ಬ್ರೇಕಿಂಗ್ ನ್ಯೂಸ್
27-01-24 06:03 pm HK News Desk ದೇಶ - ವಿದೇಶ
ಕೊಲ್ಲಂ, ಜ.27: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸ್ವತಃ ತಾನೇ ರಸ್ತೆಯಲ್ಲಿ ಕುಳಿತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ಘಟನೆ ಕೊಲ್ಲಂನಲ್ಲಿ ನಡೆದಿದೆ. ರಾಜ್ಯಪಾಲರು ಕಾರಿನಲ್ಲಿ ಹೋಗುತ್ತಿದ್ದಾಗ ಮತ್ತೊಮ್ಮೆ ಎಸ್ಎಫ್ಐ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದಿದ್ದಕ್ಕೆ ಸಿಟ್ಟಿಗೆದ್ದ ಆರಿಫ್ ಖಾನ್, ಕಾರಿನಿಂದಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಪಾಲರ ವಿರುದ್ಧ ಪದೇ ಪದೇ ಪ್ರತಿಭಟನೆ ಎದುರಾಗುತ್ತಿರುವುದರಿಂದ ಕೇಂದ್ರ ಸರಕಾರ ತಕ್ಷಣದಿಂದಲೇ ಝೆಡ್ ಪ್ಲಸ್ ಸೆಕ್ಯುರಿಟಿ ಕೊಟ್ಟು ಆದೇಶ ಮಾಡಿದೆ.
ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಎಂಬಲ್ಲಿಗೆ ಕಾರ್ಯಕ್ರಮ ಒಂದಕ್ಕೆ ರಾಜ್ಯಪಾಲರು ಶನಿವಾರ ಬೆಳಗ್ಗೆ 11 ಗಂಟೆಗೆ ತಮ್ಮ ಕಾರಿನಲ್ಲಿ ಎಸ್ಕಾರ್ಟ್ ಕಾನ್ವೇಯಲ್ಲಿ ಹೋಗುತ್ತಿದ್ದಾಗ ದಿಢೀರ್ ಆಗಿ ಕಮ್ಯುನಿಸ್ಟ್ ಪ್ರೇರಿತ ಎಸ್ಎಫ್ಐ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇಂತಹದ್ದೇ ಘಟನೆ ತಿಂಗಳ ಹಿಂದೆ ನಡೆದಿದ್ದರಿಂದ ಮತ್ತೆ ಮುಜುಗರಕ್ಕೊಳಗಾದ ರಾಜ್ಯಪಾಲರು ತನ್ನ ಕಾರನ್ನು ಟೀ ಅಂಗಡಿ ಬಳಿ ನಿಲ್ಲಿಸಿದ್ದಾರೆ. ಆನಂತರ, ಟೀ ಅಂಗಡಿಯ ಬಳಿಯಿದ್ದ ಚೇರನ್ನು ಹೊರಗೆಳೆದು ಅಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸುತ್ತ ಪೊಲೀಸರು ಸೇರುತ್ತಲೇ ತೀವ್ರ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
‘ನೀವೇ ಪ್ರತಿಭಟನಾಕಾರರಿಗೆ ರಕ್ಷಣೆ ಕೊಡುತ್ತಿದ್ದೀರಿ.. ನೀವಾಗಿಯೇ ಕಾನೂನು ಮುರಿದರೆ, ಕಾನೂನು ಪಾಲನೆ ಮಾಡೋರು ಯಾರ್ರೀ.. ಎಸ್ಎಫ್ಐ ಕಾರ್ಯಕರ್ತರು ರೌಡಿಗಳಿದ್ದಾರೆ, ಬ್ಲಡೀ ಕ್ರಿಮಿನಲ್ಸ್ ಇದ್ದಾರೆ. ಯಾಕೆ ನಿಮಗೆ ಅವರನ್ನು ನಿಯಂತ್ರಿಸಲು ಆಗೋಲ್ಲವಾ ಎಂದು ಕೊಲ್ಲಂ ಎಸ್ಪಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನೀವು ಎಲ್ಲ 50 ಮಂದಿಯನ್ನು ಬಂಧಿಸದೇ ಇದ್ದರೆ ನಾನು ಇಲ್ಲಿಂದ ಎದ್ದು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾಗಿ ಹೇಳಿದರೆ, ಅಲ್ಲಿ 50 ಮಂದಿಯಷ್ಟು ಇದ್ದರಲ್ಲ, ಅವರನ್ನು ಏನು ಮಾಡ್ತೀರಿ. ಎಫ್ಐಆರ್ ಹಿಡ್ಕೊಂಡು ಬನ್ನಿ, ಏನೆಲ್ಲ ಸೆಕ್ಷನ್ ಹಾಕಿದ್ದೀರಿ ಅಂತ ನೋಡಿ ಆಮೇಲೆ ಹೋಗ್ತೀನಿ ಎಂದಿದ್ದಾರೆ.
ರಸ್ತೆಯನ್ನು ರೌಡಿಗಳು ಆಳೋದಲ್ಲ ಅನ್ನೋದನ್ನು ಪೊಲೀಸರು ಸಾಬೀತು ಮಾಡಬೇಕು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಯೇ ಇವರು ಹೀಗೆ ಮಾಡುತ್ತಿದ್ದಾರೆ. ನೀವು ಪಿಣರಾಯಿ ವಿಜಯನ್ ಹಿಸ್ಟರಿ ತಿಳ್ಕೊಂಡಿಲ್ವಾ.. ಎಷ್ಟು ಹತ್ಯೆ ಪ್ರಕರಣಗಳಲ್ಲಿ ಅವರು ಆರೋಪಿಯಾಗಿಲ್ಲ ಹೇಳಿ.. ರೌಡಿಗಳು ಅಂದರೆ ಯಾರು ಮತ್ತೆ. ಸಿಪಿಐಎಂ ಕಾರ್ಯಕರ್ತರನ್ನು ಯುನಿವರ್ಸಿಟಿ ಸೆನೇಟ್ ಆಗಿ ನಾಮಿನೇಟ್ ಮಾಡಿದ್ರೆ ಎಲ್ಲ ಸರಿ ಅಂತಾರೆಯೇ ಇವರು.. ಎಸ್ಎಫ್ಐ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡೋಕೆ ಬಂದಿದ್ದಾದರೆ, ಬರಲಿ. ನಾನು ಸ್ವಾಗತ ಮಾಡುತ್ತೇನೆ. ಆದರೆ ಅವರು ಇಲ್ಲಿಗೆ ಬರೋಲ್ಲ. ಅವರೆಲ್ಲ ರೌಡಿಗಳು. ವಿದ್ಯಾರ್ಥಿಗಳಲ್ಲ. ಮೊನ್ನೆ ಸುಪ್ರೀಂ ಕೋರ್ಟ್ ಆರ್ಡರ್ ಮಾಡಿದ ಬಳಿಕ ಇವರಿಗೆ ಗೊತ್ತಾಗಿದೆ, ಯುನಿವರ್ಸಿಟಿಯನ್ನು ರಾಜ್ಯ ಸರಕಾರಕ್ಕೆ ಕಂಟ್ರೋಲ್ ಮಾಡಕ್ಕಾಗಲ್ಲ ಎಂದು ರಾಜ್ಯಪಾಲ ಆರಿಫ್ ಖಾನ್ ವ್ಯಗ್ರರಾಗಿದ್ದಾರೆ.
ರಾಜ್ಯಪಾಲರು ರಸ್ತೆ ಬದಿ ಕುಳಿತು ಪೊಲೀಸರನ್ನು ಬೈಯುತ್ತಿದ್ದರೆ, ಸ್ಥಳದಲ್ಲಿ ಸಾಕಷ್ಟು ಜನರು ಸೇರಿದ್ದು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆದರೆ ಯಾರನ್ನೂ ಕ್ಯಾರ್ ಮಾಡದ ರಾಜ್ಯಪಾಲರು, ಎಡರಂಗ ಸರಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ. ಕ್ಯಾಲಿಕಟ್ ಯೂನಿವರ್ಸಿಟಿಯಲ್ಲಿ ಒಂದು ಹುದ್ದೆ ಖಾಲಿಯಿದ್ದರೆ, ಆರು ಮಂದಿಯನ್ನು ನೇಮಕ ಮಾಡಿದ್ದಾರೆ. ಅವರೆಲ್ಲ ಸಿಪಿಐಎಂ ಕಾರ್ಯಕರ್ತರು. ಇವರು ಯುನಿವರ್ಸಿಟಿಯನ್ನು ಕಂಟ್ರೋಲ್ ಮಾಡೋಕೆ ನೋಡುತ್ತಿದ್ದಾರೆ. ಮೊನ್ನೆ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಇವರೀಗ ಅಪ್ ಸೆಟ್ ಆಗಿದ್ದಾರೆ. ಯುನಿವರ್ಸಿಟಿ ಅಧಿಕಾರ ಪೂರ್ತಿಯಾಗಿ ವೈಸ್ ಚಾನ್ಸಲರ್ ಕೈಯಲ್ಲೇ ಇರುತ್ತದೆ. ಅದು ಪರಮಾಧಿಕಾರ ಎಂದು ಪರೋಕ್ಷವಾಗಿ ತನ್ನ ಮೇಲೆ ಅಧಿಕಾರ ಚಲಾಯಿಸುವುದನ್ನು ವಿರೋಧಿಸಿ ಹೇಳಿಕೆ ನೀಡಿದರು.
ಇತ್ತೀಚೆಗೆ ಕೆಲವು ತಿಂಗಳಿನಿಂದ ಕೇರಳದ ಹಲವು ಯುನಿವರ್ಸಿಟಿಗಳಿಗೆ ವಿಸಿ ಮತ್ತು ಸೆನೆಟ್ ನೇಮಕ ವಿಚಾರದಲ್ಲಿ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ಉಂಟಾಗಿತ್ತು. ಕಣ್ಣೂರು ಯುನಿವರ್ಸಿಟಿಗೆ ಸುರೇಂದ್ರನ್ ಗೋಪಿನಾಥ್ ಎಂಬವರನ್ನು ವಿಸಿಯಾಗಿ ನೇಮಕ ಮಾಡಬೇಕೆಂದು ಪಿಣರಾಯಿ ಸರಕಾರ ಮತ್ತೊಮ್ಮೆ ರಾಜ್ಯಪಾಲರಲ್ಲಿಗೆ ಆದೇಶ ಪತ್ರ ಕಳಿಸಿದ್ದನ್ನು ರಾಜ್ಯಪಾಲರು ಸಹಿ ಹಾಕದೇ ಹಿಂದಕ್ಕೆ ಕಳಿಸಿದ್ದರು. ಇದೇ ವೇಳೆ, ಸಿಎಂ ಪಿಣರಾಯಿ ವಿಜಯನ್, ರಾಜ್ಯಪಾಲರು ಆರೆಸ್ಸೆಸ್- ಬಿಜೆಪಿ ಮಂದಿಯನ್ನು ಸೆನೆಟನ್ನಾಗಿ ನೇಮಕ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೇ ವಿಚಾರದಲ್ಲಿ ಮುಖ್ಯಮಂತ್ರಿ ಪರ ನಿಂತಿರುವ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ, ರಾಜ್ಯಪಾಲರ ವಿರುದ್ಧ ಸರಣಿ ಪ್ರತಿಭಟನೆಗಿಳಿದಿದೆ. ಶುಕ್ರವಾರ ಕೇರಳ ಅಸೆಂಬ್ಲಿಯಲ್ಲಿ ರಾಜ್ಯಪಾಲರು ಎರಡೇ ನಿಮಿಷ ಮಾತನಾಡಿ ಹೋಗಿದ್ದೂ ರಾಜ್ಯ ಸರಕಾರಕ್ಕೆ ಬಸಿ ಮುಟ್ಟಿಸಿತ್ತು.
Kerala Governor Arif Mohammad Khan sitting in protest on the roadside in Nilamel, Kollam after SFI cadres came close to his car with black flag.
— Megh Updates 🚨™ (@MeghUpdates) January 27, 2024
The Gov stopped his car, questioned police, pulled out a chair from a nearby tea shop and is sitting on the roadside. pic.twitter.com/UoTophCPkN
Indian left-wing student organisation The Students' Federation of India (SFI) wave black flag at Kerala Governor Arif Mohammed Khan . #SFI #ArifMohammedKhan pic.twitter.com/BHaASeUxmm
— The Mauryan (@themauryann) January 27, 2024
In yet another instance of unprecedented gubernatorial behaviour, Governor Arif Mohammad Khan on Saturday not just stormed out of his official vehicle but also staged a street-side sit-in demanding stringent action against SFI activists who raised banners and slogans against him at Nilamel, the northern end of Thiruvananthapuram district bordering Kollam.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm