ಬ್ರೇಕಿಂಗ್ ನ್ಯೂಸ್
09-06-24 04:07 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 8: ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಇಂದು ಸಂಜೆ ಕ್ಯಾಬಿನೆಟ್ ಸಚಿವರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದ ನಾಲ್ವರು ಸಂಸದರು ಮೋದಿ ಕ್ಯಾಬಿನೆಟ್ ಸೇರಲಿದ್ದಾರೆ ಎನ್ನಲಾಗುತ್ತಿದೆ. ಎಚ್.ಡಿ ಕುಮಾರಸ್ವಾಮಿ, ಪ್ರಹ್ಲಾದ ಜೋಷಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸಚಿವ ಸಂಪುಟ ಸೇರುವ ನಿರೀಕ್ಷೆಯಿದೆ.
ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ ವಿರುದ್ಧ ಗೆದ್ದಿರುವ ಡಾ.ಮಂಜುನಾಥ್ ಅವರಿಗೂ ಸಚಿವ ಸ್ಥಾನ ನೀಡುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಮಂಜುನಾಥ್ ಹೆಸರು ಸಚಿವ ಸ್ಥಾನದ ಸಂಭಾವ್ಯರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಹುಬ್ಬಳ್ಳಿ ಧಾರವಾಡ ಸಂಸದ ಪ್ರಹ್ಲಾದ ಜೋಷಿ ಕಳೆದ ಬಾರಿಯೂ ಸಂಪುಟ ದರ್ಜೆಯ ಸಚಿವರಾಗಿದ್ದರು. ಈ ಬಾರಿಯೂ ಮತ್ತೆ ಮೋದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆತೆ, ಶೋಭಾ ಕರಂದ್ಲಾಜೆ ಕಳೆದ ಬಾರಿ ಕೃಷಿ ಖಾತೆಯ ರಾಜ್ಯ ಸಚಿವರಾಗಿದ್ದರು. ಈ ಬಾರಿಯೂ ಪ್ರಮುಖ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಎಚ್ಡಿಕೆ ಕೃಷಿ ಖಾತೆಯ ಸಂಪುಟ ದರ್ಜೆಯ ಸಚಿವರಾಗಲಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ನಿಂತು ಸೋಲನುಭವಿಸಿ ಈ ಬಾರಿ ತುಮಕೂರಿನಲ್ಲಿ ನಿಂತು ಗೆದ್ದಿರುವ ವಿ.ಸೋಮಣ್ಣ ಬಂಪರ್ ಗಿಫ್ಟ್ ಪಡೆದಿದ್ದಾರೆ.
ಇಂದು ಬೆಳಗ್ಗೆ ಮೋದಿ, ಅಮಿತ್ ಷಾ ಜೊತೆಗಿನ ಟೀ ಪಾರ್ಟಿಗೆ ಸಚಿವ ಸ್ಥಾನದ ಸಂಭಾವ್ಯರನ್ನು ಕರೆಸಲಾಗಿತ್ತು. ಇದರಲ್ಲಿ ಕರ್ನಾಟಕದ ಈ ಮೇಲಿನ ನಾಲ್ವರು ಸೇರಿದಂತೆ ಬಹುತೇಕ ಮೋದಿ ಸರಕಾರದಲ್ಲಿ ಕಳೆದ ಬಾರಿ ಸಚಿವರಾಗಿದ್ದವರಿಗೆ ಆಹ್ವಾನ ನೀಡಲಾಗಿತ್ತು. ಉಳಿದಂತೆ, ಪ್ರತಿ ರಾಜ್ಯಗಳಿಂದ ಸಚಿವ ಸ್ಥಾನಕ್ಕೆ ಸಂಭಾವ್ಯರನ್ನು ಕರೆಸಲಾಗಿತ್ತು. ಆಂಧ್ರ ಪ್ರದೇಶದಿಂದ ಟಿಡಿಪಿಯ ಮೂವರು, ಬಿಹಾರದ ಜೆಡಿಯುನಿಂದ ಇಬ್ಬರು ಆಹ್ವಾನ ಪಡೆದಿದ್ದರು.
ಸಂಭಾವ್ಯ ಸಚಿವರ ಪಟ್ಟಿ
ಅಮಿತ್ ಷಾ, ಅಶ್ವಿನಿ ವೈಷ್ಣವ್, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಪುರಿ, ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧ್ಯಾ, ಕಿರಣ್ ರಿಜಿಜು, ತಮಿಳುನಾಡಿನ ಅಣ್ಣಾಮಲೈ, ಶೋಭಾ ಕರಂದ್ಲಾಜೆ, ಎಚ್.ಡಿ ಕುಮಾರಸ್ವಾಮಿ, ಕೇರಳದ ಸುರೇಶ್ ಗೋಪಿ, ಜಿತನ್ ರಾಮ್ ಮಾಂಜಿ, ರಾಮನಾಥ್ ಠಾಕೂರ್, ಕಿಶನ್ ರೆಡ್ಡಿ, ಬಂಡಿ ಸಂಜಯ್, ಅರ್ಜುನ್ ರಾಮ್ ಮೇಘವಾಲ್, ಗಿರಿರಾಜ್ ಸಿಂಗ್, ಜಿತಿನ್ ಪ್ರಸಾದ್, ಪಂಕಜ್ ಚೌಧರಿ, ಬಿ.ಎಲ್. ವರ್ಮಾ, ಲಲನ್ ಸಿಂಗ್, ಸರ್ಬಾನಂದ್ ಸೋನೋವಾಲ್, ಚಿರಾಗ್ ಪಾಸ್ವಾನ್, ರಾಮಮೋಹನ್ ನಾಯ್ಡು, ರವನೀತ್ ಸಿಂಗ್, ಚಂದ್ರಶೇಖರ್ ಚೌಧರಿ, ಚಂದ್ರಶೇಖರ್ ಪೆಮ್ಮಸಾನಿ, ಅನುಪ್ರಿಯಾ ಪಟೇಲ್, ಪ್ರತಾಪರಾವ್ ಜಾಧವ್, ಅನ್ನಪೂರ್ಣ ದೇವಿ, ಅನ್ನಪೂರ್ಣ ದೇವಿ, ರಕ್ಷಾ ಖಡ್ಸೆ.
A list of probable names who will likely be inducted to the new Narendra Modi cabinet was out on Sunday. As per the list, the BJP may retain senior leaders Amit Shah, Rajnath Singh, Piyush Goyal, Mansukh Mandaviya, Ashwini Vaishnaw, Kiren Rijiju Jyotiraditya Scindia, Shobha Karandlaje, Arjun Ram Meghwal and G Kishan Reddy.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm