ಬ್ರೇಕಿಂಗ್ ನ್ಯೂಸ್
02-03-24 12:18 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 02: ಡಿಕೆ ಶಿವಕುಮಾರ್ ಅವರೇ ನೀವು ಬ್ರ್ಯಾಂಡ್ ಬೆಂಗಳೂರು ಮಾಡದಿದ್ರೂ ಪರ್ವಾಗಿಲ್ಲ, ಬಾಂಬ್ ಬೆಂಗಳೂರು ಮಾಡಬೇಡಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಇಡೀ ರಾಜ್ಯ ತಲೆ ತಗ್ಗಿಸುವ ಕೆಲಸ ನಡೆದಿದೆ. ನಾನು ದಯವಿಟ್ಟು ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡುವೆ, ನೀವು ಬ್ರಾಂಡ್ ಬೆಂಗಳೂರು ಮಾಡದಿದ್ದರೂ ಪರ್ವಾಗಿಲ್ಲ, ಆದ್ರೆ ಬಾಂಬ್ ಬೆಂಗಳೂರು ಮಾಡಬೇಡಿ ಎಂದರು.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಮಾಡಿದವರನ್ನು ಮೈ ಬ್ರದರ್ ಅಂದ್ರಿ. ಇದೀಗ ಇನ್ನೊಂದು ಭಯ ನನಗೆ ಆಗ್ತಿದೆ. ಇದೀಗ ಈ ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್ ಮಾಡಿದವರನ್ನ ಎಲ್ಲಿ ಮೈ ಅಂಕಲ್ ಅಂತೀರಾ ಅಂತ ವ್ಯಂಗ್ಯವಾಗಿ ಟೀಕಿಸಿದರು.
ನಾವೆಲ್ಲಾ ಬೆಂಗಳೂರು ಗೌರವಿಸೋ ಜನ. ನಾನು ಆಡಳಿತ ಪಕ್ಷದ ನಾಯಕರಲ್ಲಿ, ಸದಸ್ಯರಲ್ಲಿ ವಿನಂತಿ ಮಾಡ್ತೀನಿ. ತಮ್ಮ ಮನಸ್ಥಿತಿ ಬದಲು ಮಾಡಿಕೊಳ್ಳಿ. ಈ ಮನಸ್ಥಿತಿಗೆ ಕಾರಣ ಏನು.? ಮಂಗಳೂರು, ಬೀದರ್, ಕಲ್ಬುರ್ಗಿ, ವಿಧಾನಸೌಧದ ವರೆಗೂ ಮಾಡಿದ್ದೀರಿ. ನೀವೇನಾದ್ರೂ ಮಾಡಿ ಆದರೆ, ನಮಗೆ ಓಟ್ ಹಾಕಿ, ನಿಮ್ಮ ರಕ್ಷಣೆ ಮಾಡ್ತೀನಿ ಅನ್ನೋ ನಿಲುವು ಕಾಂಗ್ರೆಸ್ ಪಕ್ಷದ್ದು ಎಂದು ಕಿಡಿಕಾರಿದರು.
ರಾಮೇಶ್ವರ ಕೆಫೆ ಬಳಿ ಇರೋದು ಎಲ್ಲಾ ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು. ಅರ್ಥ ಮಾಡಿಕೊಳ್ಳಿ ಇದು ಯಾವ ಘಟನೆ ಅಂತ. ಬೆಂಗಳೂರಿಗೆ ಬರುವ ಹೂಡಿಕೆ ಕಡಿಮೆ ಆಗಬೇಕು. ಇಲ್ಲಿರೋ ಕಂಪನಿಗಳಿಗೆ ಭದ್ರತೆ ಇಲ್ಲ ಅನ್ನೋದು ಗೊತ್ತಾಗಬೇಕು ಎಂಬ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಿದರು.
R Ashok slams DCM Dk Shivakumar over Cafe Blast in Bangalore. Says he called the mangalore cooker blast terror as brother and now will he call the rameshwaram cafe blast accused as uncle he ridiculed.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 08:26 pm
HK News Staffer
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am