ಬ್ರೇಕಿಂಗ್ ನ್ಯೂಸ್
09-01-22 12:50 pm HK Desk news ಕರ್ನಾಟಕ
ರಾಮನಗರ, ಜ.9 : ರಾಜ್ಯ ಸರಕಾರದ ಬಿಗಿ ಪಟ್ಟು, ಕೊರೊನಾ ಕರ್ಫ್ಯೂ ಹೊರತಾಗಿಯೂ ಕಾಂಗ್ರೆಸ್ ಹಿಡಿದ ಹಠದಿಂದ ಹಿಂದೆ ಸರಿಯಲಿಲ್ಲ. ಮೇಕೆದಾಟು ಯೋಜನೆ ಆಗ್ರಹಿಸಿ, ಕನಕಪುರದ ಸಂಗಮ ಕ್ಷೇತ್ರದಿಂದ ಪಾದಯಾತ್ರೆ ಆರಂಭಗೊಂಡಿದ್ದು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಡೋಲು, ನಗಾರಿ, ವೇಷ ಭೂಷಣದ ಜೊತೆಗೆ 5 ಸಾವಿರಕ್ಕೂ ಹೆಚ್ಚು ಜನರು ಮೊದಲ ದಿನವೇ ಕಾಲ್ನಡಿಗೆಯಲ್ಲಿ ತೊಡಗಿದ್ದು ಕನಕಪುರದ ಬಂಡೆ ಡಿಕೆ ಶಿವಕುಮಾರ್ ಸಾರಥ್ಯ ವಹಿಸಿದ್ದಾರೆ.
ಕನಕಪುರದಿಂದ ಬೆಂಗಳೂರು ನಗರದ ವರೆಗೆ 123.5 ಕಿಮೀ ದೂರದ ಕಾಲ್ನಡಿಗೆ ಯಾತ್ರೆ ಇದಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವ ವಹಿಸಿದ್ದಾರೆ. ದಿನವೂ 15ರಿಂದ 16 ಕಿಮೀ ಕ್ರಮಿಸಿ ಆಯಾ ಭಾಗದಲ್ಲಿ ಜನರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಇಂದು ಸಂಗಮ ಕ್ಷೇತ್ರದಿಂದ ಹೊರಟು ಸಂಜೆ ವೇಳೆಗೆ 15 ಕಿಮೀ ದೂರದ ಕನಕಪುರದ ಡಿಕೆಶಿ ಹುಟ್ಟೂರು ದೊಡ್ಡ ಆಲಹಳ್ಳಿಗೆ ಪಾದಯಾತ್ರೆ ತಲುಪಲಿದ್ದು, ಅಲ್ಲಿ ಅದ್ದೂರಿಯಿಂದ ಸ್ವಾಗತಿಸಲು ಸಿದ್ಧತೆ ನಡೆದಿದೆ.
ಇದೇ ವೇಳೆ, ಮಾತನಾಡಿರುವ ಸಿದ್ದರಾಮಯ್ಯ ರಾಜ್ಯದ 2.5 ಕೋಟಿ ಜನರಿಗೆ ನೀರು ನೀಡುವ ಉದ್ದೇಶದಿಂದ ಮೇಕೆದಾಟು ಯೋಜನೆ ರೂಪಿಸಲಾಗಿದೆ. ಇದಕ್ಕೆ ನಮ್ಮ ಸರಕಾರ ಇದ್ದಾಗ ಡಿಪಿಆರ್ ತಯಾರಿಸಿದ್ದು, ಕೇಂದ್ರ ಸರಕಾರದ ಒಪ್ಪಿಗೆ ಪಡೆಯಲಾಗಿದೆ. ಆದರೆ, ಇದನ್ನು ಈಗಿನ ರಾಜ್ಯ ಸರಕಾರ ನಡೆಸುತ್ತಿಲ್ಲ. ಭವಿಷ್ಯದಲ್ಲಿ 116 ಟಿಎಂಸಿ ನೀರು ಬೆಂಗಳೂರು ಮಹಾನಗರಕ್ಕೆ ಬೇಕಾಗುತ್ತದೆ. ಮಾರ್ಚ್, ಎಪ್ರಿಲ್, ಮೇನಲ್ಲಿ ನೀರು ಸಾಕಾಗುತ್ತಿಲ್ಲ. ಕುಡಿಯಲು, ಕೃಷಿಗೆ ನೀರು ಕೊಡ ಬೇಕಾಗುತ್ತದೆ. ಸುಪ್ರೀಂ ಕೋರ್ಟ್ 170 ಟಿಎಂಸಿ ನೀರು ಮಾಡಿಕೊಳ್ಳುವಂತೆ ಆದೇಶ ನೀಡಿದೆ.
ಯೋಜನೆಯಿಂದಾಗಿ ಆರು ಸಾವಿರ ಎಕರೆ ಅರಣ್ಯ ಮುಳುಗಡೆಯಾಗುತ್ತದೆ. ಇದರ ಬದಲು ಹತ್ತು ಸಾವಿರ ಎಕರೆ ಅರಣ್ಯ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಕೇಂದ್ರಕ್ಕೆ ಪ್ರಸ್ತಾವನೆ ನೀಡಿದ್ದು, ಒಪ್ಪಿಗೆ ನೀಡಿದೆ. ಆದರೆ ಈಗಿನ ಬಿಜೆಪಿ ಸರಕಾರ ಬಂದು ಎರಡು ವರ್ಷ ಆಗಿದೆ. ತಮಿಳುನಾಡಿನ ಜನರ ಭಯದಲ್ಲಿ ಯೋಜನೆ ಮುಂದುವರಿಸಲು ಮುಂದಾಗುತ್ತಿಲ್ಲ. ಯೋಜನೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಂಡ್ಯ, ಮೈಸೂರು, ರಾಮನಗರ ಸೇರಿ 4-5 ಜಿಲ್ಲೆಗಳ ಜನರು ಕಾಲ್ನಡಿಗೆಯಲ್ಲಿ ಭಾಗಿಯಾಗಿದ್ದು, 5ರಿಂದ 6 ಸಾವಿರ ಜನರು ಪಾಲ್ಗೊಂಡಿದ್ದಾರೆ. ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದು, ಜನವರಿ 19ರ ವರೆಗೂ ನಡೆಯಲಿದೆ ಎಂಬ ಮಾಹಿತಿಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಾವಿರಾರು ಜನರು ಗುಂಪು ಕೂಡಿಕೊಂಡು, ಕುಣಿದುಕೊಂಡು ಪಾದಯಾತ್ರೆ ಹೊರಟಿದ್ದಾರೆ.
A political showdown is on the cards on Sunday as the Congress is set to launch its 168km Mekedatu padayatra at Sangama, the confluence of Cauvery and Arkavathi rivers, amid the weekend curfew and the state government warning of legal action. The government plans to stop Congress workers from participating in the padayatra at the Kanakpura border. Ramanagara district authorities have clamped prohibitory orders in the entire district and police have erected barricades all over the district and deputed 2,000 personnel as the ruling BJP faces off with the opposition Congress.
25-08-25 10:37 am
HK News Desk
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm