ಬ್ರೇಕಿಂಗ್ ನ್ಯೂಸ್
27-01-26 06:31 pm HK News Desk ಕರ್ನಾಟಕ
ಬೆಳಗಾವಿ, ಜ.27 : 400 ಕೋಟಿ ದರೋಡೆ ಪ್ರಕರಣದಲ್ಲಿ ನಾನಾ ರೀತಿಯ ಗೋಜಲುಗಳು ಎದುರಾಗಿದ್ದು ಕಾಂಗ್ರೆಸ್- ಬಿಜೆಪಿ ನಾಯಕರು ಕೆಸರೆರಚಾಟಕ್ಕೆ ತೊಡಗಿದ್ದಾರೆ. ಇದೇ ವೇಳೆ, ಈ ಹಣವು ಗುಜರಾತ್ ಮೂಲದ ರಾಜಕಾರಣಿಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು ಸಚಿವ ಪ್ರಿಯಾಂಕ ಖರ್ಗೆ, ಅಮಿತ್ ಷಾ - ಮೋದಿ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ದರೋಡೆ ಹಣಕ್ಕೆ ಸಂಬಂಧಿಸಿ ಆರೋಪಿ ಜಯೇಶ್ ಎಂಬಾತನ ಜೊತೆ ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಸಾಳ್ವೆ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಅದರಲ್ಲಿ, ನನ್ನ ಮತ್ತು ವಿರಾಟ್‌ಗೆ ಪರಿಚಯವಿದ್ದ ವ್ಯಕ್ತಿ ಮಧ್ಯಸ್ಥಿಕೆ ವಹಿಸಿದ್ದಾರೆ. ಈ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿ ಗುಜರಾತ್‌ನ ದೊಡ್ಡ ರಾಜಕಾರಣಿ ಎಂದು ಆಡಿಯೋದಲ್ಲಿದೆ. ಹೀಗಾಗಿ ದರೋಡೆಯಾಗಿರುವ ಹಣ ಗುಜರಾತ್ ರಾಜಕಾಣಿಗೆ ಸೇರಿದ್ದಾ ಎಂಬ ಪ್ರಶ್ನೆ ಮೂಡಿದೆ.
ಆಡಿಯೋ ಪ್ರಕಾರ ಕಿಶೋರ್ ಹಣ ಕಳುಹಿಸುತ್ತಿದ್ದ. ಆದರೆ, ಗೋವಾದಲ್ಲಿ ಹಣ ಕೊಟ್ಟಿದ್ಯಾರು? ಆ ದುಡ್ಡು ಕಿಶೋರ್‌ನದ್ದೇನಾ? ಗುಜರಾತ್ ರಾಜಕಾರಣಿಗೆ ಹೋಗಿತ್ತಾ? ಅಥವಾ ಗುಜರಾತ್ ರಾಜಕಾರಣಿಯೇ ನೋಟು ಬದಲಾವಣೆಗೆ ಕೊಟ್ಟಿದ್ದರಾ ಎಂಬುದು ನಿಗೂಢವಾಗಿದೆ. ಗುಜರಾತ್ ರಾಜಕಾರಣಿ ಕೂಡ ಬೇರೆ ಹಣದ ವ್ಯವಸ್ಥೆ ಮಾಡಿ, ಈ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂಬುದು ಆಡಿಯೋದಲ್ಲಿದೆ.
ಅಮಾನ್ಯಗೊಂಡ ಎರಡು ಸಾವಿರ ಮೌಲ್ಯದ ನೋಟುಗಳ ಕಂತೆ ಇತ್ತು ಎಂಬ ಮಾಹಿತಿಯಿದ್ದರೆ, ಆ ಹಣ ಯಾರದ್ದು ಮತ್ತು ಯಾರ ಜೇಬು ಸೇರಿದೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪ್ರಕರಣಲ್ಲಿ ಗೊಂದಲವಿದೆ. ನಮ್ಮ ಪೊಲೀಸರು ಮಹಾರಾಷ್ಟ್ರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಮೊದಲಿಗೆ ಕಿಡ್ನಾಪ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು 400 ಕೋಟಿ ರೂ. ಮೂಲದ ಬೆನ್ನತ್ತಿದ್ದಾರೆ. ದರೋಡೆ ಪ್ರಕರಣದ ಬಗ್ಗೆ ಕರ್ನಾಟಕದಲ್ಲಿ ಎಫ್ಐಆರ್ ದಾಖಲಾಗಿಲ್ಲ. ಆದರೂ ಮಹಾರಾಷ್ಟ್ರ, ಗೋವಾ ಪೊಲೀಸರ ಜೊತೆಗೆ ತನಿಖೆಗೆ ಇಳಿದಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ಪ್ರಶ್ನೆ ಮಾಡಿರುವ ಪ್ರಿಯಾಂಕ ಖರ್ಗೆ, ಮೋದಿಯವರು ಜೆನ್ ಜೀ, ಭಜನ್ ಸಂಘದ ಬಗ್ಗೆ ಮಾತನಾಡುತ್ತಾರೆ. 400 ಕೋಟಿಯಿದ್ದ ಟ್ರಕ್ ನಾಪತ್ತೆಯಾದ ಬಗ್ಗೆ ಮಾಹಿತಿ ಇಲ್ವಾ.. ಕೇಂದ್ರ ಗೃಹ ಸಚಿವ ಅಮಿತ್ ಷಾ ನಿದ್ದೆ ಮಾಡುತ್ತಿದ್ದಾರೆಯೇ..? ಎಲ್ಲಿದ್ದಾರೆ ಅವರು? ಮೂರು ರಾಜ್ಯಗಳಿಗೆ ಸಂಬಂಧಿಸಿ ದರೋಡೆಯಾಗಿದ್ದು ಯಾಕೆ ಕೇಂದ್ರೀಯ ಏಜನ್ಸಿಗಳು ಮಾತಾಡ್ತಿಲ್ಲ. ಅಮಾನ್ಯ ನೋಟುಗಳನ್ನು ಈಗಲೂ ಪ್ರಿಂಟ್ ಮಾಡುತ್ತಿದ್ದಾರೆಯೇ..? ಹೇಗೆ ಅಷ್ಟೊಂದು ಪ್ರಮಾಣದಲ್ಲಿ ಎರಡು ಸಾವಿರದ ನೋಟುಗಳು ಬಂದವು. ಕೇಂದ್ರ ತನಿಖಾ ಏಜನ್ಸಿಗಳು ವಿಪಕ್ಷ ನಾಯಕರನ್ನು ಮಾತ್ರ ತನಿಖೆ ಮಾಡೋದಾ ಎಂದು ಪ್ರಶ್ನೆ ಮಾಡಿದ್ದಾರೆ.
The ₹400 crore robbery case has taken several dramatic turns, triggering a political slugfest between Congress and BJP leaders. Amid the controversy, an audio clip allegedly suggesting that the money belonged to a Gujarat-based politician has gone viral. Karnataka minister Priyank Kharge has questioned the silence of Prime Minister Narendra Modi and Union Home Minister Amit Shah over the issue.
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 01:45 pm
HK News Staffer
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am
ಬಾಂಬ್ ಮಾದರಿಯ ವಸ್ತು ಸ್ಫೋಟಿಸಿ ರೀಲ್ಸ್ ಶೂಟಿಂಗ್ ;...
01-05-26 10:30 am
ಗುದದ್ವಾರದಲ್ಲಿ ಮೊಬೈಲ್ ಬಚ್ಚಿಟ್ಟು ಜೈಲು ಎಂಟ್ರಿಯಾದ...
01-05-26 09:39 am
ಸೌಜನ್ಯಾ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟಿಗೆ ಅ...
30-04-26 04:30 pm