ಬ್ರೇಕಿಂಗ್ ನ್ಯೂಸ್
01-05-25 01:08 pm HK News Desk ಕರ್ನಾಟಕ
ರಾಮನಗರ, ಮೇ.01: ಡಿಸಿಎಂ ಡಿಕೆ ಶಿವಕುಮಾರ್ ಬ್ರದರ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ಗೆ ಯಾಕೋ ಮಹಿಳೆಯರ ಕಾಟ ಹೆಚ್ಚಿದೆ. ನಾನು ಡಿ.ಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಐಶ್ವರ್ಯಾ ಗೌಡ ಎಂಬಾಕೆ ಕೋಟಿ ಕೋಟಿ ವಂಚಿಸಿದ್ಲು. ಇದೀಗ ನಾನೇ ಡಿಕೆ ಸುರೇಶ್ ಪತ್ನಿ ಅಂತ ಮತ್ತೊಬ್ಬ ಮಹಿಳೆ ಬಂದಿದ್ದಾಳೆ. RMG ಡಿ.ಕೆ.ಸುರೇಶ್ ಹೆಸರು ದುರ್ಬಳಕೆ ಮಾಡಿಕೊಂಡು ಮಹಿಳೆ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಯಾರು ಈ ಆಂಟಿ ?
ಐಶ್ವರ್ಯಾ ಬಳಿಕ ಪವಿತ್ರಾ ಕಾಟ;
ಐಶ್ವರ್ಯಾ ಬಳಿಕ ಪವಿತ್ರಾ ಸರದಿ. ಮಾಜಿ ಸಂಸದ ಡಿ.ಕೆ ಸುರೇಶ್ ನನ್ನ ಗಂಡ ಹಾಗೂ ನಾನು ಅವರ ದೊಡ್ಡ ಅಭಿಮಾನಿ ಅಂತ ಹೇಳಿಕೊಂಡು ಮಹಿಳೆ ವಿಡಿಯೋ ಶುರು ಮಾಡಿದ್ದಾಳೆ. ಫೇಸ್ ಬುಕ್ನಲ್ಲಿ ಮಹಿಳೆ ವಿಡಿಯೋವನ್ನ ಪೋಸ್ಟ್ ಮಾಡಿದ್ದಾಳೆ.
ಇನ್ ಸ್ಟಾಗ್ರಾಮ್ ನಲ್ಲಿ pavithra256 ಎಂಬ ಹೆಸರಿನಲ್ಲಿ ಹಾಗೂ ಫೇಸ್ಬುಕ್ ನಲ್ಲಿ PavithraDksureshDoddalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ ಏಪ್ರಿಲ್ 08 ರಂದು ವಿಡಿಯೋ ಪೋಸ್ಟ್ ಮಾಡಿದ್ದಾಳೆ.
ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರ ಜೊಡಿಸಿ ಎಡಿಟ್ ಮಾಡಿದ ಫೋಟೋವನ್ನು ಸಹ ಹಾಕಿಕೊಂಡಿದ್ದಾರೆ. ಪತಿ ಹೆಸರಿನ ಮುಂದೆ ಡಿ. ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ನಾನು ಮೊದಲು ಡಿ. ಕೆ. ಸುರೇಶ್ ರವರ ಹೆಂಡತಿಯಾಗಿ ಹೇಳಬೇಕಂದರೆ, ನಾನು ಫಸ್ಟ್ ಸರೇಶ್ ಅವರ ಅಭಿಮಾನಿ, ಯಾಕೆಂದರೆ ಅವರು ಮೂರು ಸಲ ಎಂ.ಪಿ. ಆಗಿ ಯಾರು ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.
ಮಹಿಳೆ ವಿರುದ್ಧ ದೂರು ದಾಖಲು
ಸುರೇಶ್ ಅವರ ಪತ್ನಿ ಎಂದು ದುರುದ್ದೇಶದಿಂದ ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ ಎಂದು ವಕೀಲ ಪ್ರದೀಪ್ ಪೊಲೀಸರಿಗೆ ದೂರು ನೀಡಿದರು. ಇದರ ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಮಹಿಳೆಯನ್ನು ಬಂಧಿಸಿದ್ದಾರೆ.
ಕಿರಿಕ್ ರಾಣಿ ಸರ್ಕಾರಿ ಟೀಚರ್ !
ಕನಕಪುರದ ದೊಡ್ಡಾಲಹಳ್ಳಿ ಗ್ರಾಮದ ಈ ಮಹಿಳೆ ಮೈಸೂರಿನಲ್ಲಿ ವಾಸವಾಗಿದ್ರು. ಈ ಮಹಿಳೆ ಅಕ್ಕಪಕ್ಕದವರ ಜೊತೆಗೆ ಗಲಾಟೆ ಮಾಡಿಕೊಂಡಿದ್ದಳು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಈಕೆ ಕಿರಿಕ್ ರಾಣಿ ಅಂತ ಅಕ್ಕಪಕ್ಕದ ನಿವಾಸಿಗಳು ಹೇಳಿದ್ದಾರೆ. ಮಹಿಳೆಯನ್ನು ಬಂಧಿಸಿದ ಪೊಲೀಸರು ಮಂಡ್ಯ ಜೈಲಿಗೆ ಕಳುಹಿಸಿದ್ದಾರೆ. ಸುರೇಶ್ ಅಭಿಮಾನಿ, ನಾನೇ ಅವರ ಹೆಂಡತಿ ಅಂತ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಳು.
A woman has been arrested for impersonating D.K. Suresh's wife in a video that recently went viral on social media. The accused, identified as Pavitra, a government school teacher, had falsely claimed to be the wife of the former Bengaluru Rural MP in a self-recorded video.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 12:23 pm
Mangalore Correspondent
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am