ಬ್ರೇಕಿಂಗ್ ನ್ಯೂಸ್
05-05-21 02:48 pm Headline Karnataka News Network ಕರ್ನಾಟಕ
ಮಂಗಳೂರು, ಮೇ 5 : ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಸ್ಪತ್ರೆಗಳಿಗೆ ಉಚಿತ ಆಕ್ಸಿಜನ್ ನೀಡಲು ನಿರ್ಧರಿಸಲಾಗಿದೆ.
ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಮ್ಲಜನಕ ಖರೀದಿಸಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ನೀಡಲು ಆರಂಭಿಸಲಾಗಿದೆ.

ಮೊದಲ ಹಂತದಲ್ಲಿ ಆಮ್ಲಜನಕ ಉತ್ಪಾದನಾ ಸಂಸ್ಥೆಯಾದ ಜಿಂದಾಲ್ ಸ್ಟೀಲ್ ಪ್ಲಾಂಟ್‌ನ ಅಧಿಕಾರಿಗಳೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತುಕತೆ ನಡೆಸಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 5.5 ಟನ್ ಆಮ್ಲಜನಕವನ್ನು ಒದಗಿಸಲಾಗಿದೆ.

ಬಳ್ಳಾರಿಯ ತೋರಣಗಲ್ ಜಿಂದಾಲ್ ಪ್ಲಾಂಟ್‌ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಆಮ್ಲಜನಕ ಕ್ರಯೋಜನಿಕ್ ಟ್ಯಾಂಕ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದು, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಆಸ್ಪತ್ರೆ ಗೆ ಹಸ್ತಾಂತರಿಸಲಾಗಿದೆ. 5.5 ಟನ್ ಆಮ್ಲಜನಕ ವೆನ್ಲಾಕ್ ಆಸ್ಪತ್ರೆಯ ಮೂರು ದಿನಗಳ ಆಮ್ಲಜನಕದ ಬೇಡಿಕೆಯನ್ನು ಪೂರೈಸಲಿದೆ.

ಆಮ್ಲಜನಕ ಖರೀದಿ ಮತ್ತು ಸಾಗಾಟದ ಸಂಪೂರ್ಣ ವೆಚ್ಚವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯೇ ಭರಿಸಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ 100 ಟನ್ ಆಮ್ಲಜನಕ ಒದಗಿಸುವ ಗುರಿಯನ್ನು ಧರ್ಮಸ್ಥಳ ಹೊಂದಿದೆ.
ಅಲ್ಲದೆ ಗ್ರಾಮಾಭಿವೃದ್ಧಿ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ, ಮೈಸೂರು ಮತ್ತು ಧಾರವಾಡದಲ್ಲಿ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. 175 ಮಂದಿ ರೋಗಿಗಳು ಈ ಸೆಂಟರ್ ನಲ್ಲಿ ಉಚಿತ ಆಹಾರದ ಜೊತೆಗೆ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಸಾಗಿಸಬೇಕಾದ್ದಲ್ಲಿ ಕ್ಷೇತ್ರದ ವತಿಯಿಂದಲೇ ವಾಹನದ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ 800 ಮಂದಿಗೆ ಚಿಕಿತ್ಸೆ ನೀಡಲು ಸಿದ್ಧತೆಗಳನ್ನು ಕೇರ್ ಸೆಂಟರ್ ಗಳಲ್ಲಿ ಮಾಡಲಾಗಿದೆ.
Shortage of oxygen in Karnataka hence free oxygen to be supplied to hospitals in Karnataka by Daramasthala temple.
20-06-26 06:40 pm
HK News Staffer
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
20-06-26 04:21 pm
HK News Staffer
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
ಬೆಂಗಳೂರು -ಮಂಗಳೂರು 5 ಗಂಟೆ ಪ್ರಯಾಣದ ಕನಸಿಗೆ ಬ್ರೇಕ...
19-06-26 07:48 pm
ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಗುರುತು ಪತ್ತೆಗಿಳಿದ ಎಸ...
19-06-26 03:31 pm
Mangalore police suspend, Bajpe: ಅಸ್ಸಾಂ ಕಾರ್ಮ...
19-06-26 12:24 pm
20-06-26 04:43 pm
HK News Staffer
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm
Bhatkal News: ಭಟ್ಕಳದಲ್ಲಿ ಮತ್ತೆ ಕೋಮು ಸಂಘರ್ಷ ;...
18-06-26 01:20 pm