ಬ್ರೇಕಿಂಗ್ ನ್ಯೂಸ್
10-08-22 09:27 pm HK News Desk ಕ್ರೈಂ
ಮೂಡುಬಿದ್ರೆ, ಆಗಸ್ಟ್ 10: ಮೂರು ಹಸುಗಳನ್ನು ಟೆಂಪೋದಲ್ಲಿ ಅಕ್ರಮವಾಗಿ ಒಯ್ಯುತ್ತಿದ್ದ ಇಬ್ಬರನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಶೆಟ್ಟಿ ಮತ್ತು ಪ್ರಣೀತ್ ಎಂಬ ಇಬ್ಬರು ಬಂಧಿತರು.
ವಿದ್ಯಾಗಿರಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಮಧ್ಯಾಹ್ನ ಹೊತ್ತಿಗೆ ಮೂರು ಹಸುಗಳನ್ನು ಟೆಂಪೋದಲ್ಲಿ ಸಾಗಿಸುತ್ತಿದ್ದರು. ಈಗಿನ ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಹಸುವನ್ನು ಸಾಗಿಸುವುದಕ್ಕೂ ಪರ್ಮಿಟ್ ಪಡೆದಿರಬೇಕು. ಇವರು ಯಾವುದೇ ಪರ್ಮಿಟ್ ಹೊಂದಿಲ್ಲದೆ ಹಸುವನ್ನು ಸಾಗಿಸುತ್ತಿದ್ದರು. ಎಲ್ಲಿ ತಗೊಂಡು ಹೋಗ್ತಾ ಇದ್ದೀರಿ ಅನ್ನುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ಹಾಗಾಗಿ ಟೆಂಪೋದಲ್ಲಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಮತ್ತು ಪ್ರಣೀತ್ ಇಬ್ಬರು ಕೂಡ ಮೂಡುಬಿದ್ರೆ ನಗರ ವ್ಯಾಪ್ತಿಯ ಲಾಡಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದ ವೇಳೆ, ಹಸುಗಳನ್ನು ಬೇರೆಯವರಿಗೆ ಮಾರುವುದಕ್ಕೆ ಒಯ್ಯುತ್ತಿದ್ದರು ಅನ್ನುವ ಮಾಹಿತಿಯನ್ನು ಯುವಕರು ನೀಡಿದ್ದಾರೆ. ಯಾರಿಗೆ ಮಾರುವುದಕ್ಕೆ ಎಂದು ಕೇಳಿದ್ದಕ್ಕೆ ಸರಿಯಾಗಿ ಉತ್ತರ ನೀಡಿಲ್ಲ. ಮೇಲ್ನೋಟಕ್ಕೆ ಗೋಮಾಂಸ ಮಾಡುವ ಮಂದಿಗೆ ಇವರೇ ಹಸುಗಳನ್ನು ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಆಲಂಗಾರಿನ ನವೀನ್ ಎಂಬವರಿಂದ ಮೂರು ಹಸುಗಳನ್ನು ಖರೀದಿಸಿ ತಂದಿದ್ದು, ಗೋ ಹಂತಕರಿಗೆ ಇವರೇ ಸರಬರಾಜು ಮಾಡುತ್ತಿದ್ದರು ಅನ್ನುವ ಅನುಮಾನ ಪೊಲೀಸರದ್ದು. ಬಂಧಿತ ಯುವಕರು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡವರಲ್ಲ ಎಂದು ಪೊಲೀಸರು ಹೇಳುತ್ತಾರೆ.
ಸಾಮಾನ್ಯವಾಗಿ ಗೋವನ್ನು ಹತ್ಯೆ ಮಾಡುವುದಕ್ಕೆ ಹಿಂದು ಸಂಘಟನೆಗಳ ಪ್ರಬಲ ವಿರೋಧ ಇದೆ. ಇಲ್ಲಿ ಹಿಂದು ಯುವಕರೇ ಗೋವನ್ನು ಕಸಾಯಿಗಳಿಗೆ ಮಾರಾಟಕ್ಕೆ ಒಯ್ಯುತ್ತಿದ್ದರು ಅನ್ನೋದು ಕಂಡುಬಂದಿದೆ. ಹಗಲಿನಲ್ಲಿ ಸಾಗಿಸಿದರೆ ಯಾರು ಕೂಡ ಸಂಶಯ ಪಡಲ್ಲ ಎಂದು ಗೋವನ್ನು ರಾಜಾರೋಷವಾಗಿಯೇ ಸಾಗಿಸುತ್ತಿದ್ದರು. ಆದರೆ ಈಗಿನ ನಿಯಮದ ಪ್ರಕಾರ, ಪೊಲೀಸರು ಚೆಕ್ ಪೋಸ್ಟ್ ಹಾಕಿ ತಪಾಸಣೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ.
A police team comprising SI Siddappa, ASI Kumar and others seized a pickup van near the Vidyagiri Junction at Moodbidri on Tuesday August 9 and found them to be illegally transporting three cows on conducting a search of the vehicle. On police interrogation, it was also found that the accused had reportedly bought the cows at a low price from Alangar Naveen's farm to convert it into beef and were in the process of handing it over to someone at Kaikamba.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am