ಬ್ರೇಕಿಂಗ್ ನ್ಯೂಸ್
21-05-25 01:50 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 21 : ಗೃಹ ಸಚಿವ ಪರಮೇಶ್ವರ್ ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ಇಡಿ) ಶಾಕ್ ನೀಡಿದ್ದಾರೆ. ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನೆಲಮಂಗಳಾದ ಹೆಗ್ಗೆರೆ ಬಳಿಯಿರುವ ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೆಡಿಕಲ್ ಕಾಲೇಜು ಹಾಗೂ ತುಮಕೂರಿನ ಎಸ್ ಎಸ್ ಐಟಿ ಕಾಲೇಜು ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ನೆಲಮಂಗಲದ ಟಿ.ಬೇಗೂರಿನಲ್ಲಿರುವ ಕಾಲೇಜಿನ ಮೇಲೂ ದಾಳಿಯಾಗಿದೆ.

ಇಂದು ಬೆಳಗ್ಗೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ಕಾರುಗಳಲ್ಲಿ ಬಂದ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಎಸ್ಎಸ್ಐಟಿ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳು ಕಾಲೇಜು ಆವರಣದ ಒಳಗೆ ಬಾರದಂತೆ ಡಿವೈಎಸ್ಪಿ ತಾಕೀತು ಮಾಡಿದ್ದಾರೆ.
ಈ ಹಿಂದೆಯೂ, ಅಂದ್ರೆ 2019ರಲ್ಲಿ ಆದಾಯ ತೆರಿಗೆ ಇಲಾಖೆ ಇದೇ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು.
ಪರಮೇಶ್ವರ್ ಅವರಿಗೆ ಕರ್ನಾಟಕ ಪೊಲೀಸ್ ವಸತಿ ನಿಗಮದ ಮಹಾನಿರ್ದೇಶಕರಾಗಿರುವ ಡಾ.ರಾಮಚಂದ್ರರಾವ್ ಆಪ್ತರು. ಅವರ ಪುತ್ರಿ ರನ್ಯಾ ರಾವ್ ಕೆಲ ತಿಂಗಳ ಹಿಂದೆ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ಳು. ಈ ವಹಿವಾಟಿನ ಹಣ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಗೆ ಬಂದಿರಬಹುದಾ ಎನ್ನುವ ಲಿಂಕ್ ಆಧರಿಸಿ ದಾಳಿ ನಡೆಸಿರಬಹುದು ಎಂದು ಪರಮೇಶ್ವರ್ ಅವರ ಆಪ್ತ ಮೂಲಗಳು ತಿಳಿಸಿವೆ.
ಇದಲ್ಲದೇ ಪರಮೇಶ್ವರ್ ಎಚ್ಎಸ್ಎಂ ಎಂಜಿನಿಯರಿಂಗ್ ಕಾಲೇಜನ್ನು ಕೆಲ ದಿನಗಳ ಹಿಂದೆ ಖರೀದಿಸಿದ್ದು. ಇದರ ವಹಿವಾಟು ಏನಾದರೂ ಇರಬಹುದಾ ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ.
The Enforcement Directorate on Wednesday conducted searches at a medical college and an educational institute in Tumakuru, linked to Karnataka Home Minister G Parameshwara, in a money laundering case connected to Kannada film actor Ranya Rao’s gold smuggling case.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm