ಬ್ರೇಕಿಂಗ್ ನ್ಯೂಸ್
29-03-24 05:09 pm Bangalore Correspondent ಕ್ರೈಂ
ಬೆಂಗಳೂರು, ಮಾ.29: ಕೋವಿಡ್ ಸಮಯದಲ್ಲಿ ಕೆಲಸ ಕಳಕೊಂಡಿದ್ದ ಐಟಿ ಉದ್ಯೋಗಿ ಯುವತಿಯೊಬ್ಬಳು ಲ್ಯಾಪ್ ಟಾಪ್ ಕಳವುಗೈಯುವುದನ್ನೇ ವೃತ್ತಿಯಾಗಿಸ್ಕೊಂಡು ನಾಲ್ಕು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ದೆಹಲಿಯ ನೋಯ್ಡಾ ಮೂಲದ ಜೆಸ್ಸಿ ಅಗರ್ವಾಲ್ ಎಂಬ ಹೆಸರಿನ ಯುವತಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಳು. ಕೋವಿಡ್ ಸಮಯದಲ್ಲಿ ಕಂಪನಿ ಉದ್ಯೋಗಿಗಳನ್ನು ಕಡಿತ ಮಾಡಿದ್ದರಿಂದ ಜೆಸ್ಸಿ ಕೆಲಸ ಕಳಕೊಂಡಿದ್ದಳು. ಬೆಂಗಳೂರಿನ ಪೇಯಿಂಗ್ ಗೆಸ್ಟ್ ನಲ್ಲಿ ಇರುತ್ತಿದ್ದ ಯುವತಿ ಅಲ್ಲಿಂದಲೇ ಚಾರ್ಜಿಂಗ್ ಹಾಕಿಡುತ್ತಿದ್ದ ಲ್ಯಾಪ್ ಟಾಪ್ ಗಳನ್ನು ಕದಿಯುತ್ತಿದ್ದಳು. ಬಳಿಕ ನೋಯ್ಡಾಕ್ಕೆ ಕೊಂಡೊಯ್ದು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರುತ್ತಿದ್ದಳು.

ಇತ್ತೀಚೆಗೆ ಪಿಜಿಯಲ್ಲಿ ಲ್ಯಾಪ್ ಟಾಪ್ ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದಾಗ ಹಲವಾರು ಲ್ಯಾಪ್ ಟಾಪ್ ಕಳವಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರು ಅಲ್ಲಿನ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಯುವತಿಯೊಬ್ಬಳು ಅಲ್ಲಿಗೆ ಬಂದು ಹೋಗುತ್ತಿದ್ದುದು ದಾಖಲಾಗಿತ್ತು. ಇದೇ ಯುವತಿ ಬೇರೆ ಕಡೆ ಪಿಜಿಗಳಿಗೂ ಖಾಲಿ ಇರುತ್ತಿದ್ದಾಗ ಎಂಟ್ರಿ ಕೊಡುತ್ತಿದ್ದಳು. ಸ್ನಾನ ಮಾಡುತ್ತಿದ್ದಾಗಲೋ, ಹೊರಗೆಲ್ಲಾದರೂ ಹೋಗುತ್ತಿದ್ದ ವೇಳೆ ಚಾರ್ಜ್ ಹಾಕಿರುತ್ತಿದ್ದ ಲ್ಯಾಪ್ ಟಾಪ್, ಗಾಜೆಟ್ಸ್ ಗಳನ್ನು ಎಗರಿಸುತ್ತಿದ್ದಳು.
ಪೊಲೀಸರು ಮಾರ್ಚ್ 26ರಂದು ಯುವತಿಯನ್ನು ಬಂಧಿಸಿದ್ದು, ಆಕೆಯ ಬಳಿಯಿದ್ದ 10ರಿಂದ 15 ಲಕ್ಷ ಮೌಲ್ಯದ 24 ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ಆಕೆ ಇರುತ್ತಿದ್ದ ಏರಿಯಾದಲ್ಲಿ ಹಲವು ಕಡೆಗಳಲ್ಲಿ ಕಳವು ಮಾಡಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A 26-year-old woman, a B.Tech graduate from Noida, was arrested by HAL police for allegedly stealing 24 laptops valued at ₹10 lakh from paying guest (PG) accommodations and software companies in Bengaluru. After an individual living in the PG complained about the lost valuables, the HAL police tracked down the accused using CCTV camera footage and other evidence. On March 26, they arrested Jassi Agarwal, a resident of Noida, as per reports.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm