ಬ್ರೇಕಿಂಗ್ ನ್ಯೂಸ್
30-08-23 03:15 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 30: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಡರಾತ್ರಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ, ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ದಕ್ಕಿದ್ದಂತೆ ಸುಸ್ತು ಮತ್ತು ವೀಕ್ನೆಸ್ ಕಾಣಿಸಿಕೊಂಡ ಹಿನ್ನೆಲೆ ನಸುಕಿನ ಜಾವ 3.40ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕುಮಾರಸ್ವಾಮಿ ಅವರ ಆರೋಗ್ಯ ಕುರಿತಾಗಿ ಜಯನಗರದ ಅಪೋಲೊ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಡಾಕ್ಟರ್ ಪಿ.ಸತೀಶ್ ಚಂದ್ರ & ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಜೊತೆಗೆ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಲಾಗುತ್ತಿದೆ ಎಂದು ವೈದ್ಯರ ತಂಡ ಹೇಳಿದೆ.
ಎಚ್.ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಜೊತೆಗೆ ನಿಂತಿದ್ದಾರೆ. ಇದರ ಬೆನ್ನಲ್ಲೇ ಮಗನ ಆರೋಗ್ಯ ವಿಚಾರಿಸಲು ದೇವೆಗೌಡರು ಆಸ್ಪತ್ರೆಗೆ ಆಗಮಿಸಿದ್ದಾರೆ. ವೀಕ್ನೆಸ್ ಮತ್ತು ಸುಸ್ತಾಗಿ ಕುಮಾರಸ್ವಾಮಿ ಬಳಲುತ್ತಿದ್ದರು. ಚಿಕಿತ್ಸೆ ಕೊಡಲಾಗಿದ್ದು, ಚಿಕಿತ್ಸೆಗೆ ಸಕಾರಾತ್ಮಕ ವಾಗಿ ಸ್ಪಂದಿಸುತ್ತಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಚೇತರಿಕೆ ಕಂಡಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರಾದ ಡಾ. ಪಿ. ಸತೀಶ್ ಚಂದ್ರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಕುಮಾರಸ್ವಾಮಿಗೆ ಆಯಾಸದಿಂದಾಗಿ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಸಣ್ಣ ಪ್ರಮಾಣದಲ್ಲಿ ಲಂಗ್ಸ್ ಇನ್ಫೆಕ್ಷನ್ ಹಾಗೂ ಡಸ್ಟ್ ಅಲರ್ಜಿ ಇರುವುದು ತಿಳಿದುಬಂದಿತ್ತು. ಆಗ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚುನಾವಣೆ ಫಲಿತಾಂಶದ ನಂತರ ವಿಶ್ರಾಂತಿಗಾಗಿ ಕುಟುಂಬದ ಜೊತೆಗೆ ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ತೆರಳಿದ್ದರು.
Former Chief Minister and senior JD(S) leader H.D. Kumaraswamy got admitted to a private hospital on Wednesday morning after he complained of fever. Sources close to him said that Kumaraswamy developed fever and fatigue due to hectic activity in the last week.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
21-04-26 02:36 pm
HK News Staffer
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
21-04-26 12:44 pm
HK News Staffer
ಬೀದರ್ ; ಬಿರು ಬಿಸಿಲಿನ ಝಳಕ್ಕೆ 20 ವರ್ಷದ ಯುವಕ ಕ...
20-04-26 09:35 pm
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm