ಬ್ರೇಕಿಂಗ್ ನ್ಯೂಸ್
23-07-24 01:13 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ.23: ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿದ್ದ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಿಂದ ಪರಿಶಿಷ್ಟ ಸಮುದಾಯದ ಪ್ರಭಾವಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿ ಛಲವಾದಿ ನಾರಾಯಾಣಸ್ವಾಮಿಗೆ ಅಭಿನಂದನೆ ತಿಳಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ಹಾಗೂ ಸಾಂವಿಧಾನಿಕ ಹಕ್ಕುಗಳ ಪರ ನಿರಂತರ ಹೋರಾಟ ನಡೆಸಿಕೊಂಡು ಬಂದ ಛಲವಾದಿ ನಾರಾಯಣ ಸ್ವಾಮಿಯವರ ನಾಯಕತ್ವ ಹಾಗೂ ಪಕ್ಷ ಬದ್ಧತೆಯನ್ನು ಗುರುತಿಸಿ ವಿಧಾನ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ ಬಿಜೆಪಿ ವರಿಷ್ಠರು ಇದೀಗ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಮೂಲಕ 'ಸಾಮಾಜಿಕ ನ್ಯಾಯ' ನಮ್ಮ ಪಕ್ಷದ ಆದ್ಯತೆ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.


ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಇದೀಗ ಪಕ್ಷವು ವಿಪಕ್ಷ ನಾಯಕನ ಸ್ಥಾನಕ್ಕೆ ಛಲವಾದಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದೆ. ಸಿಟಿ ರವಿ ಆ ಸ್ಥಾನಕ್ಕೇರುತ್ತಾರೆಂದು ಹೇಳಲಾಗಿತ್ತು. ಇತ್ತೀಚೆಗೆ ಸಿಟಿ ರವಿ ಪರಿಷತ್ ಸದಸ್ಯರಾದ ಸಂದರ್ಭದಲ್ಲಿ ಅವರೇ ಮೇಲ್ಮನೆ ನಾಯಕ ಸ್ಥಾನಕ್ಕೇರುತ್ತಾರೆಂದು ಬಿಂಬಿತವಾಗಿತ್ತು. ವಿಧಾನಸಭೆ ವಿಪಕ್ಷ ನಾಯಕ ಸ್ಥಾನದಲ್ಲೂ ಒಕ್ಕಲಿಗ ವರ್ಗದ ಆರ್.ಅಶೋಕ್ ಇರುವುದರಿಂದ ಸಿಟಿ ಸೀಟು ತಪ್ಪಿಸಿಕೊಂಡಿದ್ದಾರೆ.
ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತ ಹೊಂದಿದ್ದು ಕಾಂಗ್ರೆಸ್ 35 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ - 25 ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ 8 ಮತ್ತು ಸ್ವತಂತ್ರ ಸದಸ್ಯರನ್ನು ಸೇರಿಸಿದರೆ ಒಟ್ಟು 38 ಸ್ಥಾನಗಳನ್ನು ಹೊಂದಿದೆ.
Chalavadi Narayana Swamy appointed as opposition leader by BJP in the place of Kota Srinivas Poojary.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm