ಬ್ರೇಕಿಂಗ್ ನ್ಯೂಸ್
18-08-25 06:14 pm Mangalore Correspondent ಕರಾವಳಿ
ಮಂಗಳೂರು, ಆ.18 : ಧರ್ಮಸ್ಥಳ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸದನದಲ್ಲಿ ಮುಗಿಬಿದ್ದ ಬಿಜೆಪಿ, ಕಾಂಗ್ರೆಸ್, ಬಂಧನ ಮಾಡಲೇಬೇಕೆಂದು ಪಟ್ಟು ಹಿಡಿದು ಬೇಸ್ತು ಬಿದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆಂದು ಮಹೇಶ್ ಶೆಟ್ಟಿ ಹೇಳಿದ್ದಾರೆಂಬ ಎಡಿಟೆಡ್ ವಿಡಿಯೋ ನಂಬಿದ ವಿಪಕ್ಷ ನಾಯಕ ಆರ್. ಅಶೋಕ್, ತಿಮರೋಡಿಯನ್ನು ತಕ್ಷಣ ಬಂಧಿಸಬೇಕೆಂದು ವಿಧಾನಸಭೆ ಅಧಿವೇಶನದಲ್ಲಿ ಆಗ್ರಹಿಸಿದರೆ, ಡಿಸಿಎಂ, ಗೃಹ ಸಚಿವರೂ ಅದಕ್ಕೆ ಸಮ್ಮತಿ ಸೂಚಿಸಿದ ಪ್ರಸಂಗ ನಡೆದಿದೆ.
ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಅಶೋಕ್, ಧರ್ಮಸ್ಥಳದಲ್ಲಿ ನೂರಾರು ಕೊಲೆಗಳಾಗಿದೆಯೆಂದು ಎಸ್ಐಟಿ ರಚನೆಗೆ ಆಗ್ರಹ ಮಾಡಿದ್ದ ವ್ಯಕ್ತಿಯೇ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಈ ರೀತಿ ಬಹಿರಂಗ ಹೇಳಿಕೆ ನೀಡಿದರೂ ಸರಕಾರ ಕ್ರಮ ಕೈಗೊಳ್ಳದಿರುವುದು ಗೃಹ ಇಲಾಖೆಯ ವೈಫಲ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಸುನಿಲ್ ಕುಮಾರ್ ಮತ್ತು ಸುರೇಶ್ ಕುಮಾರ್, ಒಬ್ಬ ವ್ಯಕ್ತಿ ಮುಖ್ಯಮಂತ್ರಿ ವಿರುದ್ಧ ಸದನ ನಡೆಯುತ್ತಿರುವಾಗಲೇ ಬಹಿರಂಗ ಹೇಳಿಕೆ ನೀಡುತ್ತಾನೆ ಅಂದ್ರೆ ಹೇಗೆ. ಇದಕ್ಕೆ ಸರ್ಕಾರ ಮೌನ ವಹಿಸಿದ್ರೆ ಮುಖ್ಯಮಂತ್ರಿ 24 ಕೊಲೆ ಮಾಡಿದ್ದನ್ನು ತಾವೇ ಒಪ್ಪಿದಂತಾಗುತ್ತದೆ ಎಂದು ಟೀಕಿಸಿದರು.

ಇದೇ ವೇಳೆ, ಬಿಜೆಪಿಯ ಎಸ್.ಆರ್ ವಿಶ್ವನಾಥ್ ಧ್ವನಿಗೂಡಿಸಿ ನನ್ನ ವಿರುದ್ಧ ಲಾಯರ್ ಜಗದೀಶ್ ಎಂಬವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಧರ್ಮಸ್ಥಳದಿಂದ ನೂರು ಕೋಟಿ ಪಡೆದಿದ್ದೇನೆ, ದೊಡ್ಡ ಜಾಗವನ್ನು ತೋರಿಸಿ ಇದು ಧರ್ಮಸ್ಥಳದ್ದು. ನಾನು ಡೀಲ್ ಮಾಡುತ್ತಿದ್ದೇನೆಂದು ಆರೋಪ ಮಾಡಿದ್ದಾನೆ. ಇದರಿಂದ ನನ್ನ ಹಕ್ಕುಚ್ಯುತಿಯಾಗಿದೆ ಎಂದು ಹೇಳಿದ್ದಲ್ಲದೆ, ತಿಮರೋಡಿ ಮತ್ತು ಲಾಯರ್ ಜಗದೀಶ್ ವಿರುದ್ಧ ಹಕ್ಕುಚ್ಯುತಿ ಮಾಡಬೇಕೆಂದು ಆಗ್ರಹಿಸಿದರು.
ವಿಪಕ್ಷದ ಮಾತಿಗೆ ತನ್ನದೂ ಸಹಮತ ಇದೆಯೆಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಆ ವ್ಯಕ್ತಿ ಏನು ಮಾತನಾಡಿದ್ದಾನೆ ಅದನ್ನು ನಾನೂ ನೋಡಿದ್ದೇನೆ. ಎಸ್ಐಟಿ ಆಗ್ರಹಿಸಿದ ವ್ಯಕ್ತಿ ನಿಮ್ಮ ಬಗ್ಗೆ ಏನಂದಿದ್ದಾನೆಂದು ವಿಡಿಯೋವನ್ನು ಮುಖ್ಯಮಂತ್ರಿಗೂ ತೋರಿಸಿದ್ದೇನೆ. ಅವರೂ ಕ್ರಮಕ್ಕೆ ಸೂಚಿಸಿದ್ದಾರೆ. ಆ ವ್ಯಕ್ತಿಯ ಹೆಸರೆತ್ತಿ ದೊಡ್ಡದು ಮಾಡೋದು ಬೇಡ ಎನ್ನುತ್ತ ತಿಮರೋಡಿ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ. ಸ್ಪೀಕರ್ ಖಾದರ್ ಸೂಚನೆಯಂತೆ ಎದ್ದು ನಿಂತ ಗೃಹ ಸಚಿವ ಪರಮೇಶ್ವರ್, ನೀವು ಅಂದುಕೊಂಡಂತೆ ಸರ್ಕಾರ ಮೌನ ವಹಿಸಿಲ್ಲ. ಏನು ಕ್ರಮ ಆಗಬೇಕೋ ಅದಕ್ಕೆ ಸೂಚನೆ ನೀಡಿದ್ದೇನೆ. ಪೊಲೀಸರು ಕೂಡಲೇ ಕ್ರಮ ಜರುಗಿಸುತ್ತಾರೆ ಎಂದರು. ಸುರೇಶ್ ಕುಮಾರ್ ಆಕ್ಷೇಪಿಸುತ್ತ ಆ ವ್ಯಕ್ತಿ ಎಲ್ಲ ಚಾನೆಲ್ ಮುಂದೆ ಹೇಳಿಕೆ ಕೊಟ್ಟು 48 ಗಂಟೆಯಾದ್ರೂ ಕ್ರಮ ಕೈಗೊಂಡಿಲ್ಲ. ನೀವು ಈಗ ಕ್ರಮಕ್ಕೆ ಸೂಚನೆ ನೀಡೋದೇನು ಎಂದು ಕಿಚಾಯಿಸಿದರು.

ಎಡಿಟೆಡ್ ವಿಡಿಯೋ, ಬಿಜೆಪಿ ನಾಯಕರ ಪೆಚ್ಚು!
ಪೋಸ್ಟ್ ಕಾರ್ಡ್ ಹೆಸರಿನ ಜಾಲತಾಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವ ವಿಡಿಯೋವನ್ನು ಎಡಿಟ್ ಮಾಡಿ ಹಾಕಿರುವುದು ವೈರಲ್ ಆಗಿತ್ತು. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎನ್ನುವ ರೀತಿ ವಿಡಿಯೋ ಇದ್ದು, ಭಾಷಣ ಅರ್ಧಕ್ಕೆ ಕಟ್ ಆಗಿದೆ. ನಿಜಕ್ಕಾದರೆ ಅದು ಹೇಳಿಕೆ ಎರಡು ವರ್ಷ ಹಳೆಯದ್ದು. ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಾಂಗ್ರೆಸ್ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದ ಸಂಘ ಪರಿವಾರದ ನಾಯಕ ಸತ್ಯಜಿತ್ ಸುರತ್ಕಲ್ ಅವರನ್ನು ಟೀಕಿಸುತ್ತ 24 ಕೊಲೆ ಮಾಡಿದ ಸಿದ್ದರಾಮಯ್ಯ ಪರವಾಗಿ ಓಟು ಕೇಳಿದ್ದೀರಲ್ವಾ, ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಲೇ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ ಸೌಜನ್ಯಾ ಪರ ಪ್ರತಿಭಟನೆಯ ಸಂದರ್ಭ, ಹರೀಶ್ ಪೂಂಜಾ ವಿರುದ್ಧ ಹರಿಹಾಯ್ದ ಮಹೇಶ್ ಶೆಟ್ಟಿ, ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆಂದು ಹೇಳಿದರೂ ಪೂಂಜಾನ ಬಂಧನ ಆಗಿಲ್ಲ ಯಾಕೆಂದು ಪ್ರಶ್ನಿಸಿದ್ದರು. ಆಗ ಮಾತನಾಡಿದ್ದ ವಿಡಿಯೋ ಮುಂದಿಟ್ಟು ಬಿಜೆಪಿ ನಾಯಕರು ಸದನದಲ್ಲಿ ಪ್ರಸ್ತಾಪಿಸಿ, ತಾವೇ ಇಂಗು ತಿಂದ ಮಂಗನಂತಾಗಿದ್ದಾರೆ. ಆಡಳಿತ ಪಕ್ಷದ ನಾಯಕರೂ ಅದನ್ನು ಆಲಿಸುತ್ತ ಕ್ರಮಕ್ಕೆ ಸೂಚಿಸಿದ್ದೇವೆ ಎನ್ನುತ್ತ ತಾವೆಷ್ಟು ಪ್ರಚಲಿತ ವಿಚಾರಕ್ಕಿಂತ ದೂರ ಇದ್ದೇವೆ ಎನ್ನುವುದನ್ನು ತೋರಿಸಿದ್ದಾರೆ.
An edited video clip has triggered high political drama in the Karnataka Assembly, with both BJP and Congress leaders demanding the arrest of activist Mahesh Shetty Timarodi, a prominent campaigner in the Dharmasthala case. The video, allegedly misrepresenting Timarodi's comments, led to heated discussions in the House — with leaders from across party lines pressing for immediate action.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm