ಬ್ರೇಕಿಂಗ್ ನ್ಯೂಸ್
13-01-26 12:57 pm Bangalore Correspondent ಕರ್ನಾಟಕ
ಬೆಂಗಳೂರು, ಜ.12 : ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆಕ್ಸ್ ಫರ್ಡ್ ಕಾಲೇಜು ಆಡಳಿತವು ಆರು ಮಂದಿ ಪ್ರಾಧ್ಯಾಪಕರನ್ನ ವಜಾ ಮಾಡಿದೆ.
ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ವೈದ್ಯಕೀಯ ಡೆಂಟಲ್ ಕಾಲೇಜಿನ ಡಾ.ಅನಿಮೋಲ್, ಡಾ.ಶಬಾನಾ, ಡಾ.ಫೈಕಾ, ಡಾ.ಸಿಂಧು, ಡಾ.ಸುಶ್ಮೀನಿ ಮತ್ತು ಡಾ. ಅಲ್ಬಾ ವಜಾಗೊಂಡವರು. Oral medicine & Radiology ವಿಭಾಗದ ಆರು ಮಂದಿಯನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ. ಜನವರಿ 8ರಂದು ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಳು. ಲೆಕ್ಚರರ್ಸ್ ಮತ್ತು ಪ್ರಿನ್ಸಿಪಾಲ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದು ಮನನೊಂದು ಚಂದಾಪುರದ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು.
ಘಟನೆ ಸಂಬಂಧಿಸಿ ಇತರ ವಿದ್ಯಾರ್ಥಿಗಳು ಕೂಡ ಅದೇ ರೀತಿಯ ಆರೋಪ ಮಾಡಿದ್ದರಿಂದ ಯಶಸ್ವಿನಿ ತಾಯಿ ಏಳು ಜನರ ವಿರುದ್ದ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಲ್ಲದೆ, ಸೋಮವಾರ ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಕಾಲೇಜು ಮುಂಭಾಗ ಯಶಸ್ವಿನಿ ತಾಯಿ ಮತ್ತು ಇತರ ವಿಧ್ಯಾರ್ಥಿಗಳು ಸೇರಿ ಪ್ರತಿಭಟನೆಯನ್ನೂ ನಡೆಸಿದ್ದರು. ಯಶಸ್ವಿನಿ ಪೋಟೋ ಹಿಡಿದು ಜಸ್ಟೀಸ್ ಫಾರ್ ಯಶಸ್ವಿನಿ ಎಂದು ಘೋಷಣೆ ಕೂಗಿದ್ದರು. ಇದೇ ವೇಳೆ, ಯಶಸ್ವಿನಿ ಕಾಲೇಜು ಆಡಳಿತದ ಕಿರುಕುಳಕ್ಕೆ ಬೇಸತ್ತು ಕಣ್ಣೀರು ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕಾಲೇಜು ಆಡಳಿತವು ಆರೋಪಕ್ಕೀಡಾಗಿದ್ದ ಆರು ಮಂದಿಯನ್ನ ಕೆಲಸದಿಂದಲೇ ವಜಾ ಮಾಡಿದೆ.
In connection with the suicide of dental student Yashaswini, who allegedly took the extreme step due to harassment by lecturers, the management of Oxford Medical Dental College in Bommanahalli has debarred six professors. The action follows allegations of mental torture by faculty members and the principal, complaints by other students, a police case filed by Yashaswini’s mother, and protests demanding justice.
13-01-26 03:04 pm
Bangalore Correspondent
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm