ಬ್ರೇಕಿಂಗ್ ನ್ಯೂಸ್
22-08-26 01:37 pm HK News Staffer ಕರಾವಳಿ
ಮಂಗಳೂರು, ಆ.22: ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್ ಮಾಡಿದ್ದೇವೆ. ಆದ್ರೆ ನಮ್ಮ ರಾಜ್ಯದಲ್ಲಿ ಕೃತಕ ಪನೀರ್ ಯಾರು ಬಳಸುತ್ತಿಲ್ಲ. ಹೊರಗಿನಿಂದ ಕೃತಕ ಪನೀರ್ ಬರೋ ಸಾದ್ಯತೆ ಇದೆ. ಆದ್ರಿಂದ ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್ ಮಾಡುತ್ತೇವೆ. ಕೇವಲ ಪನೀರ್ ಮಾತ್ರವಲ್ಲ. ಕೃತಕವಾಗಿ ತಯರಾಗೋ ಎಲ್ಲವು ಕೂಡ ರಾಜ್ಯದಲ್ಲಿ ಬ್ಯಾನ್ ಆಗಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಕಲಿ ಔಷಧ ಜಾಲ ಗಂಭೀರವಾಗಿದೆ, ಇದೊಂದು ದೊಡ್ಡ ಮಾಫಿಯಾ. ಇದು ಕರ್ನಾಟಕ ಮಾತ್ರ ಸೀಮಿತವಾಗಿಲ್ಲ, ಇದು ಬೇರೆ ಕಡೆಯೂ ಇದೆ. ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಅನಧಿಕೃತ ಕಂಪೆನಿ ಮಾಡಿ ಪೂರೈಕೆ ಮಾಡ್ತಾರೆ. ನಕಲಿ ಔಷಧ ದೊಡ್ಡ ಮಟ್ಟದ ಜಾಲ, ಹಾಗಾಗಿ ಎಸ್ಐಟಿ ಮಾಡಲು ಮನವಿ ಮಾಡಲಾಗಿತ್ತು. ನಕಲಿ ಜಾಲದಲ್ಲಿ ಜನೌಷಧಿ ಬಗ್ಗೆ ಗಮನಕ್ಕೆ ಬಂದಿಲ್ಲ. ಸರ್ಕಾರದ ಜನೌಷಧಿ ಕೇಂದ್ರದ ಬಗ್ಗೆಯೂ ನಮ್ಮ ಇಲಾಖೆ ಪರಿಶೀಲನೆ ಮಾಡಿದೆ. ಅವುಗಳ ಬಗ್ಗೆ ಎಲ್ಲಾ ದಾಖಲೆಗಳು ನಮ್ಮಲ್ಲಿ ಇದೆ. ರಾಜ್ಯದ ಉದ್ದಗಲಕ್ಕೂ ನಾವು ದಾಳಿ ಮಾಡ್ತಾ ಇದೇವೆ. ಅದರರ್ಥ ನಾವೇ ಎಲ್ಲಾ ಮಾಡಬೇಕು ಅಂತ ಅರ್ಥ ಅಲ್ಲ, ಜನಜಾಗೃತಿ ಮೂಡಿಸ್ತಾ ಇದೇವೆ. ಜನ ಸ್ವಯಂಪ್ರೇರಿತವಾಗಿ ಮುಂದೆ ಬಂದು ಕ್ಯೂ ಆರ್ ಕೋಡ್ ಮೂಲಕ ದೂರು ನೀಡಿ. ಆಹಾರ ಮತ್ತು ಔಷಧ ಸುರಕ್ಷತಾ ಇಲಾಖೆಗೆ ದೂರು ನೀಡಲು ಈ ಕ್ಯೂ ಆರ್ ಕೋಡ್ ಇರಲಿದೆ. ಈಗಾಗಲೇ 400 ಕ್ಕೂ ಅಧಿಕ ದೂರುಗಳು ಬಂದಿವೆ. ನಮ್ಮ ಪ್ರಥಮ ದಾಳಿ ಶಿಕ್ಷೆ ಕೊಡಲು ಅಲ್ಲ, ಅವರ ತಪ್ಪು ತೋರಿಸಲು ಮಾತ್ರ. ಸದ್ಯ ಎಲ್ಲಾ ಕಡೆ ನೋಟೀಸ್ ಕೊಟ್ಟು ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ನಿಗಾ ವಹಿಸಲು 60 ವರ್ಷ ಮೇಲ್ಪಟ್ಟ ನಿವೃತ್ತಿಯಾದ ವೈದ್ಯರು ಮತ್ತು ಆಹಾರ ತಜ್ಞರನ್ನು ಒಳಗೊಂಡ ವಾಚ್ ಟೀಂ ಮಾಡಲು ಯೋಜಿಸಲಾಗಿದೆ ಎಂದು ಹೇಳಿದರು.
ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರತಿಪಕ್ಷ ಇವತ್ತು ಜನ ಸಾಮಾನ್ಯರ ಟ್ಯಾಕ್ಸ್ ದುಡ್ಡು ವ್ಯರ್ಥ ಮಾಡ್ತಿದೆ. ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು. ಇದೊಂದು ಮಹತ್ವದ ಅಧಿವೇಶನ, ಬರ, ಅತಿವೃಷ್ಟಿ ಬಗ್ಗೆ ಚರ್ಚೆ ಆಗಬೇಕು. ಆದರೆ ಇದನ್ನ ಸಂಪೂರ್ಣ ವ್ಯರ್ಥ ಮಾಡಿರೋದನ್ನ ಜನರು ಕ್ಷಮಿಸಲ್ಲ. ರಾಜಕೀಯ ಮಾಡಲಿ, ಆದರೆ ರಾಜ್ಯಕ್ಕೆ ಇದರಿಂದ ಅನ್ಯಾಯ ಆಗಬಾರದು. ಸ್ಪಷ್ಟವಾದ ಕಾರಣ ಇಲ್ಲದೇ ಗದ್ದಲ ಮಾಡೋದರ ಹಿಂದೆ ಹಿಡನ್ ಅಜೆಂಡಾ ಇದೆ. ನೋಟೀಸ್ ಕೊಟ್ಟು ಚರ್ಚೆ ಮಾಡುವ ಬದಲು ರಾಜಕೀಯ ಮಾಡ್ತಿದಾರೆ. ನಾಗೇಂದ್ರ ಮಂತ್ರಿಯಾಗಿದ್ದಾಗ ಅನುದಾನ ದುರ್ಬಳಕೆ ಬಗ್ಗೆ ಆರೋಪದಲ್ಲಿ ಅವರು ರಾಜೀನಾಮೆ ಕೊಟ್ಟಿದ್ದರು. ರಾಜೀನಾಮೆ ಕೊಟ್ಡ ಬಳಿಕ ಸಚಿವ ಸ್ಥಾನದಿಂದ ದೂರ ಇದ್ದರು. ಅವರು ಈಗಾಗಲೇ ಎಲ್ಲಾ ರೀತಿಯ ತನಿಖೆ ಎದುರಿಸಿ ಕ್ಲೀನ್ ಚಿಟ್ ಸಿಕ್ಕಿದೆ. ಹೋದ ಹಣ ಕೂಡ ಮತ್ತೆ ಸರ್ಕಾರದ ಇಲಾಖೆಗೆ ವಾಪಾಸ್ ಬಂದಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ದವೂ ಕ್ರಮ ಆಗಿದೆ. ದೋಷ ಮುಕ್ತವಾಗಿ ಬಂದ ನಂತರ ಕಾನೂನು ಪ್ರಕಾರ ಮಂತ್ರಿ ಸ್ಥಾನ ಕೊಡಲಾಗಿದೆ. ಬಿಜೆಪಿಯವರು ಹೊರಗೆ ಪಾದಯಾತ್ರೆ ಮಾಡಲಿ, ಆದರೆ ವಿಧಾನಸಭೆಯಲ್ಲಿ ರಾಜಕೀಯ ಬೇಡ ಎಂದು ಖಾದರ್ ಹೇಳಿದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am