ಬ್ರೇಕಿಂಗ್ ನ್ಯೂಸ್
03-01-23 08:08 pm HK News Desk ದೇಶ - ವಿದೇಶ
ನವದೆಹಲಿ, ಜ.3 : ಕೆಲವರಿಗೆ ಮಕ್ಕಳು ಮಾಡುವುದೇ ಜೀವನದ ಪರಮ ಗುರಿಯಾದಂತಿದೆ. ಪಾಕಿಸ್ತಾನದ ಕ್ವೆಟ್ಟಾ ನಗರದ ನಿವಾಸಿ ಜಾನ್ ಮಹಮ್ಮದ್ ಎನ್ನುವಾತ ತನ್ನ ಮೂವರು ಪತ್ನಿಯರಿಂದ ಬರೋಬ್ಬರಿ 60 ಮಕ್ಕಳನ್ನು ಹುಟ್ಟಿಸಿದ್ದಾನಂತೆ. ಮೊನ್ನೆ ಹೊಸ ವರ್ಷದಂದು ಈತನಿಗೆ 60ನೇ ಮಗು ಜನಿಸಿದೆಯಂತೆ.
ಅಚ್ಚರಿ ಅಂದ್ರೆ, ಜಾನ್ ಮಹಮ್ಮದ್ತನ್ನ ಮೂವರು ಹೆಂಡತಿಯರಿಂದ 60 ಮಕ್ಕಳು ಪಡೆದಿದ್ದಾನೆ. ಸರಾಸರಿ ಓರ್ವ ಹೆಂಡತಿಯಿಂದ 20 ಮಕ್ಕಳಂತೆ ! 60 ಜನ ಮಕ್ಕಳಲ್ಲಿ 5 ಮಕ್ಕಳು ಸಾವನ್ನಪ್ಪಿದ್ದು 55 ಮಕ್ಕಳು ಆರೋಗ್ಯವಾಗಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಾನ್ ಮಹಮ್ಮದ್, ಹೊಸ ವರ್ಷದ ಆಗಮನದಲ್ಲಿ ಮತ್ತೊಂದು ಮಗು ಜನಿಸಿರುವುದು ತುಂಬಾ ಸಂತಸವಾಗಿದೆ. ಮಗುವಿಗೆ ಹಾಜಿ ಖುಷ್ ಖಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾನೆ. ಜಾನ್ ಮಹಮ್ಮದ್ ಕುಟುಂಬದ ಮೂವರು ಹೆಂಡತಿಯರು ಮತ್ತು ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಜಾನ್ ಮಹಮ್ಮದ್ ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಸ್ವಂತ ಕ್ಲಿನಿಕ್ ಕೂಡ ನಡೆಸುತ್ತಿದ್ದಾರೆ.
60 ಮಕ್ಕಳನ್ನು ಪಡೆದರೂ ಈತನಿಗೆ ತೃಪ್ತಿಯಿಲ್ಲವಂತೆ. 55 ವರ್ಷದ ಜಾನ್ ಮಹಮ್ಮದ್ ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ. 4ನೇ ಮದುವೆಗೆ ಹೆಣ್ಣು ಹುಡುಕುತ್ತಿದ್ದಾನೆಂದು ಪಾಕಿಸ್ಥಾನದ ಮಾಧ್ಯಮ ವರದಿ ಮಾಡಿದೆ. ಜಾನ್ ಮಹಮ್ಮದ್ ಈ ಹಿಂದೆ '100 ಮಕ್ಕಳನ್ನು ಹೊಂದುವುದು ತನ್ನ ಗುರಿಯಾಗಿದೆ' ಎಂದು ಹೇಳಿದ್ದ. ತನಗೆ ಹೆಚ್ಚಿನ ಮಕ್ಕಳನ್ನು ದಯಪಾಲಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞನಾಗಿದ್ದೇನೆ ಎಂದೂ ಹೇಳಿದ್ದ.
Another child has been born on the very first day of the year 2023 to the wife of Jan Mohammad, a resident of Quetta, after which the total number of his children has reached to 60. Jan Muhammad’s 60 children have been born from three wives while 5 of his children have died. 55 children of Jan Muhammad are alive and healthy.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm