ಬ್ರೇಕಿಂಗ್ ನ್ಯೂಸ್
15-08-25 08:46 pm HK News Desk ದೇಶ - ವಿದೇಶ
ನವದೆಹಲಿ, ಆ.15: ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ದಾಖಲೆಯನ್ನು ಮುರಿದಿದ್ದಾರೆ. ಆಮೂಲಕ ಸತತವಾಗಿ ಅತಿ ಹೆಚ್ಚು ಸಲ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿರುವ ಮೊದಲ ಪ್ರಧಾನಿ ನೆಹರು ನಂತರದ ಸ್ಥಾನಕ್ಕೆ ಏರಿದ್ದಾರೆ.
ಇಂದಿರಾ ಗಾಂಧಿಯವರು 1966ರ ಜನವರಿಯಿಂದ 1977ರ ಮಾರ್ಚ್ ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್ ವರೆಗೆ ಅಧಿಕಾರದಲ್ಲಿದ್ದು ಒಟ್ಟು 16 ಬಾರಿ ಕೆಂಪು ಕೋಟೆಯಿಂದ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದರು. ಸತತವಾಗಿ 11 ಸಲ ಆಗಸ್ಟ್ 15ರಂದು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ್ದರು.
ದೇಶದಲ್ಲಿ ದೀರ್ಘಾವಧಿಗೆ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಒಟ್ಟು 17 ಬಾರಿ ಸತತವಾಗಿ 1947ರಿಂದ 1963ರ ವರೆಗೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದರು. ನೆಹರು ಬಳಿಕ ಪ್ರಧಾನಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು 1964 ಹಾಗೂ 65ರಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿದ್ದರು. ಇಂದಿರಾ ಅವಧಿಯಲ್ಲಿ 1975-77ರಲ್ಲಿ ತುರ್ತು ಸ್ಥಿತಿ ಜಾರಿಯಲ್ಲಿತ್ತು. ಆನಂತರ, 1977-78ರಲ್ಲಿ ಮೊರಾರ್ಜಿ ದೇಸಾಯಿ ಮತ್ತು 79ರಲ್ಲಿ ಚೌಧರಿ ಚರಣ್ ಸಿಂಗ್ ಪ್ರಧಾನಿಯಾಗಿ ಧ್ವಜಾರೋಹಣ ಮಾಡಿದ್ದರು.
1984ರಲ್ಲಿ ಇಂದಿರಾ ಹತ್ಯೆ ಬಳಿಕ ಪ್ರಧಾನಿ ಸ್ಥಾನಕ್ಕೇರಿದ್ದ ಪುತ್ರ ರಾಜೀವ ಗಾಂಧಿ ಐದು ವರ್ಷ ಧ್ವಜಾರೋಹಣ ಮಾಡಿದ್ದರು. ಅವರ ನಂತರ ವಿಪಿ ಸಿಂಗ್(1990), ಪಿವಿ ನರಸಿಂಹ ರಾವ್ 1991ರಿಂದ 95ರ ವರೆಗೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು. ಆಬಳಿಕ ಕನ್ನಡಿಗ ದೇವೇಗೌಡ 1996, ಐಕೆ ಗುಜ್ರಾಲ್ 1997ರಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. 1998ರ ಮಾರ್ಚ್ ನಿಂದ 2004ರ ವರೆಗೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಆರು ವರ್ಷ ಧ್ವಜಾರೋಹಣ ಮಾಡಿದ್ದರೆ, 2004ರಲ್ಲಿ ಅಧಿಕಾರಕ್ಕೇರಿದ್ದ ಮನಮೋಹನ್ ಸಿಂಗ್ ಹತ್ತು ವರ್ಷಗಳ ಕಾಲ ಸ್ವಾತಂತ್ರ್ಯೋತ್ಸವ ನೆರವೇರಿಸಿದ್ದರು.
2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿದ್ದು, 12ನೇ ಬಾರಿ ಧ್ವಜಾರೋಹಣ ಮಾಡಿದ್ದಲ್ಲದೆ ಈ ಸಲ ಸುದೀರ್ಘ 103 ನಿಮಿಷಗಳ ದಾಖಲೆಯನ್ನೂ ಮಾಡಿದ್ದಾರೆ. ಕಳೆದ ವರ್ಷ 98 ನಿಮಿಷ ಕಾಲ ಮೋದಿ ಭಾಷಣ ಮಾಡಿದ್ದರು.
Prime Minister Narendra Modi has broken former PM Indira Gandhi’s record by hoisting the national flag and addressing the nation from the Red Fort for the 12th consecutive Independence Day. With this, he now holds the second spot for most consecutive Independence Day addresses by a Prime Minister, behind only Jawaharlal Nehru.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm