ಬ್ರೇಕಿಂಗ್ ನ್ಯೂಸ್
29-09-21 01:51 pm Headline Karnataka News Network ಕರ್ನಾಟಕ
ತುಮಕೂರು, ಸೆ.29: ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ಸ್ಫೋಟಗೊಂಡಿದ್ದು, ಜಿಲ್ಲಾಧ್ಯಕ್ಷ ಸ್ಥಾನದಿಂದ ಇಳಿಸಲ್ಪಟ್ಟಿರುವ ಯಡಿಯೂರಪ್ಪ ಆಪ್ತನಾಗಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಸುರೇಶ್ ಗೌಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಿನಾಮೆಗೆ ಕಾರಣ ಏನೆಂದು ಕೇಳಿದ್ದಕ್ಕೆ, ಅದನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿಯಲ್ಲೇ ಕೇಳಬೇಕು. ಜಿಲ್ಲಾಧ್ಯಕ್ಷನಾಗಲು ಬಯಕೆ ಇರಲಿಲ್ಲ. ಕಳೆದ ಬಾರಿ ಕಟೀಲ್ ಅವರು ಕೇಳಿಕೊಂಡಿದ್ದಕ್ಕೆ ಜಿಲ್ಲಾಧ್ಯಕ್ಷನಾಗಿದ್ದೆ. ಸತ್ಯಗಳು ಕಠೋರವಾಗಿರುತ್ತವೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಗುಡುಗಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷ ಯಾರು ಬೇಕಾದರೂ ಆಗಬಹುದು. ದೇಶದಲ್ಲಿ ಮೋದಿ, ಅಮಿತ್ ಷಾ ಜೋಡಿ ಭಾರತವನ್ನು ವಿಶ್ವದಲ್ಲೇ ಪ್ರಬಲ ರಾಷ್ಟ್ರವಾಗಿ ಮಾಡಿದ್ದಾರೆ. ಅಂತಹ ನಾಯಕತ್ವ ಇರಬೇಕಾದರೆ, ರಾಜ್ಯಾಧ್ಯಕ್ಷನಾಗಿ ಯಾರು ಬೇಕಾದರೂ ಮುನ್ನಡೆಸಬಹುದು. ನನಗೆ ಕೊಟ್ಟರೂ ರಾಜ್ಯಾಧ್ಯಕ್ಷನಾಗಿ ಮುನ್ನಡೆಸುತ್ತೇನೆ ಎಂದು ಪರೋಕ್ಷವಾಗಿ ನಳಿನ್ ಕುಮಾರ್ ವೈಫಲ್ಯದ ಬಗ್ಗೆ ಕುಟುಕಿದ್ದಾರೆ.
ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಮೂರು ಬಣಗಳಿವೆ. ಸಂಸದ ಜಿ.ಎಸ್. ಬಸವರಾಜು, ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಸುರೇಶ್ ಗೌಡರದ್ದು ಪ್ರತ್ಯೇಕ ಬಣಗಳಾಗಿವೆ. ಇತ್ತೀಚೆಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಸುರೇಶ್ ಗೌಡ ಆರೆಸ್ಸೆಸ್ ನಾಯಕರನ್ನು ಗುರಿಯಾಗಿಸಿ ನಾಲಿಗೆ ಹರಿಬಿಟ್ಟಿದ್ದರು. ಆರೆಸ್ಸೆಸ್ ನವರಿಗೆ, ಅವರ ಪತ್ರಿಕೆಗೆ ಯಡಿಯೂರಪ್ಪ ಎಷ್ಟು ಕೋಟಿ ಹಣ ನೀಡಿಲ್ಲ. ಅವರು ಯಾವುದನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳದೆ ಅಧಿಕಾರದಿಂದ ಹೊರದಬ್ಬಿದ್ರು ಎಂದು ತಮ್ಮ ಆಪ್ತರೊಂದಿಗೆ ನೋವಿನಿಂದ ಮಾತನಾಡಿದ್ದನ್ನು ಯಾರೋ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ, ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು.
ಯಡಿಯೂರಪ್ಪ ಅವರನ್ನು ಇಳಿಸುವುದಕ್ಕೆ ಆರೆಸ್ಸೆಸ್ ನಾಯಕರೇ ಕಾರಣ ಎಂದು ಹೇಳಿದ್ದ ಸುರೇಶ್ ಗೌಡರ ವಿಡಿಯೋ ಭಾರೀ ವೈರಲ್ ಆಗಿದ್ದಲ್ಲದೆ, ಆರೆಸ್ಸೆಸ್ ನಾಯಕರಿಗೆ ತೀವ್ರ ಮುಜುಗರ ಸೃಷ್ಟಿಸಿತ್ತು. ಆರೆಸ್ಸೆಸ್ ಪತ್ರಿಕೆಗೆ ಕೋಟಿ ಕೋಟಿ ಹಣ ಕೊಟ್ಟಿದ್ದನ್ನು ಕೂಡ ಪ್ರಸ್ತಾವಿಸಿದ್ದರು. ಅದೇ ವಿಚಾರವನ್ನು ಮುಂದಿಟ್ಟು ಸುರೇಶ್ ಗೌಡ ರಾಜಿನಾಮೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ಆದರೆ, ಸುರೇಶ್ ಗೌಡ ರಾಜಿನಾಮೆಯನ್ನು ಆರೆಸ್ಸೆಸ್ ನಾಯಕರನ್ನು ತೆಗಳಿದ ವಿಚಾರ ಸೇರಿದಂತೆ ಯಡಿಯೂರಪ್ಪ ಬಣದ ವ್ಯಕ್ತಿ ಎನ್ನುವ ಕಾರಣಕ್ಕೆ ತೆರವು ಮಾಡಲಾಗಿದೆ ಎನ್ನುವ ವಿಶ್ಲೇಷಣೆಯೂ ಕೇಳಿಬಂದಿದೆ.
ಯಡಿಯೂರಪ್ಪ ನಿಷ್ಠರಿಗೆ ಹೊರಕ್ಕಟ್ಟುವ ತಂತ್ರ
ಯಡಿಯೂರಪ್ಪ ಬಣದ ವ್ಯಕ್ತಿಗಳನ್ನು ಪಕ್ಷದಿಂದ ದೂರವಿಡುವ ಪ್ರಯತ್ನದ ಭಾಗವಾಗಿ ಆರೆಸ್ಸೆಸ್ ನಾಯಕರೇ ರಾಜ್ಯಾಧ್ಯಕ್ಷನ ಮೂಲಕ ಈ ಕೆಲಸ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ರಾಜ್ಯಾದ್ಯಂತ ಬಿಎಸ್ವೈ ನಿಷ್ಠರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ಆಮೂಲಕ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಅವರ ಬೆಂಬಲಿಗರನ್ನು ಆಯಕಟ್ಟಿನ ಹುದ್ದೆಗಳಿಂದ ತೆರವುಗೊಳಿಸಿ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲಾಗುತ್ತಿದೆ.
ತುಮಕೂರಿನಲ್ಲಿ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿದ್ದ ಸುರೇಶ್ ಗೌಡ, ಪಕ್ಷದಲ್ಲಿದ್ದ ಸಾಕಷ್ಟು ಆಂತರಿಕ ಗೊಂದಲಗಳನ್ನು ನಿವಾರಿಸಿಕೊಂಡು ಪಕ್ಷವನ್ನು ಮುನ್ನಡೆಸಿದ್ದರು. ಕಳೆದ ಬಾರಿ ಶಿರಾ ವಿಧಾನಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆಗೂಡಿ, ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲುವಂತೆ ಮಾಡಿದ್ದರು. ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸಿದ್ರೂ, ಕೊನೆಗಳಿಗೆಯಲ್ಲಿ ಅದು ವಿಫಲವಾಗಿತ್ತು. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ಆನಂತರ ಯಡಿಯೂರಪ್ಪ ಕೆಜೆಪಿ ಕಟ್ಟಿ ಸುರೇಶ್ ಗೌಡರನ್ನು ಸೆಳೆಯಲು ಒತ್ತಡ ಹಾಕಿದರೂ, ಪಕ್ಷ ಬಿಟ್ಟು ತೆರಳದೆ ಬಿಜೆಪಿಯಲ್ಲೇ ಉಳಿದಿದ್ದರು.
ಇದೀಗ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಲೇ ಸುರೇಶ್ ಗೌಡರಿಗೆ ಮತ್ತೆ ಬೇಗುದಿ ಉಂಟಾಗಿತ್ತು. ಯಡಿಯೂರಪ್ಪ ನಂಬಿಕೊಂಡು ಪಕ್ಷ ಬಂದಿದ್ದೆ. 20 ವರ್ಷಗಳಿಂದ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎನ್ನುತ್ತಲೇ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಾಧುಸ್ವಾಮಿ ತಮ್ಮದೇ ಕೋಟೆ ಕಟ್ಟಿಕೊಂಡಿದ್ದರೆ, ಮಾಜಿ ಸಚಿವ ಸೊಗಡು ಶಿವಣ್ಣ ಬೇರೆಯದೇ ದಾರಿ ಹಿಡಿದಿದ್ದಾರೆ. ಇವರ ಗುಂಪುಗಾರಿಕೆಯಿಂದ ಅಂತರ ಕಾಯ್ದುಕೊಂಡಿದ್ದೇ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಒಕ್ಕಲಿಗರ ಮತಗಳನ್ನು ಸೆಳೆದಿಟ್ಟುಕೊಳ್ಳಲು ಸುರೇಶ್ ಗೌಡ ಸಫಲವಾಗಿದ್ದರು.
ಕಾಂಗ್ರೆಸಿಗೆ ಸೆಳೆಯಲು ಡಿಕೆಶಿ ಕಸರತ್ತು
ಕಳೆದ ಎರಡು ತಿಂಗಳಲ್ಲಿ ಸುರೇಶ್ ಗೌಡ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅಸಹನೆ ಹೊಂದಿರುವ ವಿಚಾರ ಅರಿತಿದ್ದ ಕಾಂಗ್ರೆಸ್ ನಾಯಕರು ಅವರನ್ನು ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸಿದ್ದಾರೆ. ಈಗಾಗ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸುರೇಶ್ ಗೌಡ ಜೊತೆ ಮಾತುಕತೆ ನಡೆಸಿದ್ದು ಪಕ್ಷಕ್ಕೆ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇಂಥ ಹೊತ್ತಲ್ಲೇ ಬಿಜೆಪಿ ನಾಯಕರು ಸುರೇಶ್ ಗೌಡರನ್ನು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ತಾವೇ ತಮ್ಮ ಬುಡಕ್ಕೆ ಕಲ್ಲು ಹಾಕ್ಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
Suresh Gowda reveals reason behind his sudden resignation says BJP party has divided in Tumkuru.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm