ಬ್ರೇಕಿಂಗ್ ನ್ಯೂಸ್
26-01-25 10:57 pm HK News Desk ಕರ್ನಾಟಕ
ಬೆಳಗಾವಿ, ಜ.26: 2028ಕ್ಕೆ ನಾನೇ ಸಿಎಂ ಅಭ್ಯರ್ಥಿಯಾಗಲಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ಎಲ್ಲರ ಜವಾಬ್ದಾರಿ. ನಾನು 2028ಕ್ಕೆ ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಆಗುತ್ತೇನೆಂದು ಹೇಳಿಲ್ಲ. ಸಿಎಂ ಮಾಡುವುದು, ಬಿಡುವುದು ಹೈಕಮಾಂಡ್'ಗೆ ಬಿಟ್ಟ ವಿಚಾರ. ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದ್ದೇ ಇದೆ. ಅದರಲ್ಲಿ ನಾನೂ ಪಾಲುದಾರ, ಭಾಗಿದಾರ ಅಷ್ಟೇ ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ವೈಮನಸ್ಸು ಹೊಂದಿದ್ದಾರೆಂಬ ಸುದ್ದಿಗಳ ಕುರಿತು ಮಾತನಾಡಿದ ಅವರು, ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸೇರಿ ಅತ್ಯಂತ ಯಶಸ್ವಿ ಕಾರ್ಯಕ್ರಮ ಮಾಡಿದ್ದೇವೆ. ಮುನಿಸು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಪ್ರಶ್ನೆಗೆ ಹೈಕಮಾಂಡ್ ಉತ್ತರಿಸಬೇಕು. ಅದರ ಬಗ್ಗೆ ಏನನ್ನೂ ಹೇಳುವ ಅಧಿಕಾರ ನನಗಿಲ್ಲ ಎಂದರು. ಬಿಜೆಪಿ ಮುಖಂಡ ಶ್ರೀರಾಮುಲು ಅವರು ಕಾಂಗ್ರೆಸ್‌ಗೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಸ್ವಾಗತವಿದೆ. ನಾನು ಶ್ರೀರಾಮುಲು ಅವರೊಂದಿಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದೇನೆ, ರಾಜಕೀಯವಾಗಿ ಅಲ್ಲ, ಪಕ್ಷಕ್ಕೆ ಸೇರುವುದು ಅವರಿಗೆ ಬಿಟ್ಟದ್ದು, ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆತರಲು ಶಿವಕುಮಾರ್ ಪ್ರಯತ್ನ ನಡೆಸುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
I am going to be the CM candidate for 2028. Minister Satish Jarkiholi has expressed hope that the Congress will come back to power in the state.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm