ಬ್ರೇಕಿಂಗ್ ನ್ಯೂಸ್
18-08-25 10:35 pm HK News Desk ಕರ್ನಾಟಕ
ವಿಜಯಪುರ, ಆ 18 : ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ ಕೊಟ್ರೆ 1.11 ಕೋಟಿ ರೂಪಾಯಿ ಕೊಡ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಮುಸ್ಲಿಂ ಮುಖಂಡರೊಬ್ಬರು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಮುಸ್ಲಿಂ ಯುವತಿ ಮದುವೆಯಾಗುವ ಯುವಕರಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದರು. ಇದಕ್ಕೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಸದ್ಯ ವಿಜಯಪುರದ ಮುಸ್ಲಿಂ ಮುಖಂಡ ಮುಸ್ಲಿಂ ಮುಖಂಡ ಹಮೀದ್ ಮುಶ್ರಿಫ್ ಎಂಬುವವರು ಯತ್ನಾಳ್‌ಗೆ ಸವಾಲು ಎಸೆದಿದ್ದಾರೆ. ಶಾಸಕ ಯತ್ನಾಳ್ ಕುಟುಂಬದ ಯುವತಿಯನ್ನೇ ಮುಸ್ಲಿಂ ಸಮಾಜದ ಯುವಕನೊಂದಿಗೆ ಮದುವೆ ಮಾಡಿ ಕೊಡಲಿ. ನಾವೇ ಅವರಿಗೆ 1 ಕೋಟಿ 11 ಲಕ್ಷ ರೂ. ಸಮಾಜದ ಪರವಾಗಿ ಕೊಡ್ತೀವಿ ಎಂದಿದ್ದಾರೆ. ಇನ್ನು ಯತ್ನಾಳ್ ಕೇವಲ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿಯನ್ನ ಕೂಡ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಶಾಸಕ ಯತ್ನಾಳ್ ವಿರುದ್ಧ ಪೊಲೀಸ್ ಪ್ರಕರಣ ದಾಖಲು
ಕಲಬುರಗಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹೇಳಿಕೆ ನೀಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಖಮರ್ ಕಾಲೊನಿಯ ಖಿದ್ಮತ್ ಎ ಮಿಲ್ಲತ್ ಕಮೀಟಿ ಅಧ್ಯಕ್ಷ ಖಮರ್ ಜುನೈದ್ ಖುರೇಶಿ ದೂರು ದಾಖಲಿಸಿದ್ದಾರೆ.
ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದ ಕದಡುವ ಸಾರ್ವಜನಿಕ ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆ ಸಾಮಾಜಿಕ ದ್ವೇಷವನ್ನು ಉತ್ತೇಜಿಸುತ್ತವೆ, ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುತ್ತವೆ. ಇತ್ತೀಚೆಗೆ ಕೊಪ್ಪಳದಲ್ಲಿನಡೆದ ಕಾರ್ಯಕ್ರಮ ವೊಂದರಲ್ಲಿ‘ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಮದುವೆ ಯಾದರೆ 5 ಲಕ್ಷ ರೂ.ಗಳನ್ನು ನಗದು ಪ್ರೋತ್ಸಾಹ ಧನ ನೀಡಲಾಗುವುದೆಂದು’ ಸಾರ್ವಜನಿಕ ವಾಗಿ ಘೋಷಿಸಿದರು. ಈ ಹೇಳಿಕೆ ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ಇನ್ನೊಂದು ಸಮುದಾಯವನ್ನು ಪ್ರಚೋದಿಸಲು ನೀಡಿದ್ದಾರೆ. ಇದರಿಂದ ಹಲವು ಕಡೆಗಳಲ್ಲಿಗಂಭೀರ ಕಾನೂನು ಸುವ್ಯವಸ್ಥೆಗೆ ಕಾರಣವಾಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
A Muslim community leader in Vijayapura, Hameed Mushrif, has publicly challenged BJP MLA Basanagouda Patil Yatnal, offering ₹1.11 crore if a girl from Yatnal’s family marries a Muslim youth. The statement comes in retaliation to Yatnal’s recent controversial announcement that ₹5 lakh would be given as incentive to Hindu men who marry Muslim women.
08-04-26 02:09 pm
HK News Staffer
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
08-04-26 02:39 pm
HK News Staffer
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 05:53 pm
HK News Staffer
ಮೂಡುಬಿದ್ರೆ ಎಕ್ಸ್ಪ್ರೆಸ್ ಬಸ್ - ಕಂಟೇನರ್ ಲಾರಿ ಮ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm