Bengaluru Woman Hurls Abuses at Traffic Cops: ಬೆಂಗಳೂರು ; ಟ್ರಾಫಿಕ್ ಪೊಲೀಸರಿಗೆ ಅವಾಚ್ಯವಾಗಿ ನಿಂದನೆ, ಬೇಡ ಬೇಡ ಅಂದ್ರು ಕೇಳದ ರೌಡಿ ಲೇಡಿ, ಪೊಲೀಸರ ಟ್ರೀಟ್ಮೆಂಟ್ ಗೆ ಆಂಟಿ ಸ್ತಬ್ದ, ಇದು ನಿಂಗೆ ಬೇಕಿತ್ತಾ? !

16-08-25 07:06 pm       Bangalore Correspondent   ಕ್ರೈಂ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಮಹಿಳೆ ಸೇರಿ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಆ 16 : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಮಹಿಳೆ ಸೇರಿ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಸಂಚಾರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿ.ಜಿ.ನಿರ್ಮಲ ನೀಡಿದ್ದ ದೂರಿನ ಅನ್ವಯ ಮೊಹಮ್ಮದ್ ಸರ್ಬಾಸ್ ಮತ್ತು ಹಿರಲ್ ವ್ಯಾಸ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಿರ್ಮಲ ಅವರು ಆ.14ರಂದು ಬೆಳಗ್ಗೆ ತಮ್ಮ ಸಿಬ್ಬಂದಿಯೊಂದಿಗೆ ಯಲಹಂಕ ಉಪನಗರದ ಶೇಷಾದ್ರಿಪುರ ಕಾಲೇಜಿನ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. 12.30ಕ್ಕೆ ಬುಲೆಟ್ ವಾಹನ ನೋ ಪಾರ್ಕಿಂಗ್ ನಿಲ್ಲಿಸಲಾಗಿತ್ತು. ಹೀಗಾಗಿ ಅದಕ್ಕೆ ಪೊಲೀಸರು ವ್ಹೀಲ್ ಕ್ಲಾಂಪ್ ಹಾಕಿದ್ದರು. ನಂತರ ಅಲ್ಲಿಗೆ ಬಂದ ವಾಹನದ ಮಾಲೀಕ ಮೊಹಮ್ಮದ್ ಸರ್ಬಾಸ್‌ಗೆ ನೋ ಪಾರ್ಕಿಂಗ್ ದಂಡ ಕಟ್ಟುವಂತೆ ಪೊಲೀಸರು ತಿಳಿಸಿದರು. ಆತ ಏರುಧ್ವನಿಯಲ್ಲಿ ಮಾತನಾಡಿದ್ದ. ದಂಡ ಕಟ್ಟುವುದಿಲ್ಲ. ದಂಡ ಕಟ್ಟಲು ಹಣವಿಲ್ಲ. ನೋ ಪಾರ್ಕಿಂಗ್ ಬೋರ್ಡು ಹಾಕಿದ್ದೀರಾ? ನಾನು ಬೈಕ್ ನಿಲ್ಲಿಸುವಾಗ ನೀವು ವಿಜಲ್ ಹಾಕಿ ಓಡಿಸಬೇಕಿತ್ತು ಎಂದು ವಾಗ್ವಾದ ಮಾಡಿ ಕರ್ತವ್ಯಕ್ಕೆ ಅಡ್ಡಪಡಿಸಿದ್ದ. ನಂತರ ಮಹಿಳೆಯೊಬ್ಬರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

ಓಡಿ ಹೋಗುವಂತೆ ಹೇಳಿದ ಮಹಿಳೆ: 

ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಮಹಿಳೆ ಹಿರಲ್ ವ್ಯಾಸ್ ಎಂಬಾಕೆ ತಂದಿದ್ದ ದ್ವಿಚಕ್ರ ವಾಹನವನ್ನು ಮೊಹಮ್ಮದ್ ಸರ್ಬಾನ್‌ಗೆ ಕೊಟ್ಟು ಇಲ್ಲಿಂದ ಓಡಿ ಹೋಗುವಂತೆ ಹೇಳಿದ್ದಾಳೆ. ಆಗ, ಟ್ರಾಫಿಕ್ ಪೊಲೀಸರು ದಂಡ ಪಾವತಿಸಿ ಹೋಗುವಂತೆ ಹೇಳಿದ್ದಾರೆ. ಆದರೆ, ಹಿರಲ್ ವ್ಯಾಸ್ ಕರ್ತವ್ಯದಲ್ಲಿದ್ದ ನಿರ್ಮಲಾ ಮತ್ತು ಸಿಬ್ಬಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಅಸಭ್ಯವಾಗಿ ಕೈ ಸನ್ನೆ ಮಾಡಿ ಅವಮಾನ ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ವಿವರಿಸಲಾಗಿದೆ.

ಇದೀಗ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಹಿರಲ್ ವ್ಯಾಸ್ ಅವರ ಕ್ಲಿನಿಕ್‌ನಲ್ಲಿ ಮೊಹಮ್ಮದ್ ಸರ್ಬಾಸ್ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಪೊಲೀಸರು, 'ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ, ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು, ಅದುವೇ ಪೊಲೀಸ್ ಠಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ' ಎಂದು ಅಡಿಬರಹ ನೀಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

In a dramatic incident near Yelahanka, Bengaluru, a woman and a man were arrested after they allegedly obstructed police duty and hurled abuses at traffic police officers. The incident, captured on video, has since gone viral on social media.