ಬ್ರೇಕಿಂಗ್ ನ್ಯೂಸ್
14-08-25 07:24 pm HK News Desk ದೇಶ - ವಿದೇಶ
ನವದೆಹಲಿ, ಆ.14 : ಆಪರೇಷನ್ ಸಿಂಧೂರದ ವೇಳೆ ಪಾಕಿಸ್ತಾನದೊಂದಿಗೆ ಶಾಂತಿ ಒಪ್ಪಂದ ಕುದುರಿಸುವಲ್ಲಿ ತಮ್ಮ ಪಾತ್ರವನ್ನು ನಿರ್ಲಕ್ಷಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನಿಸಿಕೊಂಡು ಭಾರತದ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಲು ಮುಂದಾಗಿದ್ದಾರೆ ಎಂದು ಮಾಜಿ ರಾಜತಂತ್ರಜ್ಞ, ಕೆನಡಾದ ಮಾಜಿ ಹೈಕಮಿಷನರ್ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಲೇಖಕರೂ ಆಗಿರುವ ವಿಕಾಸ್, ವ್ಯಾಪಾರ ಮಾತುಕತೆಗಳಲ್ಲಿ ಟ್ರಂಪ್ ಆಡಳಿತದ ಒತ್ತಡಕ್ಕೆ ಮಣಿಯದಿರುವ ಭಾರತದ ನಿರ್ಧಾರ ಸರಿಯಾದ ನಡೆಯಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳು ಅಂತಿಮವಾಗಿ ಅಮೆರಿಕದಲ್ಲಿ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಬಣ್ಣಿಸಿದ್ದಾರೆ.
ಅಮೆರಿಕ ಭಾರತದ ಸರಕುಗಳಿಗೆ ಹಾಕಿರುವ ಹೆಚ್ಚವರಿ ಸುಂಕಗಳು ಪಾಕಿಸ್ತಾನದೊಂದಿಗಿನ ಭಾರತದ ಯುದ್ಧದ ಸಂದರ್ಭ ಕದನ ವಿರಾಮ ಘೋಷಣೆಯಲ್ಲಿ ಅಮೆರಿಕಕ್ಕೆ ಪಾಲು ಸಿಗದ್ದರ ಪರಿಣಾಮವಾಗಿದೆ. ಭಾರತವು ಬ್ರಿಕ್ಸ್ ಸದಸ್ಯ ರಾಷ್ಟ್ರವಾಗುವುದು ಕೂಡ ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಬ್ರಿಕ್ಸ್ ಎಂಬುದು ಅಮೆರಿಕನ್ ವಿರೋಧಿ ಮೈತ್ರಿಕೂಟವಾಗಿದ್ದು, ಡಾಲರ್‌ಗೆ ಪರ್ಯಾಯ ಕರೆನ್ಸಿ ರಚಿಸಲು ಅದು ಕಾರ್ಯತಂತ್ರ ರೂಪಿಸುತ್ತಿದೆ ಎಂಬ ತಪ್ಪು ಕಲ್ಪನೆ ಅವರಲ್ಲಿದೆ. ಭಾರತ ಬ್ರಿಕ್ಸ್‌ನ ಸದಸ್ಯತ್ವ ಕಳೆದುಕೊಳ್ಳಬೇಕು ಎಂಬುದು ಟ್ರಂಪ್ ಅವರ ವಾದವಾಗಿದೆ ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದೊಂದಿಗೆ ಶಾಂತಿ ಒಪ್ಪಂದದ ಮಧ್ಯಸ್ಥಿಕೆ ವಹಿಸಿದ ಕ್ರೆಡಿಟ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೀಡಲು ಭಾರತ ನಿರಾಕರಿಸಿದೆ. ಡೊನಾಲ್ಡ್ ಟ್ರಂಪ್ ಹಲವು ಬಾರಿ ಭಾರತ -ಪಾಕ್ ಕದನ ವಿರಾಮಕ್ಕೆ ನಾನೇ ಕಾರಣ ಎಂದು ಹೇಳಿಕೊಂಡು ತಿರುಗಿದ್ದರು. ಆದರೆ ಕದನ ವಿರಾಮ ಪ್ರಕ್ರಿಯೆಯಲ್ಲಿ ಅಮೆರಿಕದ ಪಾತ್ರವೇ ಇಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಹಲವು ಸಚಿವರು ಆರಂಭದಿಂದಲೂ ಸಮರ್ಥಿಸಿಕೊಂಡೇ ಬರುತ್ತಿದ್ದರು.
ಭಾರತ ಮತ್ತು ಪಾಕಿಸ್ತಾನ ಯುದ್ಧದಿಂದ ಹಿಂದೆ ಸರಿದು ಕದನ ವಿರಾಮ ಘೋಷಣೆ ಮಾಡಲು ಮತ್ತು ಪರಮಾಣು ದಂಗೆಯನ್ನು ನಿಲ್ಲಿಸಿದ್ದು ನಾನೇ ಎಂದು ಡೊನಾಲ್ಡ್ ಟ್ರಂಪ್ ಸುಮಾರು 30 ಬಾರಿ ಹೇಳಿದ್ದಾರೆ. ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಆದರೆ ಭಾರತ ಪ್ರತಿಬಾರಿಯೂ ಇದನ್ನು ನಿರಾಕರಿಸುತ್ತಲೇ ಬಂದಿದ್ದು ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿ ಅದು ಭಾರತದ ಸರಕುಗಳ ಮೇಲೆ ಸುಂಕದ ರೂಪ ಪಡೆದುಕೊಂಡಿತು ಎಂದು ಸ್ವರೂಪ್ ಹೇಳಿದ್ದಾರೆ. ಇದರ ಮಧ್ಯೆ ಕೃಷಿ ಮತ್ತು ಡೈರಿ ಕ್ಷೇತ್ರಗಳಿಗೂ ಹೆಚ್ಚಿನ ಅವಕಾಶ ಒದಗಿಸಬೇಕೆಂಬ ವ್ಯಾಪಾರ ಮಾತುಕತೆಯಲ್ಲೂ ಭಾರತವು ಅಮೆರಿಕದ ಒತ್ತಡಕ್ಕೆ ಮಣಿದಿಲ್ಲ, ಬದಲಿಗೆ ಅಮೆರಿಕವೇ ತನ್ನ ಗರಿಷ್ಠ ಬೇಡಿಕೆಗಳಿಗೆ ಒಪ್ಪಿಗೆ ನೀಡಬೇಕೆಂದು ಭಾರತ ಒತ್ತಡ ತಂತ್ರಗಳನ್ನು ಪ್ರಯೋಗಿಸುತ್ತಿದೆ ಎಂಬುದನ್ನೂ ಸ್ವರೂಪ್ ಬೊಟ್ಟು ಮಾಡಿದ್ದಾರೆ.
Former diplomat Vikas Swarup has lauded India’s firm stand in trade negotiations with the United States, saying the country has done the “right thing” by resisting pressure from the Trump administration to open its agriculture and dairy sectors.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 03:27 pm
HK News Staffer
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm