ಬ್ರೇಕಿಂಗ್ ನ್ಯೂಸ್
20-09-21 01:36 pm Headline Karnataka News Network ಕರ್ನಾಟಕ
Photo credits : thebengalurulive.com
ಬೆಂಗಳೂರು, ಸೆ.20: ಪಾಕಿಸ್ಥಾನದ ಉಗ್ರರು ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸುತ್ತಿದ್ದಾರೆ ಎಂಬ ಗುಪ್ತಚರ ವರದಿಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಪಾಕಿಸ್ಥಾನದ ಐಎಸ್ಐ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಶಂಕೆಯಲ್ಲಿ ರಾಜಸ್ಥಾನಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಕಚೇರಿಗಳ ಫೋಟೋ, ವಿಡಿಯೋಗಳನ್ನು ಪಾಕಿಸ್ಥಾನದ ಐಎಸ್ಐ ಏಜಂಟರಿಗೆ ರವಾನೆ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ನಿವಾಸಿಯಾಗಿರುವ ಜಿತೇಂದ್ರ ಸಿಂಗ್ ಎಂಬಾತ ಬಂಧಿತನಾಗಿದ್ದು, ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಪಾಕಿಸ್ಥಾನದ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಮಾಹಿತಿ ದೊರೆತ ಬೆಂಗಳೂರಿನಲ್ಲಿರುವ ಮಿಲಿಟರಿ ವಿಭಾಗದ ಗುಪ್ತಚರ ಅಧಿಕಾರಿಗಳು ಬೆಂಗಳೂರಿನ ಸಿಸಿಬಿ ಪೊಲೀಸರ ಜೊತೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಕಾಟನ್ ಪೇಟೆಯಿಂದ ಬಂಧಿಸಿದ್ದಾರೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿರುವ ಆರ್ಮಿ ಪೋಸ್ಟ್ ಮತ್ತು ಅಲ್ಲಿನ ಅಧಿಕಾರಿಗಳು, ಮಿಲಿಟರಿ ವಾಹನಗಳ ಬಗ್ಗೆ ಈತ ಪಾಕಿಸ್ಥಾನದ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದ್ದ. ವಾಟ್ಸಪ್ ಕರೆ, ಮೆಸೇಜ್ ಮೂಲಕ ಪಾಕಿಸ್ಥಾನದ ಐಎಸ್ಐ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಭಾರತದ ಮಿಲಿಟರಿ ಅಧಿಕಾರಿಗಳು ಬಳಕೆ ಮಾಡುವ ಬಟ್ಟೆಯನ್ನು ತೊಡುತ್ತಿದ್ದ ಜಿತೇಂದ್ರ ಸಿಂಗ್, ತಾನೊಬ್ಬ ಮಿಲಿಟರಿ ಕ್ಯಾಪ್ಟನ್ ಎನ್ನುವ ಸೋಗು ಹಾಕ್ಕೊಂಡಿದ್ದ. ಆತನ ಬಳಿಯಿದ್ದ ಮಿಲಿಟರಿ ಧಿರಿಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆಯ ಜೋಲಿ ಮಹಲ್ಲಾ ಎಂಬಲ್ಲಿ ವಾಸವಿದ್ದ. ಈತ ಬಾರ್ಮರ್ ಮಿಲಿಟರಿ ಪೋಸ್ಟ್ ಬಗ್ಗೆ ಮಾಹಿತಿಗಳನ್ನು ರವಾನಿಸುತ್ತಿದ್ದ. ಅದರ ಜೊತೆಗೆ, ಬೆಂಗಳೂರಿನ ಮಿಲಿಟರಿ ವಿಭಾಗ ಮತ್ತು ಇನ್ನಿತರ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಮಾಹಿತಿಗಳನ್ನು ರವಾಸುತ್ತಿದ್ದನೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Sources in the Bengaluru police said the suspect, Jitender Singh, is a resident of Barmer, Rajasthan and was working as a garment seller in Bengaluru. He was in communication with a Pakistan-based ISI officer over WhatsApp messages as well as WhatsApp audio and video calls. He had shared photos and details of the Army area and carried out reconnaissance of Army posts near the international border at the behest of his ISI handler.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm