ಬ್ರೇಕಿಂಗ್ ನ್ಯೂಸ್
17-10-25 08:39 pm HK News Desk ಕರ್ನಾಟಕ
ಕಲಬುರಗಿ, ಅ.17 : 2023ರ ಚುನಾವಣೆಯಲ್ಲಿ ಅಳಂದ ಮತಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಶುಕ್ರವಾರ ಆಳಂದ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ನಿವಾಸದ ಮೇಲೆ ದಾಳಿ ನಡೆಸಿದೆ. ಬೆಳಗ್ಗಿನಿಂದ ಸಂಜೆಯ ವರೆಗೆ ಸುಭಾಷ್ ಗುತ್ತೇದಾರ್ ಮನೆ, ಅವರಿಗೆ ಸೇರಿದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಡಿವೈಎಸ್ಪಿ ಅಲ್ಸಾನ್ ಬಾಷಾ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಕಲಬುರ್ಗಿಯ ಗುಬ್ಬಿ ಕಾಲೋನಿಯಲ್ಲಿರುವ ಗುತ್ತೇದಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅನ್ನಪೂರ್ಣ ಕ್ರಾಸ್ ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗೂ ದಾಳಿ ನಡೆಸಿದ್ದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಪರಿಶೀಲನೆ ಮಾಡಿ ಬರಿಗೈಲಿ ವಾಪಸಾಗಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಹಣಕಾಸು ವಹಿವಾಟಿನಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ ಮಹಾಂತಗೋಳ್ ಅವರ ನಿವಾಸದ ಮೇಲೂ ಎಸ್ಐಟಿ ದಾಳಿ ನಡೆಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆಗೆ ಮಲ್ಲಿಕಾರ್ಜುನ ಅವರು, ಅಕ್ರಂ ಎಂಬ ವ್ಯಕ್ತಿಗೆ ಡೀಲ್ ಕೊಟ್ಟಿದ್ದರು ಎಂದು ಹೇಳಲಾಗಿದ್ದು ಹೀಗಾಗಿ ಎಸ್ಐಟಿ ಮಲ್ಲಿಕಾರ್ಜುನ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ನಿನ್ನೆಯಷ್ಟೇ ಎಸ್ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಅಕ್ರಂ ಎನ್ನುವಾತನ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿದ್ದವು. ಒಟ್ಟು 15 ಮೊಬೈಲ್ ಫೋನ್, 7 ಲ್ಯಾಪ್ ಟಾಪ್ಗಳನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇಂದು ಎಸ್ಐಟಿ, ಬಿಜೆಪಿ ಮಾಜಿ ಶಾಸಕರ ಮನೆ ಮೇಲೂ ದಾಳಿ ನಡೆಸಿದೆ. ಕಳೆದ ಚುನಾವಣೆ ವೇಳೆ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು.
The Special Investigation Team (SIT) probing the alleged Aland constituency vote scam during the 2023 Karnataka Assembly elections conducted raids on former BJP MLA Subhash Guttedar’s residence and his bar & restaurant in Kalaburagi on Friday.
17-04-26 07:27 pm
HK News Staffer
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ...
16-04-26 10:30 pm
ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾ...
16-04-26 09:43 pm
ಎಸ್ಸೆಸ್ಸೆಲ್ಸಿ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್ ;...
16-04-26 07:37 pm
17-04-26 08:08 pm
HK News Staffer
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
AI ಅವಾಂತರ ; ಗೂಗಲ್ 'ಜೆಮಿನಿ' ಅನ್ನೇ ಹೆಂಡತಿ ಎಂದು...
15-04-26 01:18 pm
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
17-04-26 08:56 pm
HK News Staffer
ಬುರುಡೆ ಗ್ಯಾಂಗ್ ಹೆಸರಿನಲ್ಲಿ ಹಾಸ್ಯ ; ಕಲಾವಿದರಿಗೆ...
17-04-26 03:02 pm
ಬೆಳ್ತಂಗಡಿಯಲ್ಲಿ ಎರಡು ಕಡೆ ಭೂಕಬಳಿಕೆ ; ವೀರೇಂದ್ರ ಹ...
17-04-26 12:33 pm
ಎಚ್ಐವಿ ಪೀಡಿತ ಮಕ್ಕಳ ಬಾಳಿಗೆ ಆಸರೆಯಾದ ಮಂಗಳೂರಿನ ತ...
17-04-26 11:25 am
ಆಟೋದಲ್ಲಿ ಒಡವೆಗಳಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ಮಹಿ...
13-04-26 11:39 pm
17-04-26 06:48 pm
HK News Staffer
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm
ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಮೂರನೇ...
16-04-26 12:35 pm
ಮಂತ್ರಾಲಯ ಬಳಿ ಭೀಕರ ಅಪಘಾತ ; ರಾಯರ ದರ್ಶನಕ್ಕೆ ತೆರಳ...
16-04-26 11:21 am