ಬ್ರೇಕಿಂಗ್ ನ್ಯೂಸ್
10-11-21 05:27 pm Headline Karnataka News Network ಕರ್ನಾಟಕ
ಮಡಿಕೇರಿ, ನ.10: ಸಿದ್ದರಾಮಯ್ಯ ಸರಕಾರ ಇದ್ದಾಗ ಜಾರಿಗೆ ತಂದಿದ್ದ ನ.10ರ ಟಿಪ್ಪು ಜಯಂತಿ ಕಾರ್ಯಕ್ರಮ ಕೊಡಗಿನಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. 2015ರಲ್ಲಿ ಟಿಪ್ಪು ಜಯಂತಿ ವಿರೋಧಿಸಿ ನಡೆಸಿದ ಪ್ರತಿಭಟನೆ ಆನಂತರ ಹಿಂಸೆಗೆ ತಿರುಗಿ ಹಿಂದು ಸಂಘಟನೆಯ ಮುಖಂಡ ದೇವಪ್ಪಂಡ ಕುಟ್ಟಪ್ಪ ಎಂಬವರು ಸಾವನ್ನಪ್ಪಿದ್ದರು. ಇದಾಗಿ ಆರು ವರ್ಷಗಳ ನ.10ರ ಇದೇ ದಿನ ಮಡಿಕೇರಿ ನಗರದಲ್ಲಿ ಕುಟ್ಟಪ್ಪ ಸ್ಮರಣಾರ್ಥ ಬಿಜೆಪಿ ಕಾರ್ಯಕ್ರಮ ಏರ್ಪಡಿಸಿತ್ತು.
ವಿವಿಧೆಡೆ ಕಾರ್ಯಕ್ರಮ ಏರ್ಪಡಿಸಿ ಮೆರವಣಿಗೆ ನಡೆಸಲು ಬಿಜೆಪಿ ಸಿದ್ಧತೆ ನಡೆಸಿತ್ತು. ಆದರೆ, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಿಂದು ಸಂಘಟನೆ ಮತ್ತು ಬಿಜೆಪಿ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಮಡಿಕೇರಿ ನಗರದಲ್ಲಿ ಓಂಕಾರೇಶ್ವರಿ ಮತ್ತು ಚೌಡೇಶ್ವರಿ ದೇಗುಲದಲ್ಲಿ ಪೂಜೆ ನಡೆಸಿ ಹೊರಬರುತ್ತಿದ್ದ ಹಿಂದು ಸಂಘಟನೆ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಆಗಿದ್ದ ಕುಟ್ಟಪ್ಪ ಸ್ಮರಣಾರ್ಥ ಟಿಪ್ಪು ಜಯಂತಿ ದಿನವೇ ಹಿಂದು ಸಂಘಟನೆಗಳು ಕಾರ್ಯಕ್ರಮ ಏರ್ಪಡಿಸಿದ್ದು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎನ್ನುವ ಕಾರಣವೊಡ್ಡಿ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇದೇ ವೇಳೆ ಚೌಡೇಶ್ವರಿ ದೇಗುಲದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಕುಟ್ಟಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್ ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರು ಇದ್ದರು. ಪೂಜೆ ಮುಗಿಸಿ ದೇಗುಲದಿಂದ ಹೊರಬರುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
2015ರಲ್ಲಿ ಟಿಪ್ಪು ಜಯಂತಿ ಪರವಾಗಿ ಮತ್ತು ವಿರೋಧಿಸಿ ಎರಡೂ ಸಂಘಟನೆಗಳು ಮಡಿಕೇರಿಯಲ್ಲಿ ಸೇರಿದ್ದು, ಆಬಳಿಕ ಗಲಾಟೆ ನಡೆದಿತ್ತು. ಸಂಘರ್ಷದಲ್ಲಿ ಕುಟ್ಟಪ್ಪ ತಲೆಗೆ ಏಟು ಬಿದ್ದು ಸಾವು ಕಂಡಿದ್ದರು. ಈ ವಿಚಾರ ಬಿಜೆಪಿ ಮತ್ತು ಹಿಂದು ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕುಟ್ಟಪ್ಪ ಅಗಲಿದ ದಿನವಾಗಿ ನ.10ರಂದು ಪ್ರತಿ ವರ್ಷ ಅವರ ಸ್ಮರಣಾರ್ಥ ಕಾರ್ಯಕ್ರಮ ನಡೆಸುತ್ತಿದ್ದಾರೆ. 2019ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜುಲೈ 30ರಂದು ಟಿಪ್ಪು ಜಯಂತಿ ರದ್ದುಪಡಿಸಿ ಆದೇಶ ಹೊರಡಿಸಿತ್ತು. ಸಿಎಂ ಯಡಿಯೂರಪ್ಪ ತಾನು ಹೇಳಿದಂತೆ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ ಬಳಿಕ ನ.10ರ ಸರಕಾರಿ ಪ್ರಾಯೋಜಿತ ಟಿಪ್ಪು ಜಯಂತಿಗೆ ಬ್ರೇಕ್ ಬಿದ್ದಿತ್ತು. ಹಾಗಿದ್ದರೂ, ಕಾಂಗ್ರೆಸಿನ ಅಲ್ಪಸಂಖ್ಯಾತ ಘಟಕಗಳು ಮತ್ತು ಕೆಲವು ಸಂಘಟನೆಗಳ ವತಿಯಿಂದ ಮಂಡ್ಯ, ವಿಜಯಪುರ ಸೇರಿ ಕೆಲವು ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಯುತ್ತಿದೆ. ಕೊಡಗಿನಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಪೊಲೀಸ್ ಇಲಾಖೆ ಸೆಕ್ಷನ್ ಜಾರಿಗೊಳಿಸಿತ್ತು.
Madikeri On Tipu Jayanti day Devapanda Kuttappa death remembered BJP leaders and Hindu activists detained by police. Hindu organizations leaders performed pooja at Madikeri temple to remember the death of Devapanda Kuttappa who killed during the Tipu
02-02-26 05:12 pm
Bangalore Correspondent
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
ಮಾವನ ಮಗನ ಜೊತೆ ಎಂಗೇಜ್ಮೆಂಟ್ ; ಮದುವೆಗೆ ತಿಂಗಳು...
02-02-26 03:02 pm
ತಾಯಿ ದುಡುಕುತನಕ್ಕೆ ಮೂರು ಕಂದಮ್ಮಗಳು ಬಲಿ ! ಅತ್ತೆ...
02-02-26 12:18 pm
FM Sitharaman, Mohandas Pai, PM Modi, C.J. Ro...
31-01-26 11:05 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
02-02-26 05:09 pm
Mangalore Correspondent
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm