ಬ್ರೇಕಿಂಗ್ ನ್ಯೂಸ್
12-05-24 03:45 pm HK News Desk ಕರ್ನಾಟಕ
ಮಂಡ್ಯ, ಮೇ 12: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರಾಜಕೀಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಬಂಧನವಾಗಿದೆ. ಅದೇ ರೀತಿ ಮಾಜಿ ಸಿಎಂ ಜೆಡಿಎಸ್ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಕೂಡ ಬಂಧನವಾಗುವ ದಿನ ದೂರವಿಲ್ಲ ಎಂದು ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿಯವರ ವೈಯಕ್ತಿಕ ಜೀವನವನ್ನು ಕೆದಕಿದ್ದಾರೆ.

ಮಾಜಿ ಸಿ ಎಂ ಕುಮಾರಸ್ಚಾಮಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು ಬಂದು ದೂರು ನೀಡುವ ಕಾಲ ಹತ್ತಿರ ಬಂದಿದೆ. ಕುಮಾರಸ್ವಾಮಿ ಏನು ಸಾಚಾ ಅಲ್ಲ ಅವರೂ ದೌರ್ಜನ್ಯ ನಡೆಸಿದ್ದಾರೆ. ರಾಧಿಕಾ ಅವರೇನು ಸ್ವಂತ ಹೆಂಡತಿ ರೀತಿ ಟ್ರೀಟ್ ಮಾಡ್ತಾರಾ? ಹಾಗೆಯೇ ಒಂದಷ್ಟು ಜನರು ಬಂದು ದೂರು ನೀಡಬಹುದು. ಒಂದು ಮಗುವನ್ನು ಕೊಟ್ಟು ಈಗ ಅವರನ್ನ ಬೀದಿಗೆ ಬಿಟ್ಟಿದ್ದಾರೆ. ಕುಮಾರಸ್ವಾಮಿಗೂ ಇದೇ ರೀತಿ ತನಿಖೆ ಎದುರಿಸುವ ಸ್ಥಿತಿ ಬರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಾವ ಪುರುಷಾರ್ಥಕ್ಕಾಗಿ ಜೆಡಿಎಸ್ ಅವರು ಪ್ರತಿಭಟನೆ ಮಾಡ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಜೆಡಿಎಸ್ ಪಕ್ಷದವರೂ ಇದ್ದಾರೆ. ಈ ಘಟನೆಗೂ ನಮ್ಮ ಸರ್ಕಾರಕ್ಕೂ ಏನು ಸಂಬಂಧ ಇದೆ. ಸರ್ಕಾರ ಹೋಗಿ ವಿಡಿಯೋ ಮಾಡಿತ್ತಾ? ವಿಡಿಯೋ ಮಾಡಿರೋನು ಪ್ರಜ್ವಲ್, ಪ್ರಜ್ವಲ್ ಯಾರು ಅನ್ನೋದಾದ್ರೆ ಜೆಡಿಎಸ್ ಸಂಸದ, ಜೆಡಿಎಸ್ ಯಾವುದು ಅಂದರೆ ಒಂದು ಕುಟುಂಬಕ್ಕೆ ಸೇರಿದ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪೆನ್ ಡ್ರೈವ್ ಡಿಕೆಶಿ ಹಂಚಿದ್ದಾರೆ ಅನ್ನೊ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮ ಬಳಿ ಇದ್ದಿದ್ದರೆ ಚುನಾವಣೆಗೆ ಮೊದಲೇ ಹಂಚಿ ಇವರು ತಲೆ ಎತ್ತದಂತೆ ಮಾಡುತ್ತಿದ್ದವೋ ಏನೋ? ಇಡೀ ಪ್ರಕರಣವನ್ನ ಹೇಗಾದರೂ ಮಾಡಿ ಮೂಲೆ ಗುಂಪು ಮಾಡಬಹುದು ಎಂದುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸ್ತಿದ್ದಾರೆ.
ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಬೇಕಾದ ನೀವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ಬೆದರಿಸೋದು ಕುಮಾರಸ್ವಾಮಿ ಹುಟ್ಟುಗುಣ, ಸಿಎಂ ಆಗಿ ಅವರು ಹೊಟೇಲ್ ನಲ್ಲಿಯೇ ಇರುತ್ತಿದ್ದರು. ಅಲ್ಲಿ ಏನೇನು ನಡೆದಿದೆಯೋ ಯಾರಿಗೆ ಗೊತ್ತು. ರೇವಣ್ಣರಿಗೆ ಆಗ ಗತಿಯೇ ಕುಮಾರಸ್ವಾಮಿಗೂ ಬರಬಹುದು ಎಂದು ಕಾಂಗ್ರೆಸ್ ಶಾಸಕ ಪರೋಕ್ಷವಾಗಿ ಕುಮಾರಸ್ವಾಮಿ ಜೈಲಿಗೆ ಹೋಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
Congress MLA Kadalur Uday gowda vs Kumaraswamy, says next he will go to jail like revanna. Says he married a young girl Radhika give her baby and ran away, they are may girls who have been sexually assulted, cases will be filed against him. Very soon he will go to jail like his brother Revanna he added.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 11:22 am
HK News Staffer
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm