ಬ್ರೇಕಿಂಗ್ ನ್ಯೂಸ್
25-02-21 04:14 pm Headline Karnataka News Network ಕ್ರೈಂ
ಹೈದರಾಬಾದ್, ಫೆ.25: ಹದಿಹರೆಯದ ಕೆಲವು ಯುವತಿಯರ ಹುಚ್ಚಾಟ ಕೊನೆಗೆ ಏನೆಲ್ಲಾ ದುರಂತಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ಈಕೆಯ ನೈಜಕತೆ ನಿದರ್ಶನ. ಆಕೆ 19 ವರ್ಷದ ಫಾರ್ಮಸಿ ಕಲಿಯುತ್ತಿದ್ದ ಸ್ಟೂಡೆಂಟ್. ಫೆಬ್ರವರಿ ತಿಂಗಳ ಆರಂಭದಲ್ಲಿ ತನ್ನ ಮೇಲೆ ಆಟೋ ಚಾಲಕರು ಕಿಡ್ನಾಪ್ ಮಾಡಿ, ಗ್ಯಾಂಗ್ ರೇಪ್ ಮಾಡಿದ್ದಾರೆಂದು ಪೊಲೀಸ್ ದೂರು ನೀಡಿ ಸುದ್ದಿಯಾಗಿದ್ದಳು. ಪೊಲೀಸರ ವಿಚಾರಣೆ ಬಳಿಕ ಆಕೆಯ ಆರೋಪ ಸುಳ್ಳೆಂದು ಸಾಬೀತಾಗಿ, ಒಟ್ಟು ಪ್ರಕರಣ ಕಟ್ಟುಕತೆಯೆಂದು ಭಾರೀ ಪ್ರಚಾರ ಪಡೆದಿತ್ತು. ಆದರೆ, ತನ್ನ ಕುಚೇಷ್ಟೆಯಿಂದಾಗಿ ಪ್ರಚಾರ ಪಡೆದಿದ್ದ ಹದಿಹರೆಯದ ಯುವತಿ ಈಗ ಅಚಾನಕ್ಕಾಗಿ ಸಾವು ಕಂಡಿದ್ದಾಳೆ.
ಹೌದು... ಯುವತಿ ಬುಧವಾರ ಬೆಳಗ್ಗೆ ತನ್ನ ಮಲ್ಕಜ್ ಗಿರಿಯ ಘಾಟ್ ಕೇಸರ್ ನಲ್ಲಿರುವ ಮನೆಯಲ್ಲಿ ಅರೆ ಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿ ಕಂಡುಬಂದಿದ್ದಳು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ, ಅಪರಿಮಿತ ಮಾತ್ರೆಗಳನ್ನು ನುಂಗಿದ್ದ ಕಾರಣಕ್ಕೆ ಆಸ್ಪತ್ರೆಯಲ್ಲಿ ಚೇತರಿಕೆ ಕಾಣದೆ ಸಾವು ಕಂಡಿದ್ದಾಳೆ.
ಮನೆಯಲ್ಲಿ ಯಾವುದೇ ಸುಸೈಟ್ ನೋಟ್ ಪತ್ತೆಯಾಗಿಲ್ಲ. ಮನೆಯವರ ಪ್ರಕಾರ, ಆಕೆ ತೀವ್ರ ಖಿನ್ನತೆ ಅನುಭವಿಸುತ್ತಿದ್ದಳು. ಕಾಲೇಜಿಗೂ ಹೋಗುತ್ತಿರಲಿಲ್ಲ. ಕೊಠಡಿಯ ಒಳಗೇ ಇರುತ್ತಿದ್ದಳಂತೆ. ಕುಟುಂಬಸ್ಥರು ಮತ್ತು ಆಕೆಯ ಸಹಪಾಠಿಗಳನ್ನು ಪ್ರಶ್ನೆ ಮಾಡುತ್ತಿದ್ದೇವೆ. ವಿಷ್ಯ ಏನಾಗಿತ್ತು ಎಂದು ತಪಾಸಣೆ ಮಾಡುತ್ತಿದ್ದೇವೆ ಎಂದು ಘಾಟ್ ಕೇಸರ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಎನ್.ಚಂದ್ರಬಾಬು ಹೇಳಿದ್ದಾರೆ.
ಯುವತಿಯ ನಿಕಟವರ್ತಿಯ ಪ್ರಕಾರ, ತಿಂಗಳ ಹಿಂದಿನ ಘಟನೆಯ ಬಳಿಕ ಆಕೆ ತುಂಬ ನೊಂದಿದ್ದಳು. ತೀವ್ರವಾಗಿ ಖಿನ್ನತೆ ಅನುಭವಿಸುತ್ತಿದ್ದಳು. ಮನೆಯಲ್ಲಿ ಹೆತ್ತವರ ಜೊತೆ ಜಗಳ ಮಾಡಿ, ಮನೆಯಿಂದ ಓಡಿಹೋಗಲು ಪ್ರಯತ್ನಿಸಿದ್ದಳು. ಇತ್ತೀಚೆಗೆ ಪೊಲೀಸರು ಆಕೆಯ ರೇಪ್ ಕಟ್ಟುಕತೆಯನ್ನು ಹೊರಗೆಳೆದ ಬಳಿಕ ಸಹಪಾಠಿಗಳಿಂದ ಟೀಕೆ ಎದುರಿಸಿದ್ದಳು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೀಟಲೆ ಮಾಡಿದ್ದು ಕಾಲೇಜಿಗೆ ಹೋಗದಂತಾಗಿತ್ತು. ಹರೆಯದ ಯುವತಿ ನೆಗೆಟಿವ್ ಪಬ್ಲಿಸಿಟಿಗೆ ಹೋಗಿದ್ದು ಮನೆಯವರು ತಿರುಗಿ ಬೀಳುವಂತಾಗಿತ್ತು. ಇದೇ ಕಾರಣಕ್ಕೆ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ.
ಕಳೆದ ಫೆ.10ರಂದು ಹೈದರಬಾದ್ ಹೊರವಲಯದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಯುವತಿ ಕಂಡುಬಂದಿದ್ದಳು. ಮನೆಯವರು ಆಕೆಯ ಗೆಳೆಯರು ಮತ್ತು ಆಟೋ ಚಾಲಕನ ವಿರುದ್ಧ ಕಿಡ್ನಾಪ್ ಕೇಸು ದಾಖಲಿಸಿದ್ದರು. ಮರುದಿನ ಆಕೆ, ತನ್ನ ಮೇಲೆ ರೇಪ್ ಆಗಿರುವ ಬಗ್ಗೆ ಹೇಳಿಕೊಂಡಿದ್ದರಿಂದ ಹೆಚ್ಚುವರಿಯಾಗಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಆಟೋ ಚಾಲಕ ಮತ್ತು ಸ್ಥಳೀಯ ಯುವಕರನ್ನು ಬಂಧಿಸಿ ಡ್ರಿಲ್ಲಿಂಗ್ ಮಾಡಿದ್ದರು. ಆದರೆ, ನೈಜ ವಿಚಾರ ಹೊರಬರದ ಕಾರಣ ಘಟನೆ ನಡೆದಿದೆ ಎನ್ನಲಾದ ಪ್ರದೇಶದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬೇರೆ ಬೇರೆ ಕಡೆಯ ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿದಾಗ, ಯುವತಿ ಎರಡು ಆಟೋಗಳನ್ನು ಬದಲಾಯಿಸಿ ನಡೆದು ಹೋಗುತ್ತಿರುವುದು ಪತ್ತೆಯಾಗಿತ್ತು. ಹೀಗಾಗಿ ಆರೋಪಿಗಳು ಮತ್ತು ಯುವತಿಯನ್ನು ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಆಕೆಯ ಕಾಲ್ ಡಿಟೈಲ್ಸ್ ಮತ್ತು ಆರೋಪಿಗಳ ಫೋನ್ ಕರೆಯ ಮಾಹಿತಿಗಳನ್ನು ಆಧರಿಸಿ ತನಿಖೆ ನಡೆಸಿದ್ದಾರೆ. ಯುವತಿಯನ್ನು ಮೂರನೇ ಬಾರಿಗೆ ವಿಚಾರಣೆ ನಡೆಸಿದಾಗ, ಮೊದಲು ನೀಡಿದ್ದ ಹೇಳಿಕೆಗೂ ಆನಂತರ ನೀಡಿದ ಹೇಳಿಕೆಗೂ ತಾಳೆಯಾಗದ ಕಾರಣ ಪೊಲೀಸರಿಗೆ ಸಂಶಯ ಬಂದಿದೆ. ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ಇಡೀ ಪ್ರಕರಣ ಕಟ್ಟುಕತೆಯೆಂದು ಒಪ್ಪಿಕೊಂಡಿದ್ದಳು. ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸಲು ಮತ್ತು ಆಟೋ ಚಾಲಕನ ಬಗ್ಗೆ ಹಳೆ ರಿವೇಂಜ್ ಇದ್ದುದರಿಂದ ಈ ರೀತಿ ಹೇಳಿದ್ದೆ ಎಂದು ಹೇಳಿಕೆ ನೀಡಿದ್ದಳು.
ತನಿಖೆ ನಡೆಸಿದ ರಾಚಕೊಂಡ ಠಾಣೆ ಪೊಲೀಸರು, ಹೈದರಾಬಾದ್ ನಲ್ಲಿ ಸಂಚಲನ ಮೂಡಿಸಿದ್ದ ಕಿಡ್ನಾಪ್ ಮತ್ತು ಗ್ಯಾಂಗ್ ರೇಪ್ ಕೇಸ್ ಕಟ್ಟುಕತೆ ಎಂದು ಮಾಧ್ಯಮಕ್ಕೆ ಹೇಳುತ್ತಿದ್ದಂತೆ ಇಡೀ ಪ್ರಕರಣ ಯುವತಿಯನ್ನು ಅಪರಾಧಿಯನ್ನಾಗಿಸಿತ್ತು. ಅಲ್ಲದೆ, ಸಮಾಜದ ವಿವಿಧ ಸ್ತರದಲ್ಲಿ ಸಂಬಂಧಿಕರು, ಕಾಲೇಜು ಸಹಪಾಠಿಗಳು, ಇತರೇ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಆಕೆಯನ್ನು ನೋಡುವ ದೃಷ್ಟಿ ಬದಲಾಗಿತ್ತು. ಇದರಿಂದಾಗಿ ತೀವ್ರ ನೊಂದುಕೊಂಡಿದ್ದ ಹರೆಯದ ಯುವತಿ ಈಗ ದುರಂತ ಸಾವಿಗೆ ಶರಣಾಗಿದ್ದಾಳೆ. ಹರೆಯದ ಮನಸ್ಸಿನ ಹುಚ್ಚಾಟ ಆಕೆಯ ಪ್ರಾಣವನ್ನೇ ಕಿತ್ತುಕೊಂಡಿದೆ.
Two weeks after the Rachakonda police debunked the alleged kidnap and rape attempt on the Hyderabad outskirts, the 19-year-old pharmacy student who weaved up the false story died by suicide this morning, police said.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am