ಬ್ರೇಕಿಂಗ್ ನ್ಯೂಸ್
28-02-25 09:33 pm HK News Desk ಕರ್ನಾಟಕ
ದಾವಣಗೆರೆ, ಫೆ.28 : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಆರೋಗ್ಯ ಮಾತೆ ಚರ್ಚ್‌ನಲ್ಲಿ ಲೆಕ್ಕಪತ್ರ ಸರಿಯಾಗಿಲ್ಲ ಎಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಬಿಷಪ್ ಫ್ರಾನ್ಸಿಸ್ ಸೆರಾವೋ ಎದುರಲ್ಲೇ ಎರಡು ಗುಂಪಿನ ಸದಸ್ಯರು ಮಾರಾಮಾರಿ ನಡೆಸಿದ್ದಾರೆ.
ಚರ್ಚ್ ಆಡಳಿತದ ಲೆಕ್ಕಪತ್ರ ನೀಡಲು ಹಾಗೂ ಅವ್ಯವಸ್ಥೆ ಸರಿಪಡಿಸಲು ಚರ್ಚ್ ಪಾಲನಾ ಪರಿಷತ್ ಸದಸ್ಯರು ಹಾಗೂ ಮುಖಂಡರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಪ್ರಾನ್ಸಿಸ್ ಸೆರಾವೋ ಲೆಕ್ಕಪತ್ರ ಒದಗಿಸಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ಸದಸ್ಯರು ಚರ್ಚ್ ಪಾಲನಾ ಸಭೆಗೆ ಆಗಮಿಸಿದ ಬಿಷಪ್ ಪ್ರಾನ್ಸಿಸ್ಸ್ ಸೆರಾವೋ ಅವರಿಗೆ ಘೇರಾವ್ ಹಾಕಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ಚರ್ಚ್ ಮುಂಭಾಗವೇ ಮಾರಾಮಾರಿ ನಡೆದಿದೆ.
ಕೂಡಲೇ ಹರಿಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಚರ್ಚ್ ಉಸ್ತುವಾರಿ ಸೆರಾವೊ ಅವರಿಗೆ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಹಲವು ಬಾರಿ ಮನವಿ ನೀಡಿದ್ದರೂ ಪರಿಹಾರ ಸಿಗಲಿಲ್ಲ ಎಂದು ಆರೋಪಿಸಿ, ಪಾಲಾನಾ ಸಮಿತಿ ಸದಸ್ಯರು ಅವರಿಗೆ ಘೆರಾವ್ ಹಾಕಿದರು.
ಸ್ಥಳದಲ್ಲಿದ್ದ ಇನ್ನೊಂದು ಗುಂಪಿನ ಸದಸ್ಯರು ಪ್ರತಿಭಟನೆಯನ್ನು ತಡೆಯಲು ಮುಂದಾಗಿದ್ದು ಎರಡೂ ಗುಂಪಿನ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿ ಕೈ ಕೈ ಮಿಲಾಯಿಸಿದರು. ಈ ವೇಳೆ ಆರೋಗ್ಯ ಸ್ವಾಮಿ, ಮುನಿದಾಸ ಸ್ವಾಮಿ, ಜರ್ಸಿ ಕುಮಾರ್, ಕುಮಾರ್ ಅವರು ಗಾಯಗೊಂಡಿದ್ದು, ಹರಿಹರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅವ್ಯವಹಾರ ಆರೋಪಗಳ ಬಗ್ಗೆ ಚರ್ಚಿಸಲು ಮೂರು ದಿನಗಳ ಪಾಲನಾ ಸಮಿತಿ ಸಭೆ ಕರೆಯಲಾಗಿತ್ತು. ಸುದೀರ್ಘ ಚರ್ಚಿಸಲು ಅಲ್ಲಿ ಅವಕಾಶವಿತ್ತು. ಆದರೆ ಕೆಲವರು ಏಕಾಏಕಿ ಈ ರೀತಿ ವರ್ತಿಸಿದ್ದು ಸರಿಯಲ್ಲ. ಇವರ ವರ್ತನೆ ನೋಡಿದರೆ ಸಮಸ್ಯೆ ಬಗೆಹರಿಯುವುದು ಅವರಿಗೆ ಇಷ್ಟವಿದ್ದಂತಿಲ್ಲ ಎನಿಸುತ್ತದೆ. ಆದರೂ ಭಕ್ತರ ಮನಸ್ಸಿನಲ್ಲಿರುವ ಗೊಂದಲಗಳಿಗೆ ಶೀಘ್ರ ಉತ್ತರ ಸಿಗಲಿದೆ’ ಎಂದು ಬಿಷಪ್ ಸೆರಾವೊ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರೋಗ್ಯ ಮಾತೆ ಚರ್ಚ್ ಫಾದರ್ ಕೆ.ಎ.ಜಾರ್ಜ್ ಮಾತನಾಡಿ, ‘ಪಾಲನಾ ಸಮಿತಿ ಸದಸ್ಯರು ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಚರ್ಚ್ ನಿರ್ವಹಣೆ, ಆರ್ಥಿಕ ವಿಚಾರಗಳು, ಪೂಜೆ ಸೇರಿದಂತೆ ಹಲವು ವಿಚಾರಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಸ್ಯೆಗಳಿದ್ದರೆ ಆಯಾ ಸಮಿತಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಕೆಲವರು ಉದ್ದೇಶಪೂರ್ವಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಪಾಲನಾ ಸಮಿತಿಯ ಲಾರೆನ್ಸ್, ಆಗಷ್ಟಿನ್, ಜೋಸೆಫ್ ಕುಮಾರ, ಆರ್.ಎನ್.ಜಾನ್, ಫ್ರಾನ್ಸಿಸ್ ಜೆ., ರಾಜಣ್ಣ, ಅಲ್ಬರ್ಟ್, ಅಂಥೋನಿ ಕ್ರೂಷ್, ವಿನೋದ್ ರಾಜನ್ ಇತರರಿದ್ದರು. ಘಟನೆ ಬಗ್ಗೆ ಎರಡೂ ತಂಡಗಳು ಹರಿಹರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ.
Davanagere, Karnataka, In a shocking turn of events, members of the Catholic community in Davanagere staged a gherao of Shivamogga Bishop Francis Serrao who hails from mangalore, expressing their outrage over alleged financial mismanagement within the church. The incident, which reportedly involved attempts to assault both the bishop and a priest, has sparked widespread concern and condemnation.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm