ಬ್ರೇಕಿಂಗ್ ನ್ಯೂಸ್
05-03-26 04:36 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 5: ಧರ್ಮಸ್ಥಳದಲ್ಲಿ ಹೆಣ್ಮಕ್ಕಳು ಕಾಣೆಯಾಗಿರೋದು ಸತ್ಯ. ಹೇಗೆ ಆಯ್ತು? ಏನು ಆಯ್ತು? ಆ ಹೆಣ್ಮಕ್ಕಳು ಎಲ್ಲಿ ಹೋದ್ರು? ಹೇಗೆ ಸತ್ರು? ಅಂತ ತನಿಖೆಯಾಗಬೇಕಲ್ವಾ. ನಾವು ತನಿಖೆಯಾಗೋ ವರೆಗೂ ಕಾಯಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಜಿಲ್ಲಾ ಪ್ರವಾಸದಲ್ಲಿರುವ ಅವರು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ಐಟಿ ನಮಗೆ ಇನ್ನಷ್ಟೇ ವರದಿ ನೀಡಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡ್ತಾ ಇದ್ದೇನೆ. ಎಸ್ಐಟಿ ಮುಖ್ಯಸ್ಥರ ಜೊತೆಗೂ ಮೀಟಿಂಗ್ ಮಾಡ್ತಿರ್ತೇನೆ. ವರದಿಯನ್ನು ಕೊಟ್ಟೇ ಕೊಡುತ್ತಾರೆ ಎಂದು ಹೇಳಿದರು.
ಕೆಲವೊಂದು ವಿಚಾರದಲ್ಲಿ ಕೋರ್ಟ್ ನಲ್ಲಿ ತೀರ್ಮಾನ ಆದ ಬಳಿಕ ವರದಿ ಕೊಡ್ತಾರೆ, ಸದ್ಯ ತನಿಖೆ ಮುಂದುವರಿಸೋದಾಗಿ ಎಸ್ಐಟಿ ಹೇಳಿದ್ದಾರೆ. ಸಾಕ್ಷಿಗಳು ಬರ್ತಾರೆ ಹೋಗ್ತಾರೆ. ಅದನ್ನು ಎಸ್ಐಟಿ ಮತ್ತು ಕೋರ್ಟ್ ನೋಡಿಕೊಳ್ಳುತ್ತದೆ. ಸಾಕ್ಷಿಯಾಗಿ ಬಂದವರು ಸುಳ್ಳು ಹೇಳಬಹುದು, ಸತ್ಯ ಹೇಳಬಹುದು. ಅದು ಪ್ರಶ್ನೆಯಲ್ಲ. ಆದ್ರೆ ಅಲ್ಲಿನ ವಿಚಾರದ ಬಗ್ಗೆ ತನಿಖೆಯಾಗಬೇಕು. ಅದನ್ನೇ ನಾವು ಸರ್ಕಾರಕ್ಕೆ ಬರೆದ ಪತ್ರದಲ್ಲಿಯೂ ತಿಳಿಸಿದ್ದೇವೆ. ತನಿಖೆ ಮುಗಿಯುವವರೆಗೆ ನಾವು ಕಾಯಬೇಕಷ್ಟೆ ಎಂದು ಚೌಧರಿ ಹೇಳಿದರು.



ಮಂಗಳೂರಿನ ಬಲ್ಮಠದಲ್ಲಿ ಸರ್ಕಾರಿ ಮಹಿಳಾ ಡಿಗ್ರಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ನಡೆಸಿದ ಮಹಿಳಾ ಆಯೋಗದ ಅಧ್ಯಕ್ಷರು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಂವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ನಾನು ಪ್ರವಾಸ ಮಾಡುತ್ತಿರುವ 26ನೇ ಜಿಲ್ಲೆಯಿದು. ಮಹಿಳೆಯರಲ್ಲಿ ಆಯೋಗ ಜಾಗೃತಿಯನ್ನು ಮೂಡಿಸುತ್ತಿದೆ. ರೇಪ್, ದೌರ್ಜನ್ಯ ಪ್ರಕರಣ ಹೆಚ್ಚಾಗಲು ಕಾರಣಗಳು ಅನೇಕ ಇವೆ. ಸ್ಮಾರ್ಟ್ ಫೋನ್ ಗಳಲ್ಲಿ ಬಹಳಷ್ಟು ಅಶ್ಲೀಲ ವೀಡಿಯೋಗಳು ಬರ್ತಿದೆ. ಮೊದಲು ಅಷ್ಟು ಸುಲಭವಾಗಿ ಸಿಗ್ತಾ ಇರಲಿಲ್ಲ. ಈಗ ಡ್ರಗ್ಸ್, ಲಿಕ್ಕರ್ ಎಲ್ಲವೂ ಸಿಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಇಂತಹ ಕೃತ್ಯಗಳು ಹೆಚ್ಚುತ್ತಿವೆ. ಇದಕ್ಕೆ ಒಂದೇ ಕಾರಣ ಅಂತ ಹೇಳೋದಕ್ಕೆ ಸಾಧ್ಯವಿಲ್ಲ.
ಕಾನೂನು ಅಷ್ಟು ಕಟ್ಟುನಿಟ್ಟಾಗಿ ಇದ್ರೂ ಇದೆಲ್ಲಾ ಆಗುತ್ತಲೆ ಇದೆ. ದೌರ್ಜನ್ಯ ಪ್ರಕರಣ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ಜೊತೆ ಚರ್ಚೆ ಮಾಡ್ತೇವೆ. ನಾವು ಮಾಡೋದನ್ನ ಕಾಲ ಕಾಲಕ್ಕೆ ಮಾಡ್ತಿದ್ದೇವೆ. ಈಗಾಗಲೇ 26 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಇದರ ವರದಿಯನ್ನು ಸರಕಾರಕ್ಕೆ ನೀಡುತ್ತೇನೆ ಎಂದು ಹೇಳಿದರು.
ಮಿನು ಮಾರುಕಟ್ಟೆಗೆ ಚೌಧರಿ ಭೇಟಿ:
ವಿದ್ಯಾರ್ಥಿಗಳ ಜೊತೆಗಿನ ಸಂವಾದ ಬಳಿಕ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿರುವ ಮೀನು ಮಾರುಕಟ್ಟೆಗೆ ತೆರಳಿ, ಅಲ್ಲಿನ ಮೀನು ಮಾರಾಟದ ಮಹಿಳೆಯರ ಅಹವಾಲು ಆಲಿಸಿದರು. ಈ ವೇಳೆ, ಮೀನುಗಾರ ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡರಲ್ಲದೆ, ನೂತನ ಸೆಂಟ್ರಲ್ ಮಾರುಕಟ್ಟೆಗೆ ಹೋಗುವುದಿಲ್ಲ. ಅಲ್ಲಿ ದುಬಾರಿ ಬಾಡಿಗೆ ಮಾಡಿದ್ದಾರೆ. ನಮಗೆ ಇಲ್ಲಿಯೇ ಸುಸಜ್ಜಿತ ಮಾರುಕಟ್ಟೆ ಮಾಡಿಕೊಡಬೇಕು ಎಂದು ಹೇಳಿದರು. ನಾಡಿದ್ದು ಮೀನುಗಾರ ಮಹಿಳೆಯರ ಜೊತೆಗೆ ಮೀಟಿಂಗ್ ಇಟ್ಟಿದ್ದೇನೆ, ನೀವು ಬಂದು ದೂರು ಕೊಟ್ಟರೆ ಸರ್ಕಾರಕ್ಕೆ ಬರೆಯುತ್ತೇನೆ ಎಂದರು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm