ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹಲಿಯಲ್ಲಿ ಅದ್ದೂರಿ ಸ್ವಾಗತ, ಮಾನವ ಸಹಿತ ಗಗನಯಾತ್ರೆಗೆ ಹೊಸ ನಿರೀಕ್ಷೆ 

17-08-25 12:54 pm       HK News Desk   ದೇಶ - ವಿದೇಶ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್ ) ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾನುವಾರ ನಸುಕಿನ ವೇಳೆ ಸ್ವದೇಶಕ್ಕೆ ಮರಳಿದ್ದಾರೆ.

ನವದೆಹಲಿ, ಆ.17 : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್ ) ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾನುವಾರ ನಸುಕಿನ ವೇಳೆ ಸ್ವದೇಶಕ್ಕೆ ಮರಳಿದ್ದಾರೆ.

ಶುಭಾಂಶು ಶುಕ್ಲಾ ಐಎಸ್​ಎಸ್ ನಲ್ಲಿ ಹಾರಾಟ ನಡೆಸಿದ ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾಗೆ  ಸುರಕ್ಷಿತವಾಗಿ ಬಂದಿಳಿದಿದ್ದರು. ಭಾನುವಾರ ನಸುಕಿನ ವೇಳೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೊದಲಾದ ಅನೇಕ ಗಣ್ಯರು ಶುಭಾಂಶು ಅವರನ್ನು ಬರಮಾಡಿಕೊಂಡರು. 

Shubhanshu Shukla returns to India to rousing welcome; LS set to discuss  his sojourn to ISS - Telangana Today

Astronaut Shubhanshu Shukla returns home

Indian Astronaut Shubhanshu Shukla Returns Home, Receives Grand Welcome At  Delhi Airport | India News | Zee News

ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕಳಿಸಲು ಏರ್ಪಾಡು ಮಾಡಲಾಗಿತ್ತು. ತರಬೇತಿ ಬಳಿಕ ಅವರನ್ನು ಆಕ್ಸಿಯಮ್ -4 ಮಿಷನ್‌ನ (Axiom-4 mission) ಪೈಲಟ್ ಮಾಡಲಾಗಿತ್ತು. ಜೂನ್ 25ರಂದು ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾತ್ರ ಕೈಗೊಂಡಿದ್ದರು. ಜೂನ್ 26ರಂದು ಐಎಸ್ಎಸ್ ಗೆ ಸಂಪರ್ಕ ಕಲ್ಪಿಸಲಾಗಿತ್ತು. 

ಶುಭಾಂಶು ಶುಕ್ಲಾ ಒಂದು ವರ್ಷದಿಂದ ಅಮೇರಿಕಾದಲ್ಲಿರುವ ನಾಸಾ, ಆಕ್ಸಿಯಂ ಮತ್ತು ಸ್ಪೇಸ್ ಎಕ್ಸ್ ಸಹಾಯದಿಂದ ತರಬೇತಿ ಪಡೆಯುತ್ತಿದ್ದರು. ಶುಕ್ಲಾ ಅವರ ಗಗನಯಾತ್ರೆಯ ಈ ಅನುಭವವು ಭಾರತದ ಬಾಹ್ಯಾಕಾಶ ಕನಸಿಗೆ ದೊಡ್ಡ ಕೊಡುಗೆ ನೀಡಿದೆ. ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನದಲ್ಲಿ (2027) ಪ್ರಮುಖ ಪಾತ್ರ ವಹಿಸಲಿದೆ. ಇದರ ಹೊರತಾಗಿ 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ (ಭಾರತೀಯ ಅಂತರಿಕ್ಷ ನಿಲ್ದಾಣ) ಮತ್ತು 2040ರ ವೇಳೆಗೆ ಮಾನವ ಸಹಿತ ಚಂದ್ರನಲ್ಲಿಗೆ ತೆರಳುವ ಕಾರ್ಯಾಚರಣೆಗೂ ಸಹಕಾರಿಯಾಗಲಿದೆ. 

ಪ್ರಧಾನಿ ಭೇಟಿಗೆ ದಿನ ನಿಗದಿ 

ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಶುಕ್ಲಾ ಅವರ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತಕ್ಕೆ ಬಂದಿರುವ ಶುಕ್ಲಾ ಅವರು ಪ್ರಧಾನಿಯವರನ್ನು ಭೇಟಿ ಆಗಲಿದ್ದಾರೆ. ಆಗಸ್ಟ್ 23ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಕಾರ್ಯಕ್ರಮದಲ್ಲೂ  ಭಾಗವಹಿಸಲಿದ್ದಾರೆ. ಸಂಸತ್ತಿನಲ್ಲೂ ಸೋಮವಾರ ಶುಕ್ಲಾ ಅವರ ಧ್ಯೇಯದ ಕುರಿತು ವಿಶೇಷ ಚರ್ಚೆ ನಡೆಯಲಿದೆ.

Astronaut Shubhanshu Shukla returned to India early Sunday to a rousing welcome by a large number of people waving the tricolour and beating drums at the airport here to celebrate his historic visit to the International Space Station (ISS).