ಬ್ರೇಕಿಂಗ್ ನ್ಯೂಸ್
19-11-22 12:56 pm Mangalore Correspondent ಕ್ರೈಂ
ಉಳ್ಳಾಲ, ನ.19 : ದ್ವಿಚಕ್ರ ವಾಹನ ಸವಾರರನ್ನ ತಡೆದು ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡಿನಿಂದ ಹಲ್ಲೆಗೈದ ದುಷ್ಕರ್ಮಿಗಳ ತಂಡ ಏಕಕಾಲದಲ್ಲಿ ಎರಡು ಸ್ಕೂಟರ್ ದರೋಡೆಗೈದ ಘಟನೆ ರಾ.ಹೆ. 66ರ ಅಂಬಿಕಾರೋಡ್ ಮತ್ತು ಉಚ್ಚಿಲ ಎಂಬಲ್ಲಿ ನಡೆದಿದೆ.
ಗುರುವಾರ ರಾತ್ರಿ 11.10 ರ ಸಮಯದಲ್ಲಿ ತಲಪಾಡಿ, ನಾರ್ಲಗುತ್ತು ನಿವಾಸಿ ಹರ್ಷಿತ್ ಎಂಬವರು ಔಷಧಿ ಖರೀದಿಸಲು ತನ್ನ ಆ್ಯಕ್ಸಸ್ 125 ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಉಚ್ಚಿಲ ಬಸ್ ಸ್ಟಾಪ್ ಬಳಿಯಲ್ಲಿದ್ದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈ ಸನ್ನೆ ಮಾಡಿ ತಡೆದಿದ್ದಾರೆ. ಮೂವರು ಅಪರಿಚಿತರು ಹರ್ಷಿತ್ ಗೆ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ, ಓರ್ವನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಎಡಭುಜಕ್ಕೆ ಹೊಡೆದು ಗಾಯಗೊಳಿಸಿ ಸ್ಕೂಟರನ್ನ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಅದೇ ದಿನ ರಾತ್ರಿ 11.30 ರ ವೇಳೆ ಮಂಜೇಶ್ವರ ನಿವಾಸಿ ಪ್ರಫುಲ್ ರಾಜ್ ಎಂಬವರು ಕುತ್ತಾರು ,ಪಂಡಿತ್ ಹೌಸ್ನ ತನ್ನ ಅಜ್ಜಿ ಮನೆಗೆ ಟಿವಿಎಸ್ ಟಾರ್ಕ್ ಸ್ಕೂಟರಲ್ಲಿ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದ ಬಳಿ 3 ಜನ ಆಗಂತುಕರು ತಡೆದಿದ್ದಾರೆ. ಆಗಂತುಕರು ಪ್ರಪುಲ್ ರಾಜನ್ನ ಉದ್ದೇಶಿಸಿ ಅರೆ ಸಾಲೆ, ರುಕ್ ರುಕ್ ಎಂದು ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಹಲ್ಲೆ ನಡೆಸಿದ್ದಾರೆ. ಆರೋಪಿಗಳ ಪೈಕಿ ಒಬ್ಬಾತ ಕಬ್ಬಿಣದ ಸರಳಿನಿಂದ ಪ್ರಪುಲ್ ಅವರ ಎಡಭುಜಕ್ಕೆ ಹೊಡೆದು ಹಲ್ಲೆ ನಡೆಸಿ ಸ್ಕೂಟರನ್ನ ದರೋಡೆಗೈದಿದ್ದಾರೆ. ದರೋಡೆಯಿಂದ ಗಾಯಗೊಂಡ ಹರ್ಷಿತ್ ಮತ್ತು ಪ್ರಫುಲ್ ರಾಜ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಅವರ ದೂರಿನ ಮೇರೆಗೆ ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
2 two Wheeler's stolen after attacking men with iron rod and abusing them at NH 66 in Uchila Mangalore.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
29-08-25 10:54 pm
Mangalore Correspondent
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
Mahesh Shetty Thimarodi, SIT, Mangalore: ಬೆಳ್...
29-08-25 03:48 pm
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm