ಬ್ರೇಕಿಂಗ್ ನ್ಯೂಸ್
08-04-23 07:37 pm Mangaluru correspondent ಕ್ರೈಂ
ಉಳ್ಳಾಲ, ಎ.8: ರಾ.ಹೆ. 66ರ ಕೋಟೆಕಾರಿನಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವುಗೈದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಕಳವಾಗಿದ್ದ ಪಿಕಪ್ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ.
ಕೇರಳ ರಾಜ್ಯದ ಮೇಲ್ಪರಂಬ ಮಾಂಗಾಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ ಆರೋಪಿ. ಜನವರಿ 3 ರಂದು ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವು ನಡೆದಿತ್ತು. ಈ ಕುರಿತು ವಾಹನ ಮಾಲೀಕ ಮಹಮ್ಮದ್ ಶರೀಫ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಅಂತರಾಜ್ಯ ವಾಹನ ಕಳ್ಳರ ಜಾಡು ಹಿಡಿದಾಗ, ಆರೋಪಿ ರಮ್ಸಾನ್ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಪಿಕಪ್ ವಾಹನ ಕಳವು ಬೆಳಕಿಗೆ ಬಂದಿದೆ.

ಆರೋಪಿ ವಿರುದ್ಧ ಉಳ್ಳಾಲ, ಬೆಳ್ತಂಗಡಿ, ಮಡಿಕೇರಿ, ಕೇರಳದ ಹೊಸದುರ್ಗ, ಕಾಸರಗೋಡು, ಕುಂಬಳೆ, ಬೇಡಗಂ, ಬೇಕಲ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ಇವೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಪಿಎಸ್ಐಗಳಾದ ಮಂಜೇಶ್ವರ ಚಂದಾವರ, ಕೃಷ್ಣ ಕೆ.ಹೆಚ್, ಸಂತೋಷ್,ಎಎಸ್ ಐಗಳಾದ ಶೇಖರ ಗಟ್ಟಿ, ರಿಜು, ಹೆಚ್.ಸಿಗಳಾದ ಪ್ರವೀಣ್ ಶೆಟ್ಟಿ, ಪಿಸಿಗಳಾದ ಅಶೋಕ್,ವಾಸುದೇವ ಚೌಹಾಣ್ ಭಾಗಿಯಾಗಿದ್ದರು.
Pickup van robbery at Kotekar in Mangalore, inter state accused arrested by Ullal police
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 06:55 pm
HK News Staffer
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am