ಬ್ರೇಕಿಂಗ್ ನ್ಯೂಸ್
31-08-25 05:35 pm HK News Desk ಕರ್ನಾಟಕ
ಮೈಸೂರು, ಆ.31: ನಾಡಹಬ್ಬ ದಸರಾ ಉದ್ಘಾಟನೆ ಬಗ್ಗೆ ಹೈ ಪವರ್ ಕಮಿಟಿಯಲ್ಲಿ ನಾವು ತೀರ್ಮಾನ ಮಾಡಿದ್ದೇವೆ. ಭಾನು ಮುಸ್ತಾಕ್ ಬೂಕರ್ ಪ್ರಶಸ್ತಿ ವಿಜೇತೆ. ಅವರನ್ನು ಆಯ್ಕೆ ಮಾಡಿದ್ದೇವೆ. ನಾಡಹಬ್ಬ ಎಲ್ಲರಿಗೂ ಸೇರಿದ್ದು. ಇಂಥವರೇ ಉದ್ಘಾಟನೆ ಮಾಡಬೇಕು ಅಂತ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿದ್ದಾರೆ.
ದಸರಾ ಎಲ್ಲರ ಹಬ್ಬ. ಮುಸ್ಲಿಂ, ಕ್ರಿಶ್ಚಿಯನ್, ಎಲ್ಲರೂ ಹಬ್ಬ ಆಚರಿಸುತ್ತಾರೆ. ಮಹಾರಾಜರ ಕಾಲದಿಂದಲೂ ಹಬ್ಬ ಆಗ್ತಿದೆ. ಹೈದರಾಲಿ, ಟಿಪ್ಪು ಕಾಲದಲ್ಲೂ ದಸರಾ ಆಗಿದೆ. ಆಗ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದರು. ಆವಾಗಲೂ ದಸರಾ ಆಚರಣೆ ಇತ್ತು. ಚ್ಯುತಿ ಬಂದಿರಲಿಲ್ಲ.
ಬಾನು ಮುಷ್ತಾಕ್ ಬೂಕರ್ ಗೆದ್ದಿದ್ದಾರೆ ಅಂತ ಅವರನ್ನ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದೇವೆ.ಇದನ್ನು ವಿರೋಧ ಮಾಡ್ತಿರೋರಿಗೆ ಇತಿಹಾಸ ಗೊತ್ತಿಲ್ಲ. ಬಿಜೆಪಿಯವರು ಜ್ಯಾತ್ಯಾತೀತವಾಗಿ ಮಾತನಾಡಲ್ಲ. ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ.
ಕನ್ನಡ ತಾಯಿ ಭುವನೇಶ್ವರಿ ಬಗ್ಗೆ ಭಾನು ಮುಷ್ತಾಕ್ ಹೇಳಿಕೆ ನೀಡಿರುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಅವರಿಗೆ ಕನ್ನಡದ ಬಗ್ಗೆ ಪ್ರೀತಿ ಇದೆ, ಯಾರು ಇಲ್ಲ ಅಂದಿದ್ದು. ಅದಕ್ಕಾಗಿಯೇ ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಬಿಜೆಪಿ ಏನೋ ಕುಂಟು ನೆಪ ಹುಡುಕುತ್ತಿದೆ ಅಷ್ಟೇ. ನಾಡಹಬ್ಬ ಉದ್ಘಾಟನೆ ಎಲ್ಲರ ಹಬ್ಬ ಅಂತ ಮಾಡಲಾಗುತ್ತದೆ ಅಷ್ಟೇ ಎಂದರು.
ಬಿಜೆಪಿ- ಜೆಡಿಎಸ್ ಧರ್ಮಸ್ಥಳ ಚಲೋ ನಡೆಸುತ್ತಿರುವ ವಿಚಾರದಲ್ಲಿ, ವೀರೇಂದ್ರ ಹೆಗಡೆ ಅವರೇ ಎಸ್ಐಟಿ ತನಿಖೆ ಸ್ವಾಗತ ಮಾಡಿದ್ದಾರೆ. ಸತ್ಯ ಹೊರಬರಬೇಕು. ಅನುಮಾನದ ತೂಗುಕತ್ತಿ ಹೋಗಲಿ ಅಂತ ಎಸ್.ಐ.ಟಿ ಮಾಡಿದ್ದೇವೆ. ಬಿಜೆಪಿ ಕೂಡ ಸ್ವಾಗತ ಮಾಡಿದೆ. ಈಗ ರಾಜಕೀಯಕ್ಕಾಗಿ ರ್ಯಾಲಿ ಮಾಡುತ್ತಿದ್ದಾರೆ. ಬಿಜೆಪಿಗೆ ಧರ್ಮ ಜಾತಿ ಏನು ಗೊತ್ತಿಲ್ಲ ಎಂದು ಟೀಕಿಸಿದರು.
Chief Minister Siddaramaiah has defended the decision to appoint Booker Prize winner Banumustak as the inaugurator of this year’s Dasara celebrations, saying the festival belongs to everyone and should not be restricted by identity or background.
21-02-26 11:27 am
HK News Desk
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
21-02-26 05:01 pm
HK News Desk
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶರ್ಟ್ ಬಿ...
20-02-26 08:45 pm
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
21-02-26 09:30 pm
Mangalore Correspondent
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
Mangalore, SIT, Sridhar: ಶಿಬಾಜೆ ಶ್ರೀಧರ ಮುಗೇರ...
20-02-26 06:05 pm
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ;...
19-02-26 10:37 pm
21-02-26 05:50 pm
HK News Desk
ಬೆಂಗಳೂರಿನಲ್ಲಿ ಭಯೋತ್ಪಾದಕ ಜಾಲ ; ಎನ್ಐಎ ವಾಂಟೆಡ್ ಲ...
21-02-26 04:29 pm
ಕೊಲೆ- ಆತ್ಮಹತ್ಯೆ-ನಾಪತ್ತೆ ಕತೆ ಕಟ್ಟಿದ್ದ ಮಹಿಳೆ ;...
21-02-26 02:22 pm
Mangalore Police, Safwan Hussain Arrest : ನಟೋ...
20-02-26 10:08 pm
ಲಕ್ಕುಂಡಿ ನಿಧಿ ಹೆಸ್ರಲ್ಲಿ ಜನರಿಗೆ ಟೋಪಿ ; ಹಂಡಿಯೊಳ...
20-02-26 09:07 pm