ಬ್ರೇಕಿಂಗ್ ನ್ಯೂಸ್
17-12-21 05:40 pm HK Desk news ಕರ್ನಾಟಕ
ಬೆಳಗಾವಿ, ಡಿ.17 : ಅತ್ಯಾಚಾರ ಆಗುವಾಗ ತಪ್ಪಿಸಲು ಸಾಧ್ಯವಾಗದಿದ್ದರೆ, ಮಲಗಿಕೊಂಡು ಆನಂದ ಪಡಬೇಕು ಎಂದು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತನ್ನ ಹೇಳಿಕೆ ವಿವಾದಕ್ಕೆ ಈಡಾಗುತ್ತಿದ್ದಂತೆಯೇ ಕ್ಷಮೆ ಯಾಚಿಸಿದ್ದಾರೆ.
ಸದನದಲ್ಲಿ ಅತಿವೃಷ್ಟಿ ಕುರಿತು ಮಾತನಾಡುತ್ತಿದ್ದ ರಮೇಶ್ ಕುಮಾರ್, ಸ್ಪೀಕರನ್ನು ಉದ್ದೇಶಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ. ಆದರೆ, ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಎಂದರೆ, ಲೆಟ್ಸ್ ಎಂಜಾಯ್ ಸಿಚುವೇಷನ್ ಅನ್ನೋ ರೀತಿಯಾಗಿದೆ ಎಂದು ಹೇಳಿದರು.
ರೇಪ್ ಆಗುವಾಗ ತನಗೆ ತಡೆಯಲು ಆಗದಿದ್ದರೆ, ಮಲಗಿಕೊಂಡು ಎಂಜಾಯ್ ಮಾಡಬೇಕು ಅಂತ ಹೇಳುತ್ತಿದ್ದೀರಿ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು. ಆದರೆ ಈ ರೀತಿಯ ವ್ಯಂಗ್ಯವನ್ನು ವಿರೋಧಿಸದೇ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ನಕ್ಕಿದ್ದರು. ಸದನದ ಯಾವುದೇ ಸದಸ್ಯರು ಇದನ್ನು ವಿರೋಧಿಸಲಿಲ್ಲ.
ರಮೇಶ್ ಕುಮಾರ್ ಅವರು ಉದಾಹರಣೆಯಾಗಿ ನೀಡಿದ್ದ ಹೇಳಿಕೆ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನ್ನ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ರಮೇಶ್ ಕುಮಾರ್ ಟ್ವೀಟ್ ಮಾಡಿದ್ದು, ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯತನದ ಕಮೆಂಟ್ ಮಾಡಿದ್ದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಘೋರ ಅಪರಾಧವನ್ನು ಹಗುರಗೊಳಿಸುವುದು ನನ್ನ ಉದ್ದೇಶವಲ್ಲ. ಇನ್ನು ಮುಂದೆ ನನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
I would like to express my sincere apologies to everyone for the indifferent and negligent comment I made in today’s assembly about “Rape!” My intention was not trivialise or make light of the heinous crime, but an off the cuff remark! I will choose my words carefully henceforth!
— K. R. Ramesh Kumar (@KRRameshKumar1) December 16, 2021
A Karnataka Congress leader's egregious "enjoy rape" comments have triggered outrage all the way to Delhi. Congress MLA KR Ramesh Kumar, who has apologised in the assembly and on Twitter, has embarrassed his party, which faced criticism in and outside parliament. Union Women and Child Development Minister Smriti Irani raised it in parliament when she was interrupted by opposition protests over central minister Ajay Mishra, whose son is accused of running over farmers. When protesting MPs blocked her view with placards while she was speaking, Smriti Irani hit out at the Congress.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm