್ದಾರೆ.
ಸಂವಿಧಾನದ ಆರನೇ ಅನುಚ್ಛೇದದ ಅಡಿಯಲ್ಲಿ ಲಡಾಕ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಲಡಾಕ್ ರಕ್ಷಣೆಗೆ ಮತ್ತು ಗಡಿಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳನ್ನು ಭದ್ರಪಡಿಸಲು ಕಾಂಗ್ರೆಸ್ ಎಂದಿನಂತೆಯೇ ಬದ್ಧವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
The Congress has raised questions about China, wondering when the status quo ante on the Ladakh border would be restored, in an obvious attack on Prime Minister Narendra Modi ahead of the parliamentary elections.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm