ಬ್ರೇಕಿಂಗ್ ನ್ಯೂಸ್
20-02-24 09:11 pm HK News Desk ದೇಶ - ವಿದೇಶ
ನವದೆಹಲಿ, ಫೆ.20: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಚಂಡೀಗಢ ಮೇಯರ್ ಸ್ಥಾನದ ಚುನಾವಣೆಯ ಬಗ್ಗೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಗೆದ್ದ ಅಭ್ಯರ್ಥಿಯೆಂದು ಘೋಷಿಸಿದೆ. ಅಲ್ಲದೆ, ಮತಪತ್ರಗಳನ್ನು ತಿರುಚಿದ್ದ ಚುನಾವಣಾಧಿಕಾರಿ ಅನಿಲ್ ಮೆಸ್ಸಿ ಅವರ ವಿರುದ್ಧ ಛೀಮಾರಿ ಹಾಕಿದ್ದು, ಕಾನೂನು ಕ್ರಮಕ್ಕೆ ನೋಟೀಸ್ ಮಾಡಿದೆ.
ಜನವರಿ 30ರಂದು ನಡೆದ ಚಂಡೀಗಢ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಆಪ್- ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಸೋಲಿಸಲು ಚುನಾವಣಾಧಿಕಾರಿ ಮತ ಪತ್ರಗಳನ್ನೇ ತಿರುಚಿದ್ದರು ಎಂಬ ಆರೋಪ ಕೇಳಿಬಂದಿತ್ತು. ಚುನಾವಣೆಯಲ್ಲಿ ಎಂಟು ಮತಪತ್ರಗಳನ್ನು ಅಸಿಂಧು ಎಂದು ಹೇಳಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋನ್ಕರ್ ಗೆಲ್ಲಲು ಸಹಕರಿಸಿದ್ದರು. ಬಿಜೆಪಿ ಪರವಾಗಿ 16 ಮತ, ಆಪ್ ಪರವಾಗಿ 14 ಮತಗಳು ಬಿದ್ದಿದ್ದವು. ಆಪ್ ಪರವಾಗಿದ್ದ ಎಂಟು ಮತಗಳನ್ನು ಅಸಿಂಧುವೆಂದು ಹೇಳಲಾಗಿತ್ತು.
ಈ ಬಗ್ಗೆ ಆಪ್ ಮತ್ತು ಕಾಂಗ್ರೆಸ್ ಪಂಜಾಬ್- ಹರ್ಯಾಣ ಹೈಕೋರ್ಟಿನಲ್ಲಿ ದೂರು ಸಲ್ಲಿಸಿತ್ತು. ಒಟ್ಟು ಚುನಾವಣೆ ಪ್ರಕ್ರಿಯೆಯನ್ನು ರದ್ದುಪಡಿಸಿ ಮರು ಚುನಾವಣೆ ನಡೆಸುವಂತೆ ಕೇಳಿಕೊಂಡಿತ್ತು. ಆದರೆ ಚುನಾವಣೆ ರದ್ದುಪಡಿಸಲು ಹೈಕೋರ್ಟ್ ಒಪ್ಪಿರಲಿಲ್ಲ. ಆನಂತರ, ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿತ್ತು. ಕೋರ್ಟಿಗೆ ಚುನಾವಣಾಧಿಕಾರಿ ಮತಪತ್ರಗಳನ್ನು ತಿರುಚಿದ ಬಗ್ಗೆ ಸಾಕ್ಷ್ಯವನ್ನು ಒದಗಿಸಲಾಗಿತ್ತು. ಅದರಂತೆ ತೀರ್ಪು ನೀಡಿರುವ ಕೋರ್ಟ್, ಅಸಿಂಧುಗೊಳಿಸಿದ ಮತಪತ್ರಗಳನ್ನು ಊರ್ಜಿತಗೊಳಿಸಿದ್ದು ಆಪ್ ಅಭ್ಯರ್ಥಿಯೇ ಮೇಯರ್ ಎಂದು ಘೋಷಣೆ ಮಾಡಿದೆ. ಅಲ್ಲದೆ, ಚುನಾವಣಾಧಿಕಾರಿ ಅನಿಲ್ ಮೆಸ್ಸಿ ವಿರುದ್ಧ ಗಂಭೀರ ಲೋಪ ಎಸಗಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ. ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಶೋಕಾಸ್ ನೋಟಿಸ್ ನೀಡಿದ್ದು, ಹೈಕೋರ್ಟಿಗೆ ಮೂರು ವಾರಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಚಂಡೀಗಢ ಮೇಯರ್ ಆಯ್ಕೆಯಲ್ಲಿ ಬಿಜೆಪಿಯೇ ಚುನಾವಣಾಧಿಕಾರಿಯನ್ನು ತನ್ನ ಪರವಾಗಿ ಬಳಸಿಕೊಂಡಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ, ಬಿಜೆಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬಿಜೆಪಿಗೆ ಪರೋಕ್ಷವಾಗಿ ಚಾಟಿ ಬೀಸಿದಂತಾಗಿದೆ. ಎಂಟು ಮತ ಪತ್ರಗಳನ್ನು ಅಕ್ರಮವಾಗಿ ಅಸಿಂಧುಗೊಳಿಸಿದ ಕಾರಣದಿಂದ ಬಿಜೆಪಿ ಅಭ್ಯರ್ಥಿ ಮೇಯರ್ ಆಗುವಂತಾಗಿತ್ತು.
The Supreme Court on Tuesday declared the AAP-Congress alliance candidate as the mayor of Chandigarh, while setting aside the earlier election result. The top court held Anil Masih guilty of serious misdemeanor in his role and capacity as the presiding officer for making "deliberate efforts to deface the eight ballot papers in question".
18-08-25 10:35 pm
HK News Desk
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am